ಟ್ವಿಟರ್ ನಲ್ಲಿ ಪಾದರಸದಂತೆ ಚುರುಕಾದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಜ 27:        ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈಗೀಗ ಟ್ವಿಟರ್‌ನಲ್ಲಿ ಪಾದರಸದಂತೆ ಕ್ರಿಯಾಶೀಲರಾಗಿದ್ದಾರೆ.

ಬಿಜೆಪಿ ಹಾಗೂ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಲು ಕುಮಾರ ಸ್ವಾಮಿ ಟ್ವಿಟರ್ ಸಕ್ರಿಯವಾಗಿದೆ. ಹೌದು, ಹೆಚ್.ಡಿ.ಕುಮಾರಸ್ವಾಮಿ ಟ್ವಿಟರ್ ಈಗ ಮೊದಲಿಗಿಂತಲೂ ಹೆಚ್ಚು ಚಲನಶೀಲವಾಗಿದೆ.

ಸದ್ಯಕ್ಕೆ ಇವರ ಟ್ವಿಟರ್ ಹಿಂಬಾಲಕರ ಸಂಖ್ಯೆ 161 ಸಾವಿರಕ್ಕೆ ಏರಿಕೆಯಾಗಿದೆ. ಉಪಚುನಾವಣೆಯ ಸೋಲಿನ ಬಳಿಕ  ಸಾಮಾಜಿಕ ಜಾಲತಾಣವನ್ನು ಕುಮಾರಸ್ವಾಮಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸಿನ ಯಾವುದೇ ನಾಯಕರು ತಮ್ಮ ಬಗ್ಗೆ ನೀಡಿದ ಹೇಳಿಕೆಗೆ ಟ್ವೀಟ್ ಮೂಲಕವೇ ಪ್ರಖರವಾಗಿ ಉತ್ತರಿಸುತ್ತಿದ್ದಾರೆ. 

ಸುದ್ದಿಗೋಷ್ಠಿ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುವುದಕ್ಕಿಂತಲೂ ಟ್ವಿಟರ್‌ನಲ್ಲಿಯೇ ಖಡಕ್ ಉತ್ತರ, ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಹಿಂದಿಗಿಂತಲೂ ಕುಮಾರಸ್ವಾಮಿ ಅವರ ಟ್ವಿಟರ್ ಹೆಚ್ಚು ಕೆಲಸ ಮಾಡಲಾರಂಭಿಸಿದೆ. ಉಪಚುನಾವಣೆ ಸೋಲಿನ ಬಳಿಕ ಟ್ವೀಟ್ ಮೊರೆ ಹೋಗಿರುವ ಕುಮಾರಸ್ವಾಮಿ ಅವರಿಗೆ ಕಳೆದ ಎರಡು ತಿಂಗಳಿನಿಂದ ಸುಮಾರು15ಸಾವಿರ ಹಿಂಬಾಲಕರು ಹೆಚ್ಚಾಗಿದ್ದಾರೆ.ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ತಮ್ಮ ಅನಿಸಿಕೆ ಹೇಳಿಕೆಗಳನ್ನು ತಮಗೆ ಅನುಕೂಲವಾಗುವಂತೆ ವ್ಯಕ್ತಪಡಿಸಲು ಟ್ವೀಟ್ ಹೆಚ್ಚು ಶೀಘ್ರ ಮತ್ತು ಅನುಕೂಲ ಎಂದು ಅವರು ಭಾವಿಸಿದ್ದಾರೆ