ಹಾದರ್ಿಕ್ ಪಟೇಲ್ಗೆ 2ವರ್ಷ ಜೈಲು

ಮೆಹ್ಸಾನಾ(ಅಹ್ಮದಾಬಾದ್) 25: 2015ರಲ್ಲಿ ಪಾಟೀದಾರ್ ಪ್ರತಿಭಟನೆ ವೇಳೆ ನಡೆಸಿದ್ದ ಗಲಭೆಗೆ ಸಂಬಂಧಿಸಿದಂತೆ ಹಾದರ್ಿಕ್ ಪಟೇಲ್ ದೋಷಿ ಎಂದು ಬುಧವಾರ ಆದೇಶ ನೀಡಿರುವ ಗುಜರಾತ್ ನ ವಿಸ್ ನಗರ್ ಕೋಟರ್್ 2 ವರ್ಷ ಜೈಲುಶಿಕ್ಷೆ ವಿಧಿಸಿ, 50 ಸಾವಿರ ರೂಪಾಯಿ ದಂಡ ವಿಧಿಸಿ ತೀಪು ನೀಡಿದೆ. 

2015ರಲ್ಲಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಕ ಹಾದರ್ಿಕ್ ಪಟೇಲ್ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಸುಮಾರು 500 ಮಂದಿ ಪಟೇಲ್ ಸಮುದಾಯದವರು ವಿಸ್ ನಗರದಲ್ಲಿನ ಬಿಜೆಪಿ ಶಾಸಕರ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಅಲ್ಲದೇ ಪತ್ರಕರ್ತರ ಮೇಲೂ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾದರ್ಿಕ್ ಪಟೇಲ್ ಹಾಗೂ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಜೆಪಿ ಶಾಸಕ ಋುಷಿಕೇಶ್ ಪಟೇಲ್ ಕಚೇರಿಯನ್ನು ಧ್ವಂಸಗೊಳಿಸಿದ್ದರಿಂದ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಮುಖಂಡ ಹಾದರ್ಿಕ್ ಹಾಗೂ ಇತರರ ವಿರುದ್ಧ ವಿಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ ನಂತರ ವಿಸ್ ನಗರ ಕೋರ್ಟ, ಹಾದರ್ಿಕ್ ಪಟೇಲ್, ಲಾಲ್ ಜಿತ್ ಪಟೇಲ್ ಹಾಗೂ ಅಂಬಾಲಾಲ್ ಪಟೇಲ್ ದೋಷಿ ಎಂದು ಆದೇಶ ನೀಡಿ, 2 ವರ್ಷಗಳ ಜೈಲುಶಿಕ್ಷೆ ವಿಧಿಸಿ, ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿ ತೀಪರ್ು ನೀಡಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.