ಗುರುನಾನಕ ಜಯಂತಿ: ಉಚಿತ ಆರೋಗ್ಯ ತಪಾಸನಾ ಶಿಬಿರ

ಲೋಕದರ್ಶನ ವರದಿ

ಮುಧೋಳ22: ಸಾರ್ವಜನಿಕರು ತಾವು ವಾಸಿಸುವ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಂಡು ರೋಗ-ರುಜಿನಗಳನ್ನು ಹರಡದಂತೆ ಎಚ್ಚರ ವಹಿಸಬೇಕು ಎಂದು ಡಾ. ವಿಜಯಕುಮಾರ ಹೊಸಟ್ಟಿ ಹೇಳಿದರು.

     ಅವರು ಗುರುವಾರ ದಿ.22ರಂದು ನಗರದ ಜಯನಗರ ಬಡಾವಣೆಯ ಸಿಖ್ಖರ್ ಕಾಲೋನಿಯಲ್ಲಿ ಜೈ ಭೀಮ ಉದ್ಯೋಗಿ ಶಾಖೆಯ ವತಿಯಿಂದ ಗುರುನಾನಕ್ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ``ಉಚಿತ ಆರೋಗ್ಯ ತಪಾಸಣಾ ಶಿಬಿರ''ದಲ್ಲಿ ಪಾಲ್ಗೊಂಡು ಮಾತನಾಡಿದರು. 

     ಪ್ರಸ್ತುತ ನಗರದಲ್ಲಿ ಚಿಕೂನ್ ಗುನ್ಯಾ ಸಮಸ್ಯೆ ಹಾಗೂ ಅಲಜರ್ಿ ಸಮಸ್ಯೆ ಹೆಚ್ಚಾಗಿದ್ದು,ಎಲ್ಲರೂ ವೈದ್ಯರ ಮಾರ್ಗದಶ್ನದಂತೆ ಆರಂಭದಲ್ಲಿಯೇ ಸೂಕ್ತ ಮುನ್ನೆಚ್ಚರಿಕಾ ಕ್ರಮ ತಗೆದುಕೊಂಡರೆ ಇಂತಹ ರೋಗಗಳು ಹರಡದಂತೆ ತಡೆಯಬಹುದು ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಸಿಖ್ ಸಮಾಜದ ಮುಖಂಡರಾದ ಭಗತ್ಸಿಂಗ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಗೋಸೇವಾ ಆಯೋಗದ ಕನರ್ಾಟಕ ಉತ್ತರಪ್ರಾಂತ ಪ್ರಮುಖರಾದ ರಾಮಕೃಷ್ಣ ಬುದ್ನಿ, ಜಿಲ್ಲಾ ಸಂಪರ್ಕ ಪ್ರಮುಖರಾದ ಸಿದ್ದು ಚಿಕದಾನಿ, ನಗರ ಕಾರ್ಯನಿವರ್ಾಹಕ ಶಿವಾನಂದ ಕಾಮಗೊಂಡ, ನಗರ ಸೇವಾ ಪ್ರಮುಖ ಕೃಷ್ಣಾ ಸುಲಾಖೆ, ಆನಂದ ನಾಗಾಂವಕರ್, ಅಮೀತ ಘೋರ್ಪಡೆ, ಸತೀಶ ಹಡಪದ, ಅನೀಲ ಮುರಡಿ, ಪ್ರವೀಣ ಯಾದವ, ಕೇದಾರಿ ಕದಂ,ವಿನಾಯಕ ಘೋರ್ಪಡೆ, ಪರಸು ಸಕ್ರೆನ್ನವರ, ಶ್ಯಾಮ ನಿಂಬಾಳಕರ್ 

ಉಪಸ್ಥಿತರಿದ್ದರು.

    ಈ ಶಿಬಿರದಲ್ಲಿ ನಗರದ ವೈದ್ಯರಾದ ಡಾ. ರವಿ ನಂದಗಾಮವ, ಡಾ. ಕಲ್ಯಾಣಕುಮಾರ ಮಸಳಿ, ಡಾ. ಸಚಿನ ಘಾಟಗೆ,ಡಾ|| ವಿಜಯಕುಮಾರ ಹೋಸಟ್ಟಿ, ಡಾ. ರವಿ ಗಂಗಲ್ ಮತ್ತು ಡಾ. ವಾಯ್.ಆರ್.ದಾಸರ ಅವರು ಭಾಗವಹಿಸಿದ್ದರು.

    ಸುಮಾರು 350ಕ್ಕೂ ಹೆಚ್ಚು ಜನರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು. ಕೃಷ್ಣಾ ಸುಲಾಖೆ ಸ್ವಾಗತಿಸಿದರು. ಅಮೀತ ಘೋರ್ಪಡೆ ವಂದಿಸಿದರು.