ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 13: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದಿಂದ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಹಕ್ಕೊತ್ತಾಯಗಳನ್ನು ಶೀಘ್ರವೇ ಪರಿಗಣಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮನವಿಯನ್ನು ನೀಡಿದರು.
ಈ ಸಂಧರ್ಭದಲ್ಲಿ ದೇವದಾಸಿ ಮಹಿಳೆಯರ ವಿಮೋಚನ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ ಮಾತನಾಡಿ ದೇವದಾಸಿ ವಿಮೋಚನ ಸಂಘ ಹಾಗೂ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಜಂಟಿಯಾಗಿ ಹಲವಾರು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ದೇವದಾಸಿಯರ ಮಾಸಿಕ ಸಹಾಯ ಧನ ಪುನರ್ಗಣತಿ ಪುನರ್ವಸತಿ ವಿವಾಹ ಪ್ರೋತ್ಸಾಹ ಧನವನ್ನು 5ಲಕ್ಷ ನೀಡುಬೇಕು ಸ್ತ್ರೀ ಶಕ್ತಿ ಸಂಘ ಹಾಗೂ ಸ್ವ-ಸಹಾಯ ಸಂಘಗಳ ಸಾಲ ಮನ್ನಾ ವಿವಾಹದ ವಿಚಾರದಲ್ಲಿ ಯಾವುದೇ ಷರತ್ತು ಇರದಂತೆ ಮಕ್ಕಳ ಉಚಿತ ಶಿಕ್ಷಣ ಹಾಗೂ ನಿರುದ್ಯೋಗ ಭತ್ಯೆಯನ್ನು ನೀಡುವಲ್ಲಿ ಸರ್ಕಾರಗಳು ಶೀಘ್ರವೇ ಮುಂದಾಗಬೇಕು ಹಾಗೂ ವ್ಯವಸಾಯದಲ್ಲಿ ತೊಡಗುವ ದೇವದಾಸಿ ಮಹಿಳೆಯರಿಗೆ ಹಾಗೂ ಅವರ ಮಕ್ಕಳಿಗೆ ತಲಾ 5ಎಕರೆ ಜಮೀನನ್ನು ಉಚಿತವಾಗಿ ಒದಗಿಸಬೇಕು ಸ್ವರ್ಯ ಉದ್ಯೋಗ ಕಂಡುಕೊಳ್ಳಲು ವೃತ್ತಿ ತರಬೇತಿ ಶಿಬಿರಗಳನ್ನು ಹೋಬಳಿಗೊಂದರಂತೆ ಸ್ಥಾಪಿಸಿ ಮಾಸಿಕ ನಾಲ್ಕು ಸಾವಿರ ರೂಗಳು ಸೇರಿದಂತೆ ಊಟ ವಸತಿ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.
ರಾಜ್ಯ ಸಕರ್ಾರವು ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಶಿಕ್ಷಣ ನೀಡಲು ಕ್ರಮವಹಿಸಿ ಅಂಗನವಾಡಿ ಕೇಂದ್ರಗಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸಿ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಅಗತ್ಯ ಕ್ರಮವಹಿಸಬೇಕೆಂದು ತಿಳಿಸಿದರು.
ತಾಲೂಕು ಕಾರ್ಯದಶರ್ಿ ಚಾಂದಬೀ, ತಾಲೂಕಾಧ್ಯಕ್ಷೆ ಮೈಲಮ್ಮ, ಸರೋಜಮ್ಮ, ಸಾವಿತ್ರಮ್ಮ, ಟಿ.ಹುಲಿಗೆಮ್ಮ, ಮರಿಯಮ್ಮ, ಹುಲಿಗೆಮ್ಮ, ಪಕ್ಕೀರಮ್ಮ ಸೇರಿದಂತೆ ಇನ್ನಿತರರು ಇದ್ದರು.