ಲೋಕದರ್ಶನ ವರದಿ
ಹಳಿಯಾಳ,14: ಪಟ್ಟಣದ ತಾನಾಜಿಗಲ್ಲಿಯಲ್ಲಿನ ಮನೆಯೊಂದು ಬೆಂಕಿಗೆ ಆಹುತಿಯಾದ ದುರ್ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ನಾಗೇಂದ್ರ ದುರ್ಗಪ್ಪಾ ಘೋಟ್ನೇಕರ ಎಂಬುವವರಿಗೆ ಸೇರಿದ ವಾಸದ ಮನೆಯು ಬೆಂಕಿಗೆ ಆಹುತಿಯಾಗಿದ್ದು ತುತರ್ುಸೇವೆಗಳು ಹಾಗೂ ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸಿದ ಕಾರಣ ಇತರೆ ಮನೆಗಳಿಗೆ ಬೆಂಕಿಯ ಕೆನ್ನಾಲಿಗೆ ಪಸರಿಸಲಿಲ್ಲ. ಈ ದುರ್ಘಟನೆಯ ಸಮಯದಲ್ಲಿ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ಆಕಸ್ಮಿಕವಾಗಿ ಹತ್ತಿದ ಬೆಂಕಿಯಿಂದ ಮನೆಯೊಳಗಿದ್ದ ಕಪಾಟು, ಫ್ರಿಡ್ಜ್, ಪಿಠೋಪಕರಣಗಳು, ಬಟ್ಟೆ-ಬರೆಗಳು, ಆಹಾರ ಸಾಮಗ್ರಿಗಳು ಹಾಗೂ ಮನೆಯಲ್ಲಿದ್ದ ಪುಟ್ಟ ಕಿರಾಣಿ ಅಂಗಡಿಯ ಮಾರಾಟ ಪರಿಕರಗಳು ಸುಟ್ಟು ಭಸ್ಮವಾಗಿದ್ದು, ಕಟ್ಟಿಗೆಯ ಅಟ್ಟ ಹಾಗೂ ಮೇಲ್ಛಾವಣಿ ಸುಟ್ಟು ಹೋಗಿವೆ. ಈ ಬೆಂಕಿ ಪ್ರಕರಣದಿಂದಾಗಿ ಸುಮಾರು 2 ಲಕ್ಷ ರೂ. ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.
ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪಂಚನಾಮೆ ಮಾಡಿದ್ದಾರೆ. ಪುರಸಭೆ ವಾಡರ್್ ಸದಸ್ಯರಾದ ನವೀನ ಕಾಟ್ಕರ, ರುದ್ರಪ್ಪಾ ಕೆಸರೇಕರ, ಜಯಕನರ್ಾಟಕ ಸಂಘಟನೆಯ ವಿಲಾಸ ಕಣಗಲಿ, ಶಿವಾಜಿ ಬ್ಯಾಂಕ್ ನಿದರ್ೇಶಕ ಅಶೋಕ ಘೋಟ್ನೇಕರ ಮೊದಲಾದವರು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು