ಹಗರಿಬೊಮ್ಮನಹಳ್ಳಿ: ಏತನೀರಾವರಿ ಯೋಜನೆಗಾಗಿ ಪಾದಯಾತ್ರೆ ಮೂಲಕ ಮನವಿ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 20: ತಾಲೂಕಿನ ತಂಬ್ರಹಳ್ಳಿಯಲ್ಲಿ ಎರಡನೇ ಹಂತದ ಏತನೀರಾವರಿ ಯೋಜನೆಗೆ ಒತ್ತಾಯಿಸಿ ಗ್ರಾಮಸ್ಥರಿಂದ ಪೂರ್ವಭಾವಿ ಸಭೆ ನಡೆಯಿತು.

ಈ ಸಂಧರ್ಭದಲ್ಲಿ  ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ ಎರಡನೇ ಹಂತದ ಏತ ನೀರಾವರಿ ಯೋಜನೆ ಅವಶ್ಯಕವಾಗಿ ಆಗಬೇಕಿದೆ ಇದರಿಂದ ಸುಮಾರು 2ರಿಂದ3ಸಾವಿರ ಎಕರೆ ಪ್ರದೇಶಕ್ಕೆ ನೀರಿನ ಕೊರತೆ ನೀಗುವುದರಲ್ಲಿ ಅನಿಮಾನವಿಲ್ಲ ಹಾಗೂ ಇಂದಿನ ರೈತರ ಬವಣೆಗೆ ಸರಕಾರವು ಒತ್ತು ನೀಡಿ ಏತನೀರಾವರಿ ಯೋಜನೆಗಳಿಗೆ ಮುಂದಾಗಬೇಕಿದೆ. ಏರಡನೇ ಹಂತದ ಏತನೀರಾವರಿ ಯೋಜನೆಗೆ ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು ಹಾಗೂ ತಂಬ್ರಹಳ್ಳಿ ಗ್ರಾಮದಿಂದ ಹಗರಿಬೊಮ್ಮನಹಳ್ಳಿಗೆ ಗ್ರಾಮಸ್ಥರು ಸೇರಿದಂತೆ ರೈತರು ಪಾದಯಾತ್ರೆ ಮಾಡುವುದರ  ಮೂಲಕ ಸರಕಾರದ ಗಮನ ಸೆಳೆಯಬೇಕಾದಿತು ಎಂದರು.

ಗ್ರಾ.ಪಂ.ಅಧ್ಯಕ್ಷ ಮಡಿವಾಳ ಕೊಟ್ರೇಶ್ ಮಾತನಾಡಿ ಹೋರಾಟದ ಮೂಲಕವೇ ಸರಕಾರವನ್ನು ಎಚ್ಚರಗೊಳಿಸು ಕಾರ್ಯವಾಗಬೇಕಿದೆ. 

ಈ ಏತ ನೀರಾವರಿ ಯೋಜನೆಯು ಬಹು ದಿನಗಳ ಬೇಡಿಕೆಯಾಗಿದೆ ಸ್ಥಗಿತಗೊಂಡಿರುವ ಬೋರ್ವೆಲ್ಗಳ ಮರುಜೀವ ಪಡೆಯುವಂತೆ ಮಾಡಲು ಈ ಯೋಜನೆಯು ಸಹಕಾರಿಯಾಗಿದೆ ಹಾಗೂ ಇಂಗು ಗುಂಡಿಗಳಿಗೂ ನೀರೊದಗಿಸುವ ಕಾರ್ಯವಾಗುತ್ತದೆ ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತದೆ , ಸಮಸ್ತ ಗ್ರಾಮಸ್ಥರು ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಕರೆ ನೀಡಿದರು.

ಈ ಸಂಧರ್ಭದಲ್ಲಿ  ಗ್ರಾ.ಪಂ.ಮಾಜಿ ಅಧ್ಯಕ್ಷ ಬಣಕಾರ ಕೊಟ್ರೇಶ್, ಗ್ರಾಮದ ಹಿರಿಯರು, ಗ್ರಾ.ಪಂ.ಸದಸ್ಯರು, ರೈತರು, ಯುವಕರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.