ಹಗರಿಬೊಮ್ಮನಹಳ್ಳಿ: ಐತಿಹಾಸಿಕ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ಅಗತ್ಯ: ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ 08: ಗ್ರಾಮೀಣ ಕ್ರೀಡೆಗಳಲ್ಲಿ ಮಾನ್ಯತೆ ಪಡೆದ ಟಗರಿನ ಕಾಳಗವೂ ಐತಿಹಾಸಿಕ ಕ್ರೀಡೆಯಾಗಿದೆ ಈ ಐತಿಹಾಸಿಕ ಕ್ರೀಡೆಗೂ ಪ್ರೋತ್ಸಾಹ ಅಗತ್ಯವಾಗಿ ಬೇಕಿದೆ ಎಂದು ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ ಹೇಳಿದರು.

ತಾಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಯುಗಾದಿ ಸಂವತ್ಸರ ಅಂಗವಾಗಿ ನಡೆದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ಪ್ರಯುಕ್ತ ಕುರಿಗಾಯಿ ಸಂಘದಿಂದ ಟಗರಿನ ಕಾಳಗ ಕ್ರೀಡೆಯನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಟಗರಿನ ಕಾಳಗಕ್ಕೆ ಅದರದೇ ಆದ ಮಹತ್ವವಿದೆ. ಇದು ಗ್ರಾಮೀಣ ಪ್ರದೇಶದ ಕುರಿಗಾಯಿ ಯುವಕರನ್ನು ಪ್ರೋತ್ಸಾಹಿಸುವ ಕಾಯಕ ಹಾಗೂ ಈ ಕ್ರೀಡೆ ಐತಿಹಾಸಿಕ ಗ್ರಾಮೀಣ ಕ್ರೀಡೆಯಾಗಿದೆ ಎಂದರು.

ಸಮಾಜದ ಹಿರಿಯ ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಟಗರಿನ ಪೂಜೆ ಮಾಡಿ ನಾವು ಸಾಕಿ ಸಲುಹಿದ ಟಗರಿನ ಕಾಳಗವನ್ನು ಹಮ್ಮಿಕೊಂಡು ಜಾತ್ರೆಯ ಸಮಾರಂಭದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿರುವುದಾಗಿ ಕುರಿ ಸಾಗಾಣಿಕೆಗೆ ಪ್ರೋತ್ಸಾಹ ಕೊಟ್ಟಂತಾಗಿದೆ ಎಂದರು. 

ಈ ಸಂದರ್ಭದಲ್ಲಿ ವಿ.ಮಂಜುನಾಥ, ಬಿ.ಎಂ.ರಾಜು, ಬಿ.ಗೋಣೆಪ್ಪ, ಹೆಚ್.ಆಂಜನೇಯಪ್ಪ, ಉಮೇಶ್, ಡಿ.ಕೃಷ್ಣ, ಎ.ಷಣ್ಮುಖ, ಈರಪ್ಪ, ಡಿ.ಲೋಕೇಶ್ ಇತರರು ಭಾಗವಹಿಸಿದ್ದರು. ಕಾಳಗದಲ್ಲಿ ದಾವಣಗೆರೆ, ಹರಿಹರ, ಹರಪನಹಳ್ಳಿ, ಹೊಸಪೇಟೆ, ಕೊಪ್ಪಳ, ಮುಂಡರಗಿ, ಹಡಗಲಿ ಭಾಗಗಳಿಂದ 80ಕ್ಕೂ ಹೆಚ್ಚು ಟಗರುಗಳು ಕಾಳಗದಲ್ಲಿ ಭಾಗವಹಿಸಿದ್ದವು.