ಹಗರಿಬೊಮ್ಮನಹಳ್ಳಿ: ಸಂತೋಷರವರ ಒಂಭತ್ತನೇ ಅದ್ಭುತ ಚಿತ್ರ ಬಿಡುಗಡೆ

ಲೋಕದರ್ಶನವರದಿ

ಹಗರಿಬೊಮ್ಮನಹಳ್ಳಿ 04: ಸ್ಥಳೀಯ ಯುವಕ ಸಂತೋಷ ಬೆಟಗೇರಿ ಸ್ವತಃ ತಾವೇ ನಿಮರ್ಿಸಿ ನಿದರ್ೇಶಿಸಿದ ಒಂಭತ್ತನೇ ಅಧ್ಬುತ ಚಿತ್ರವು ಅನೇಕ ಚಿತ್ರಮಂದಿರಗಳಲ್ಲಿ ಸೇರಿದಂತೆ ನಗರದ ಕೊಟ್ಟೂರೇಶ್ವರ ಚಿತ್ರ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ನ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ನಮ್ಮ ಗ್ರಾಮದ ಯುವಕ ಇಂತಹ ಪ್ರತಿಭೆ ಹೊಂದಿದ್ದು ,ಅನೇಕ ಸಿನಿಮಾಗಳಲ್ಲಿ ಅನುಭವ ಪಡೆದು ಅವಕಾಶ ಮಾಡಿಕೊಂಡು ಇಂತಹ ಸಾಹಸಕ್ಕೆ ಕೈ ಹಾಕಿದ್ದು ಶ್ಲಾಘನೀಯ ಹಾಗೂ ಇಂತ ಪ್ರತಿಭೆಗಳನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಚಿತ್ರವು ಶತಮಾನೋತ್ಸವ ಪೊರೈಸಲೆಂದು ಹಾರೈಸಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಡಿಶ್ ಮಂಜುನಾಥ್, ಪತ್ರೇಶ್, ಪತ್ರಕರ್ತ ಮಜ್ಗಿ ವೀರೇಶ್, ಕರಸೇ ಅಧ್ಯಕ್ಷ ಶಿವುಕುಮಾರ್, ಹೆಚ್.ಎಂ.ರಾಜೇಶ್, ಬಡಪ್ಪನವರ ವೇಂಕಟೇಶ್, ಕಠಾರೆ ಶಂಕರ ಸೇರಿದಂತೆ ಪ್ರಮುಖರು ಚಿತ್ರವು ಶತಮಾನೋತ್ಸವ ಆಚರಿಸಲೆಂದು ಹಾರೈಸಿದರು.ಇದಕ್ಕೂ ಮುನ್ನಾ ಹಳೇ ಹಗರಿಬೊಮ್ಮನಹಳ್ಳಿಯ ನಿರಾವರಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿ ಮಾಡಲಾಯಿತು.