ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 29: ಪಟ್ಟಣದ ಪ್ರತಿಷ್ಠಿತ ಮಾರುತಿ ಸ್ಫೋಟ್ಸ್ ಕ್ಲಬ್ ತನ್ನ ಮೂವತ್ತನೇ ವರ್ಷದ ವಿನಾಯಕ ಪ್ರತಿಷ್ಠಾಪನಾ ನಿಮಿತ್ತ ಸೆಪ್ಟಂಬರ್ನ 3,4 ಹಾಗೂ5ರ ಮೂರು ದಿನಗಳ ಕಾಲ ರಾಮನಗರದ ಗುರುಭವನದ ಆವರಣದಲ್ಲಿ ಮೂರನೇ ನಾಣಿಕೇರಿ ರಂಗೋತ್ಸವ-2019 ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ನ ಅಧ್ಯಕ್ಷ ಹೆಚ್.ಪಿ.ಶಂಕರ ಗೌಡ ಹಾಗೂ ಪ್ರಧಾನ ಕಾರ್ಯದಶರ್ಿ ಹುಳ್ಳಿ ಪ್ರಕಾಶ ತಿಳಿಸಿದರು.
ಗುರುಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ರಂಗೋತ್ಸವದ ವಿವಿರವನ್ನು ನೀಡಿ ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ ನಾರಾಯಣದೇವರಕೆರೆ ನಾಣಿಕೇರಿ ಸವಿನೆನಪಿನಾರ್ಥವಾಗಿ ವಿನಾಯಕ ಪ್ರತಿಷ್ಠಾಪನಾ ದಿನದಂದು ರಂಗೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ 2017ರಂದು ಆರಂಭವಾದ ನಾಣಿಕೇರಿ ರಂಗೋತ್ಸವಕ್ಕೆ ಸದ್ಯ 3ನೇ ಬಾಲ್ಯ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಆಯೋಜಿಸಿರುವ ನಾಟಕಗಳನ್ನು ವೀಕ್ಷಿಸುವಂತೆ ಮನವಿ ಮಾಡಿದರು.
ಪ್ರಧಾನ ಕಾರ್ಯದಶರ್ಿ ಹುಳ್ಳಿ ಪ್ರಕಾಶ ಮಾತನಾಡಿ ಹೊಸಪೇಟೆ ಬಳಿ ತುಂಗಭದ್ರೆಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ,ನೀರು ಸಂಗ್ರಹಿಸುವ ಹಿಂದಿನವರೆಗೂ ಕಲೆ,ಸಾಹಿತ್ಯ,ಸಾಂಸ್ಕೃತಿಗಳ ಬಹು ದೊಡ್ಡ ಕೇಂದ್ರ ನಾಣಿಕೇರಿ ಗ್ರಾಮವಾಗಿತ್ತು, ಹಿನ್ನಿರಿನಿಂದ ಗ್ರಾಮ ಕಾಲಗರ್ಭದಲ್ಲಿ ಲೀನವಾಯ್ತು ಮುಳುಗಡೆ ಪ್ರದೇಶದ ನಿವಾಸಿಗಳನ್ನು ಮರಿಯಮ್ಮನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ಪಟ್ಟಣಗಳಿಗೆ ಸ್ಥಳಾಂತರಿಸಲಾಯಿತು ಸಂಪತ್ ಭರಿತ ಸಂಸ್ಕೃತಿಯ ಉಳಿಸುವ ಕಾರ್ಯಕ್ಕೆ ಕ್ಲಬ್ ಮುಂದಾಗುಇದೆ ಎಂದು ತಿಳಿಸಿದರು.
ಸೆ.3ರಂದು ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ಗದಗ ಕಲಾವಿದರಿಂದ ಖಾನಾವಳಿ ಚನ್ನಿ ಹಾಸ್ಯ ನಾಟಕ,ಮರುದಿನ ಹಲೋ ಹೈದರಾಬಾದಿ ಹಾಸ್ಯ ನಾಟಕ ಹಾಗೂ ಸೆ.5ರಂದು ಗಾನಯೋಗಿ ಲಿಂ.ಪಂ.ಪಂಚಾಕ್ಷರಿ ಕಲಾ ಟ್ರಸ್ಟ್ ಸೂಲದಹಳ್ಳಿ ಇವರಿಂದ ಕಂದಗಲ್ ಹನುಮಂತರಾಯ ರಚಿತ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಪ್ರಾರಂಭವಾಗಲಿವೆ
ಸಂದರ್ಭದಲ್ಲಿ ಕ್ಲಬ್ನ ಉಪಾಧ್ಯಕ್ಷ ಬಾರಿಕರ ಹುಲುಗಪ್ಪ, ಖಜಾಂಚಿ ಗಂಗಾಧರ, ಬಾರಕೇರ, ಸದಸ್ಯರಾದ ಬಡಿಗೇರ ಬಸವರಾಜ, ಮಾರುತಿ, ಚಂದ್ರು, ಮೇದಾರ ಪಕ್ಕೀರಪ್ಪ, ಸತೀಶ, ಹರ್ಷ, ನೂರಿ, ಮುನುಗ, ಹೌಲಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.