ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 09: ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ಪ್ರಾಚೀನ ಊರಮ್ಮದೇವಿ ಕೆರೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ(ಎಸ್ಡಿಆರ್ಡಿವೈ) ಕೆರೆ ಸಂಜೀವಿನಿ ಯೋಜನೆಯಡಿ ಪುನಶ್ಚೇತನಗೊಳಿಸಿ ಶುಕ್ರವಾರ ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.
ಕೆರೆಗೆ ಬಾಗಿನ ಅಪರ್ಿಸಿ ಮಾತನಾಡಿದ ಶಾಸಕ ಎಸ್.ಭೀಮಾನಾಯ್ಕ, ಮೈತ್ರಿ ಸರ್ಕಾರದಲ್ಲಿ ಕೆರೆ ಅಭಿವೃದ್ಧಿಗೆ 8.68 ಲಕ್ಷ ರೂ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 14.56 ಲಕ್ಷ ರೂ. ಸೇರಿಸಿ ಕೆರೆ ಜೀಣೋದ್ಧಾರ ಮಾಡಿದ್ದು ಶ್ಲಾಘನೀಯ. ಇದರಿಂದ ರೈತರು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದರು. ಈ ವೇಳೆ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದ್ದು, ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಅದಕ್ಕೆ ಶಾಸಕ ಭೀಮಾನಾಯ್ಕ, ಮಾರ್ಚನಲ್ಲಿ ಐದು ಕೊಠಡಿಗಳ ನಿಮರ್ಾಣಕ್ಕೆ ಅನುದಾನ ನೀಡಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಜೆ.ಎಂ.ವೀರಸಂಗಯ್ಯಮಾತನಾಡಿ, ಈ ಭಾಗದ ವೆಂಕವಾಧೂತ ನೀರಾವರಿ ಯೋಜನೆ ಸಮೀಕ್ಷೆ ನಡೆಸಿ ಅನುದಾನ ನೀಡುವಂತೆ ಆಗ್ರಹಿಸಿದರು. ಗ್ರಾಮದ ಮುಖಂಡ ಹೆಗ್ಡಾಳ್ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಕೆ.ನಾಗಮ್ಮ, ಉಪಾಧ್ಯಕ್ಷೆ ಕೊಚಾಲಿ ಸುಶೀಲಮ್ಮ, ಹಂಪಾಪಟ್ಟಣದ ಗ್ರಾಪಂ ಅಧ್ಯಕ್ಷೆ ಕೀರಿಬಾಯಿ, ಕೆ.ಹನುಮಂತಪ್ಪ, ವೆಂಕಟೇಶ್, ಪಿ.ಕೆ.ಪುರುಷೋತ್ತಮ, ಹೊಸಪೇಟೆ ಯೋಜನಾಧಿಕಾರಿ ಚಿದಾನಂದ, ಹಬೊಹಳ್ಳಿ ಯೋಜನಾಧಿಕಾರಿ ಸಂಜೀವಗೌಡ ಇತರರಿದ್ದರು.