ಹಗರಿಬೊಮ್ಮನಹಳ್ಳಿ: ಗಿಡ ಮರಗಳನ್ನು ಸ್ವಂತ ಮಕ್ಕಳಂತೆ ಪೋಷಿಸಿ: ಸಾಲು ಮರದ ತಿಮ್ಮಕ್ಕ

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ 17: ಮನುಷ್ಯನ ಆಸೆಗೆ ಮಿತಿ ಇಲ್ಲದೆ ಪರಿಸರದಲ್ಲಿನ ಗಿಡ ಮರಗಳನ್ನು ನಾಶ ಪಡಿಸುತ್ತಾ ಅಳಿವಿಂನಂಚಿಗೆ ನೂಕುತ್ತಿರುವು ಪ್ರವೃತ್ತಿಯನ್ನು ಬಿಟ್ಟು ಗಿಡಮರಗಳನ್ನು ಮಕ್ಕಳಂತೆ ಪೋಷಿಸಬೆಕೆಂದು ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಹೇಳಿದರು.

ತಾಲೂಕಿನ ತಂಬ್ರಹಳ್ಳಿ ಗ್ರಾ.ಪಂ. ಹಾಗೂ ಸ್ಥಳೀಯ ಮುರಾಜರ್ಿ ವಸತಿ ಶಾಲೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪೋಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹಸಿರು ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಸಿರು ಪ್ರತಿಯೊಬ್ಬರ ಉಸಿರಾಗಿದೆ, ಗಿಡ ಮರಗಳ ಸಂರಕ್ಷಣೆಯಿಂದ ಕಾಲಕಾಲಕ್ಕೆ ಮಳೆಯಾಗುತ್ತದೆ, ಪರಿಸರದ ನಾಶ ಮಾಡುವುದರಿಂದ ಪ್ರಕೃತಿ ವಿಕೋಪವಾಗುವುದರಲ್ಲಿ ಅನುಮಾನವಿಲ್ಲವೆಂದರು.ಪ್ರತಿಯೊಬ್ಬರೂ ಗಿಡಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸಬೇಕು ಅದು ಯಾವುದೆ ಫಲಾಪೇಕ್ಷೆಯನ್ನು ಬೇಡದೆ ಮುಂದಿನ ದಿನಗಳಲ್ಲಿ ಸಹಕಾರಿಯಾಗುತ್ತದೆ, ಪರಿಸರಕ್ಕೆ ಮುಳುವಾಗುವ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸಿ ಪ್ಲಾಸ್ಟಿಕ್ ಮುಕ್ತ ಪ್ರಪಂಚವನ್ನು ಸೃಷ್ಟಿಸಿದರೆ ಮಾತ್ರ ಉಳಿಗಾಲವಿದೆ ಎಂದರು.

ಮಕ್ಕಳಲ್ಲಿ ಕೇವಲ ಪರಿಸರದ ಕಾಳಜಿ ಬೆಳೆಸಿದರೆ ಸಾಲದು ತಿಮ್ಮಕ್ಕರಂತೆ ಪ್ರಯೋಗಿಕವಾಗಿ ಪ್ರತಿಯೊಬ್ಬರೂ 10ಮರಗಳನ್ನಾದರೂ ಬೆಳೆಸಲು ಮುಂದಾಗಬೇಕೆಂದರು ಹಾಗೂ ಹೆಚ್ಚು ಮರಗಲನ್ನು ಬೆಳೆಸಿದರನ್ನು ಗುರುತಿಸಿ ಸಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದರು.ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ 1ಲಕ್ಷಕ್ಕೂ ಅಧಿಕ ಸಸಿಗಳನ್ನು ಬೆಳೆಸುವಂತಹ ಕಾರ್ಯ ಮಾಡಲಾಗುವುದು,ಅಂಕಸಮುದ್ರ ಪಕ್ಷಿಧಾಮದ ಸಂರಕ್ಷಣೆಗೆ ಆಧ್ಯತೆ ನೀಡಲಾಗುವುದೆಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಮಾಳಗಿ ದುರುಗಪ್ಪ ನೀಡಿದರು, ಹುಬ್ಬಳ್ಳಿಯ ಅಸಿಸ್ಟೆಂಟ್ ಕಮಿಷನರ್ ಯಶೋಧ ಹೂಸುರು, ಅಕ್ಕಿ ತೊಟೇಶ್, ಉಮೇಶ್ ಮಾತನಾಡಿದರು.

ಈ ಸಂಧರ್ಭದಲ್ಲಿ ಸಾಲು ಮರದ ವೀರಾಚಾರಿ, ಗಿರೀಶ್ ಎಸ್ ದೇವರಮನಿ, ಹನುಮಂತಪ್ಪ ಆರ್.ಬಿ. ಬಲ್ಲೂರು ಉಮೇಶ್, ತಾಪಂ.ಸದಸ್ಯ ಕೊಟ್ರೇಶ್, ಗ್ರಾಪಂ.ಸದಸ್ಯ ಗಿರೀಶ್, ಕಸಾಪ ಅಧ್ಯಕ್ಷ ಶಿವಾನಂದ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಮಲ್ಲಪ್ಪ ಹೊರಪೇಟೆ, ಗ್ರಾ.ಪಂ.ಅಧ್ಯಕ್ಷೆ ರಜೀಯಾಬೇಗಂ, ಗ್ರಾಪಂ.ಸದಸ್ಯೆ ಹನುಮಂತಮ್ಮ,ಎ.ಎಂ.ಪಿ ವಾಗೀಶ್, ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಸೇರಿದಂತೆ ಶಾಲಾ ವಿಧ್ಯಾಥರ್ಿಗಳು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.ಹಾಗೂ ಕನರ್ಾಟಕ ರಕ್ಷಣಾ ಸೇನೆ ಸೇರಿದಂತೆ ಅನೇಕೆ ಕನ್ನಡ ಪರ ಸಂಘಟನೆಗಳು, ವಿವಿಧ ಸಂಸ್ಥೆಗಳು ಸಾಲುಮರದ ತಿಮ್ಮಕ್ಕನವರನ್ನು ಸನ್ಮಾನಿಸಿದರು.

ಕಾರ್ಯಕ್ರಮವನ್ನು ಹನುಮಂತಪ್ಪ ನಿರೂಪಿಸಿದರೆ,  ಪ್ರಾಂಶುಪಾಲ ಯಮನೂರಸ್ವಾಮಿ ಸ್ವಾಗತಿಸಿದರು.