ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 19: ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ಎಡಬಿಡದೇ ಸುರಿದ ಭಾರಿ ಮಳೆಗೆ ನೆಹರು ನಗರ ಸೇರಿದಂತೆ ಚಿಂತ್ರಪಳ್ಳಿ ರಸ್ತೆಯಲ್ಲಿರುವ ಬುಡುಗ ಜಂಗಮ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಮಳೆಯಲ್ಲಿ ಕಾಲಕಳೆದ ಪರಿಸ್ಥಿತಿ ಏರ್ಪಟ್ಟಿತ್ತು.
ಹಳೇ ಹಗರಿಬೊಮ್ಮನಹಳ್ಳಿಯ ನೆಹರು ನಗರದಲ್ಲಿ ಸುಮಾರು ಎಂಟು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ರಾತ್ರಿಯಿಡೀ ಪರದಾಡುವುದರ ಜೊತೆ, ದಿನಬಳಕೆ ಸಾಮಾಗ್ರಿಗಳ ಕಾಪಾಡಿಕೊಳ್ಳುವಲ್ಲಿ ಹರಸಾಹಸ ಪಟ್ಟಿದ್ದೇವೆ, ಹಳ್ಳದ ನೀರು ಸರಾಗವಾಗಿ ಸಾಗಲು ಬೃಹದಾಕಾರದ ಪೈಪ್ಗಳಿಲ್ಲದ ಕಾರಣ ನೀರು ಮನೆಗಳಿಗೆ ನುಗ್ಗಿದೆ ಪರ್ಯಾಯ ವ್ಯೆವಸ್ಥೆಯನ್ನು ಕಲಿಸುವಂತೆ ತಹಶೀಲ್ದಾರ್ಗೆ ನಿವಾಸಿಗಳು ತಮ್ಮ ಅಳಲನ್ನು ತೊಡಿಕೊಂಡರು.ಶೀಘ್ರವೇ ಆಗಿರುವ ಅನಾಹುತಕ್ಕೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.
ಕೊಟ್ಟೂರು ರಸ್ತೆಯ ಬುಡಗ ನಿವಾಸಿಗಳ ಸುಮಾರು 45ರಿಂದ55 ಗುಡಿಸಲುಗಳು ಸಂಪೂರ್ಣ ಜಲಾವೃತಗೊಂಡು ಮಂಡಿತನಕ ನೀರು ನಿಂತಿದ್ದು, ಜೀವನ ಅಲ್ಲೋಲ್ಲ ಕಲ್ಲೋಲ್ಲವಾಗಿದೆ ಎಂದು ನಿವಾಸಿಗಳು ಪರದಾಡುವ ಪರಿಸ್ಥಿತಿ ಏರ್ಪಟ್ಟಿದೆ. ಇಲ್ಲಿನ ನಿವಾಸಿಗಳು ತಹಶೀಲ್ದಾರ್ ಸೇರಿದಂತೆ ಪುರಸಭೆ ಸದಸ್ಯರ ಮುಂದೆ ತಮ್ಮ ಅಳಲನ್ನು ತೊಡಿಕೊಂಡರು.
ಜೆಸಿಬಿಗಳಿಂದ ನೀರು ತೆರವು:
ಪಟ್ಟಣದ 15ನೇ ವಾಡರ್ಿನ ಮಲ್ಲಿಗೆ ವನದ ಬುಡುಗ ನಿವಾಸಿಗಳ ಮನೆಗಳಿಗೆ ನುಗ್ಗಿದ ನೀರು ತಗ್ಗು ಪ್ರದೇಶವಾಗಿದ್ದು, ಪಕ್ಕದಲ್ಲಿರುವ ಪೈಪ್ನ ಮುಖಾಂತರ ನಿಂತ ನೀರನ್ನು ಜೆಸಿಬಿಗಳ ಸಹಾಯದಿಂದ ನೀರನ್ನು ಹಳ್ಳದೆಡೆಗೆ ಹರಿಸಲಾಯಿತು.
ಸದ್ಯಕ್ಕೆ ಹತ್ತಿರದ ಕೆವಿಓಆರ್ ಶಾಲೆಯಲ್ಲಿ ವಾಸ್ತವ್ಯಕ್ಕೆ ವ್ಯೆವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು, ಒಂದು ತಾಸಿಗಿಂತ ಹೆಚ್ಚುಕಾಲ ಜೆಸಿಬಿಗಳು ಕಾರ್ಯೋನ್ಮಖವಾಗಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.
ಪಟ್ಟಣದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನ ಜೀವನ ಸಂಪೂರ್ಣ ಮಣ್ಣು ಪಾಲಾಗಿದ್ದು, ತಾಲೂಕಾಡಳಿತ ಈ ಪ್ರದೇಶ ಗಳಿಗೆ ಭೇಟಿ ನೀಡಿದ್ದು ಶೀಘ್ರವೇ ಪರಿಹಾರ ಕಲ್ಪಿಸುವ ವ್ಯೆವಸ್ಥೆ ಮಾಡಲಾಗುವುದೆಂದು ತಹಶೀಲ್ದಾರ್ ಆಶಪ್ಪ ಪೂಜಾರ್ ತಿಳಿಸಿದ್ದಾರೆ. ಸ್ಥಳಕ್ಕೆ ಪುರಸಭೆ ಸದಸ್ಯ ಗಂಗಣ್ಣ ಸೇರಿದಂತೆ ಇನ್ನಿತರರು ಭೇಟಿ ನೀಡಿದರು.