ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 14: ವಿದ್ಯಾರ್ಥಿ ದೆಸೆಯಿಂದಲೇ ಯುವಕ ಯುವತಿಯರು ಸಾಮಾಜಿಕ ಕಾಳಜಿಯನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಗಂ.ಭೀ.ಸ.ಪ.ಪೂ ಕಾಲೇಜಿನ ಮುಖ್ಯಗುರು ಮಲ್ಲಪ್ಪ ಹೇಳಿದರು.
ತಾಲೂಕಿನ ಅಂಕಸಮುದ್ರ ಗ್ರಾಮದ ಪಕ್ಷಿಧಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ (ಎನ್.ಎಸ್.ಎಸ್) ಹಮ್ಮಿಕೊಂಡಿದ್ದ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿ ಸ್ವಚ್ಚತೆಯ ಮಹತ್ವವನ್ನು ಹೇಳುವ ಮೂಲಕ ವಿದ್ಯಾಥರ್ಿಗಳಿಂದ ಸ್ವಚ್ಚಾ ಕಾರ್ಯಕ್ರಮವನ್ನು ನಡೆಸಿ ಈ ಪಕ್ಷಿದಾಮ ಮುಂದೊಂದು ದಿನ ರಾಜ್ಯಾಧ್ಯಂತ ಹೆಸರು ಮಾಡುವುದರಲ್ಲಿ ಎರಡು ಮಾತಿಲ್ಲ ಬೇರೆ ಬೇರೆ ರಾಷ್ಟ್ರಗಳಿಂದಲೂ ಸಹ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿದ್ದು ಅವುಗಳ ಸಂರಕ್ಷಣೆ ಎಲ್ಲರ ಆಧ್ಯ ಕರ್ತವ್ಯವಾಗಿದೆ. ಪಕ್ಷಿಗಳು ನೆಲೆಸಲು ಸುಂದರ ಪರಿಸರ ಅಗತ್ಯವಿದ್ದು ಸ್ಥಳೀಯರು ಹಾಗೂ ವೀಕ್ಷಿಸಲು ಬಂದ ಪ್ರವಾಸಿಗರು ದಯವಿಟ್ಟು ಪ್ಲಾಸ್ಟೀಕ್ ವಸ್ತು ಹಾಗೂ ಘನ ತ್ಯಾಜ್ಯಗಳನ್ನು ಎಲ್ಲಂದರಲ್ಲಿ ಬಿಸಾಡದೇ ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ. ಅಪರೂಪದಲ್ಲಿ ಅಪರೂಪವಾಗಿರುವ ಪಕ್ಷಿಗಳು ಆಸ್ಟ್ರೇಲಿಯದಂತಹ ದೂರ ದೇಶದಿಂದ ಇಲ್ಲಿಗೆ ಬರುತ್ತವೆ ಎಂದರೆ ಅದನ್ನು ನೋಡುವುದೇ ಒಂದು ಸೌಭಾಗ್ಯ ಆದ್ದರಿಂದ ಊರಿನ ಯುವಕರು ಪ್ರತಿದಿನ ಈ ಪಕ್ಷಿದಾಮವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವತ್ತ ಗಮನ ಹರಿಸಬೇಕು. ತುಂಗಭದ್ರ ಹಿನ್ನೀರು ವರದಾನವಾಗಿರುವುದರಿಂದ ಜಲಚರಗಳು, ಜೀವಸಂಕುಲಗಳು ಇಲ್ಲಿ ನೆಲೆ ನಿಲ್ಲುತ್ತಿವೆ ಇಂತಹ ಬಿರು ಬಿಸಿಲಿನಲ್ಲೂ ಅವುಗಳನ್ನು ಸಂರಕ್ಷಿಸುವ ಕಾರ್ಯ ನಮ್ಮೆಲ್ಲರದ್ದಾಗಿದೆ ಎಂದರು. ಸಹಶಿಕ್ಷಕರಾದ ರಾಜೇಂದ್ರ ಮತ್ತು ತೆಲುಗೋಳಿ ವೆಂಕಟೇಶ ವಿದ್ಯಾಥರ್ಿಗಳಿಂದ ಪರಿಸರ ಸ್ವಚ್ಚತೆ ಮಾಡುವ ಮೂಲಕ ಜನಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜೆ.ಬಿ.ಶರಣಪ್ಪ, ಯು.ವೆಂಕಟೇಶ್, ಎಂ.ಕೃಷ್ಣ, ಎನ್.ಪ್ರಶಾಂತ್, ರಾಜು, ಲವಕುಮಾರ್, ಕೆ.ಮಾರುತಿ, ಮಂಜುನಾಥ ಮತ್ತಿತರರು ಇದ್ದರು.