ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 21: ವಾಹನ ಸವಾರರೂ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದರೆ ಕಾನೂನಾತ್ಮಕವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ವೃತ್ತ ನಿರೀಕ್ಷಕ ರಾಜೇಶ್ ತಿಳಿಸಿದರು.
ಪಟ್ಟಣದ ಪೋಲೀಸ್ ಠಾಣೆಯಲ್ಲಿ ನಿಯೋಜಿಸಿದ್ದ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ದಿನಾಚರಣೆಯಲ್ಲಿ ಮಾತನಾಡಿ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲೀಸಿ ಹಾಗೂ ಗೂಡ್ಸ್ ಗಾಡಿಗಳಲ್ಲಿ ಯಾವುದೇ ಕಾರಣಕ್ಕೂ ಜನರ ಪ್ರಯಾಣ ಮಾಡದಂತೆ ತಿಳಿಸಿದರು, ರಸ್ತೆಯ ಇಕ್ಕೆಲುಗಳಲ್ಲಿ ಅಡ್ಡಲಾಗಿ ವಾಹನಗಳ ನಿಲುಗಡೆ ಮಾಡಿ ಸಂಚಾರಕ್ಕೆ ಅಡೆತಡೆ ಉಂಟುಮಾಡುವವರ ವಿರುಧ್ಧ ನಿದರ್ಾಕ್ಷಿಣ್ಯ ಕ್ರಮ ಕೈಗೋಳ್ಳಲಾಗುವುದು ಎಂದು ಖಡಕ್ ವಾನರ್ಿಂಗ್ ನೀಡಿದರು. ಪರವಾನಿಗೆ ಪಡೆದು ವಾಹನಗಳ ಚಲಾಯಿಸುವಂತೆ ತಿಳಿ ಹೇಳಿದರು.
ಗೂಡ್ಸ್ ವಾಹನಗಳಲ್ಲಿ ಜನರ ಪ್ರಯಾಣದ ವಿಷಯಕ್ಕೆ ಉತ್ತರಿಸಿದ ಆಟೋ ಚಾಲಕರ ಸಂಘದ ಕೈಲಾಶ್, ತಾಲೂಕಿನ ಹಲವಾರು ಗ್ರಾಮಗಳಿಗೆ ಬಸ್ ವೆವಸ್ಥೆ ಇಲ್ಲದ ಕಾರಣ, ವಾಹನಗಳ ಮಾಸಿಕ ಕಂತುಗಳ ಹಣ ಪಾವತಿ ಮಾಡಲು ಅನೂಕಲವಾಗುವಂತೆ ವಾಹನಗಳಲ್ಲಿ ಲಭ್ಯವಿರುವ ಆಸನಗಳ ಲೆಕ್ಕಕಾದರೂ ಪ್ರಯಾಣಿಕರ ಹಾಕಿಕೊಳ್ಳುವಂತೆ ಸವಲತ್ತು ಮಾಡಿಕೊಡುವಂತೆ ಕೇಳಿದರು.
ಪಿಎಸೈ ಮೌನೇಶ್ ರಾಥೋಡ್ ಉತ್ತರಿಸಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಮಿತಿ ಮೀರುತ್ತಿದ್ದು ಕಾನೂನಾತ್ಮಕವಾಗಿ ಗೂಡ್ಸ್ ವಾಹನಗಳಲ್ಲಿ ಜನರ ಪ್ರಯಾಣ ನಷೇಧವಿದೆ, ಪ್ರಯಾಣಿಕರ ಪ್ರಾಣಕ್ಕೆ ಸಂಚಾಕಾರ ಬಂದಾಗ ಲಕ್ಷಗಟ್ಟಲೇ ಹಣ ನೀಡುವುದು ನಿಮ್ಮಿಂದಾದೀತಾ ಎಂಬ ಎಚ್ಚರಿಕೆಯನ್ನು ನೀಡಿದರು, ಬಸವೇಶ್ವರ ಪುತ್ಥಳಿಯಿಂದ ಮಂಡಕ್ಕಿ ಭಟ್ಟಿ ವೃತ್ತದವರೆಗೆ ಟ್ರಾಫಿಕ್ ಹೆಚ್ಚಿರುತ್ತದೆ ಹಾಗಾಗಿ ಹಳೇ ಬಸ್ಸ ನಿಲ್ದಾಣ ಸೇರಿದಂತೆ ಅಶ್ವಿನಿ ಆಸ್ಪತ್ರೆ ಮುಂಭಾಗದಲ್ಲಿ ಪಾರ್ಕ ಮಾಡುವಂತೆ ಟಾಟಾ ಎಸ್,ಬೊಲೇರೋ ಟಂಟಂ ಅಟೋಗಳಿಗೆ ತಾಕೀತು ನೀಡಿದರು.ಗ್ರಾಮೀಣ ಭಾಗದ ಗ್ರಾಮಗಳಿಗೆ ಶೀಘ್ರವೇ ಬಸ್ ಗಳ ವ್ಯೆವಸ್ಥೆ ಕಲ್ಪಿಸುವಂತೆ ಮಾಡಲು ಸಂಭಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಕೆಎಸ್ಸಾರ್ಟಿಸಿ ವಿಭಾಗದ ಗೌರಿಶಂಕರ, ಪೋಲೀಸ್ ಸಿಬ್ಬಂದಿ ದಶರಥ್, ಚಾಲಕ ಜಿ. ಮಂಜುನಾಥ್, ಅಂಜಿನಿ, ಹೆಚ್.ಮಲ್ಲೇಶ್, ಸಿದ್ದು, ಸೇರಿದಂತೆ ಠಾಣಾ ಸಿಬ್ಬಂದಿ, ಆಟೋ ಚಾಲಕರು ಉಪಸ್ಥಿತರಿದ್ದರು.