ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 10: ಬೇಸಿಗೆ ಆರಂಭವಾಗಿರುವ ಹಿನ್ನಲೆಯಲ್ಲಿ ಬಿರು ಬಿಸಿಲಿನ ತಾಪಕ್ಕೆ ನೀರರಸಿ ಬಂದ ಪಕ್ಷಿಗಳಿಗೆ ನೀರು ಮತ್ತು ಆಹಾರದ ಸಮಸ್ಯೆ ತಲೆದೋರಲಿದ್ದು, ಇದನ್ನು ನಿವಾರಿಸುವ ಕಾರ್ಯಕ್ಕೆ ನಗರದ ಎಂ.ವೈ.ಘೋರ್ಪಡೆ ಸಿಬಿಎಸ್ಇ ಶಾಲಾ ಮಕ್ಕಳು ಆವರಣದ ಕೆಲ ಸ್ಥಳಗಳಲ್ಲಿ ನೈಸಗರ್ಿಕ ನೀರಿನ ತೊಟ್ಟಿಗಳನ್ನು ನಿಮರ್ಿಸಿ ಪಕ್ಷಿಗಳಿಗೆ ಬೊಗಸೆ ನೀರು ಕೊಡಿ ಪ್ಲೀಸ್ ಎನ್ನುವ ಮೂಲಕ ಮಾದರಿಯಾಗಿದ್ದು ಮಾನವೀಯ ಮೌಲ್ಯವನ್ನು ಮೆರೆದಿದ್ದಾರೆ.
ಶಾಲಾ ಟ್ರಸ್ಟಿ ಹಫೀಜ್ ಶೇಖ್ ಮಾತನಾಡಿ, ಪ್ರಸ್ತುತ ಬೇಸಿಗೆಯ ತೀವ್ರತೆ ಅತೀ ಹೆಚ್ಚಾಗಿದೆ. ಏಪ್ರಿಲ್-ಮೇ ತಿಂಗಳಗಳ ಮುನ್ನವೇ ವಾತಾವರಣದಲ್ಲಿ 37 ಡಿಗ್ರಿ ಸೆ. ತಾಪಮಾನ ದಾಖಲಾಗುತ್ತಿದೆ. ಮಾಚರ್್ ಆರಂಭದವರೆಗೂ ಅಲ್ಲಲ್ಲಿ ಕಾಣುತ್ತಿದ್ದ ಜಲಮೂಲಗಳು ಬತ್ತಿ ಬರಿದಾಗಿವೆ. ನಗರಕ್ಕೆ ಹೊಂದಿ ಕೊಂಡಿರುವ ಉದ್ಯಾನ, ಅರಣ್ಯದಂಚಿನ ಪ್ರದೇಶಗಳಲ್ಲಿ ಪ್ರಾಣಿ, ಪಕ್ಷಿ ಸಂಕುಲಗಳು ನೀರಿಗಾಗಿ ಪರದಾಡುತ್ತಿವೆ. ಪ್ರಾಣಿಪಕ್ಷಿಗಳಿಗೂ ಜೀವಿಸುವ ಹಕ್ಕಿದೆ ಅವುಗಳಿಗೆ ನಮ್ಮಿಂದ ಸಹಾಯ ಮಾಡೋಣ ಜೊತೆಗೆ ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ ಎಂದು ಹೇಳಿದರು.
ಬಳಿಕ ದೈಹಿಕ ಶಿಕ್ಷಕ ಸುಭಾಷ್ ಮಾತನಾಡಿ ಅರಣ್ಯ ಪ್ರದೇಶದಲ್ಲಿ ಎಲ್ಲೂ ನೀರು ನಿಲ್ಲುವ ವ್ಯವಸ್ಥೆ ಇಲ್ಲ. ಯೋಚನಾ ಶಕ್ತಿ ಹೊಂದಿರುವ ಮನುಷ್ಯನು ಬಾಯಾರಿದರೆ ನೀರು ಕೇಳಿ ಪಡೆಯುತ್ತಾರೆ. ಆದರೆ, ಬಿಸಿಲ ದಿನಗಳಲ್ಲಿ ಮೂಕ ಪಕ್ಷಿಗಳ ಪಾಡೇನು? ಪಕ್ಷಿ ಪ್ರಾಣಿಗಳಿಗಾಗಿ ಆಹಾರ ನೀಡುವ ಸಂಪ್ರದಾಯ ಸಮಾನ್ಯ. ನೀರು ಕೊಡುವ ಕಾಯಕ ವಿರಳ ಆದರೆ ಕೆಲವು ಕಡೆ ಈ ತರನಾದ ಪ್ರಯತ್ನಗಳು ಮಾದರಿಯಾಗಲಿ ಮಕ್ಕಳಲ್ಲಿ ಪಕ್ಷಿಸಂಕುಲ ಉಳಿಸುವ ಪ್ರವೃತ್ತಿ ಬೆಳೆಯಲಿ, ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವುದು ಮಾನವೀಯ ಪ್ರತೀಕವೆಂದು ಹೇಳಿದರು.
ಈ ಸಂದಂರ್ಭದಲ್ಲಿ ಪ್ರಾಚಾರ್ಯ ನೀಲಂಹೇಮಾ, ಶಿಕ್ಷಕ ಶಿವಶಂಕ್ರಯ್ಯ, ಶಿವಕುಮಾರ ಸ್ವಾಮಿ, ಜಂಜುಲಿಂಗ, ಶಿಕ್ಷಕಿ ರಾಜೇಶ್ವರಿ, ಶೋಭಾ, ಶಾಹೀನ್ ಹಾಗೂ ಶಾಲಾ ವಿಧ್ಯಾಥರ್ಿಗಳು ಇದ್ದರು