ಗುರುವಿನ ಆಶೀವರ್ಾದದಿಂದ ಉನ್ನತ ಸ್ಥಾನ ಸಾಧ್ಯ: ಬಾಗೇವಾಡಿ


ಬೈಲಹೊಂಗಲ 17: ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀವರ್ಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಎಚ್.ಡಿ.ಬಾಗೇವಾಡಿ ಹೇಳಿದರು.

    ಅವರು ಪಟ್ಟಣದ ಇಂಚಲ ರಸ್ತೆಯ ಎಂ.ಎ.ಎ.ಉದರ್ು ಪ್ರೌಢಶಾಲೆಯ ಆವರಣದಲ್ಲಿ 1995 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಳೆಯ ವಿದ್ಯಾಥರ್ಿಗಳಿಂದ ಶನಿವಾರ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಪಂಚದಲ್ಲಿ ಗುರುವಿಗೆ ಉನ್ನತ ಸ್ಥಾನ ಮಾನ ನೀಡುವ ದೇಶ ಯಾವದಾದರೂ ಇದ್ದರೇ ಅದು ಭಾರತ ದೇಶವಾಗಿದೆ ಎಂದರು. 

     ನಾವು ಕಲಿಯುವ ಸಮಯದಲ್ಲಿ ವಿದ್ಯಾಥರ್ಿಗಳು ಗುರುವೃಂದಕ್ಕೆ ಅತ್ಯಂತ ಭಕ್ತಿ ಭಾವದಿಂದ ನೋಡಿಕೊಳ್ಳುತ್ತಿದ್ದರು. ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿ ಯುಗದಲ್ಲಿ ಗುರುವಿಗೆ ಅಷ್ಟೊಂದು ಗೌರವದಿಂದ ಕಾಣುವುದಿಲ್ಲದಿರುವುದು ವಿಷಾದಕರವಾಗಿದೆ ಎಂದರು.

     ಎಮ್.ಎಮ್.ತಿಗಡಿ ಮಾತನಾಡಿ, ಹಳೆಯ ವಿದ್ಯಾಥರ್ಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಹೆಚ್ಚು ಅಗತ್ಯವಿದೆ ಎಂದರು. 

   ವೇದಿಕೆ ಮೇಲೆ ಎಮ್.ಜಿ.ಬಾಗೇವಾಡಿ, ಎಚ್.ಡಿ.ಬಾಗೇವಾಡಿ, ಪಟೇಲ, ಮಹಾಂತೇಶ ಮತ್ತಿಕೊಪ್ಪ, ಜಿ.ಎಸ್.ಪೂಜೇರಿ, ಕುತುಬುದ್ದಿನ್ ಚಾಲರ್ಿ, ಎ.ಎಮ್.ಐನಾಪುರೆ, ಎಮ್.ಜಿ.ಬಾಗೇವಾಡಿ, ಎಲ್.ಎಮ್.ತೊರಗಲ, ಎಮ್.ಎಮ್.ಗೋವೆ, ಎಸ್.ಎ.ಅರಭಾಂವಿ, ಸಲಿಂ ತಿಗಡಿ, ರಫೀಕ ಕಾಶಾನಟ್ಟಿ, ಹಸನ ನದಾಫ, ಎಮ್.ಎಮ್.ಮುಜಾವರ ಇದ್ದರು.

      ನಜೀರ ತೊಲಗಿ, ಬಶೀರ ಬಳಿಗಾರ, ಉಸ್ಮಾನ ಹುಬ್ಬಳ್ಳಿ, ಆರೀಫ ಹಿರೆಕುಂಬಿ, ಮುಶ್ತಾಕ ನಂದಗಡ, ಹಾರುನ ಕಿತ್ತೂರ, ನೂರ ಲಖನ್ವಿ, ಜಾಫರ ಪಾರಿಶ್ವಾಡ, ಸಲೀಂ ಸವದತ್ತಿ, ಮಕ್ತುಂ ಸವದತ್ತಿ, ಗೌಸ ಕಿತ್ತೂರ, ಸಮೀವುಲ್ಲಾ ನೇಸರಗಿ, ಜುಲ್ಫಿಕಾರ ಜಹಾಗೀರದಾರ, ಶಮ್ಮು ಬಡೇಘರ, ದಾದಾಫೀರ ಉಡಕೇರಿ, ಅಪ್ಪಾಸಾಬ ಒಂಟಿ, ಪವರ್ೆಜ ಸೈಯ್ಯದ, ನಾಸೀರ ಸಂಗೊಳ್ಳಿ, ರಫೀಕ ಅತ್ತಾರ, ಜಮೀಲ ಕರೀಕಟ್ಟಿ, ಕಯ್ಯುಮ ಬಿಜಲಿಕಾನ, ತಸ್ಲಿಂ ಆರೀಫ ಫನಿಬಂದ, ಮೆಹಮೂದ ಕಿತ್ತೂರ, ಯಾಸೀನ ಸಂಗೊಳ್ಳಿ, ರೌಫ ಮಕಾಂದಾರ ಬಾಬು ಕುಲಮನಟ್ಟಿ, ಜಬೀನ ಬಾಟ್ಲಿವಾಲೆ, ಪಿದರ್ೋಸ ಬಾಗೇವಾಡಿ, ಹಸೀನಾ ಬಾಗೇವಾಡಿ ಸಮಾರಂಭದ ಯಶಸ್ಸಿಗೆ ಶ್ರಮಿಸಿದರು.

    ಮಾತೃ ಹೃದಯದಿಂದ ನೆಚ್ಚಿನ ಶಿಕ್ಷಕ, ಶಿಕ್ಷಕಿಯರನ್ನು ಬರಮಾಡಿಕೊಂಡ ಹಳೆಯ ವಿದ್ಯಾಥರ್ಿಗಳು ಕಳೆದು ಹೋದ ತಮ್ಮ ವಿದ್ಯಾಥರ್ಿ ಜೀವನದ ಸನ್ನಿವೇಶಗಳನ್ನು ಮನಸಾರೆ ನೆನೆದು ಸಂಭ್ರಮಿಸಿದರು. ಒಂದೇ ವೇದಿಕೆಯಲ್ಲಿ ಎಲ್ಲ ಶಿಕ್ಷಕ ವೃಂದದವರನ್ನು ಸೇರಿಸಿ ಅಂತಕರಣದಿಂದ ಗೌರವಿಸಿದರು. ಶಿಕ್ಷಕ, ಶಿಕ್ಷಕಿಯರಿಗೆ ಶಾಲು ಹೊದಿಸಿ, ಪುಷ್ಪಮಾಲೆ ಹಾಕಿ, ಕೈಗಡಿಯಾರ ನೀಡಿದರು.  

     ತಮಗೆ ಕನ್ನಡ, ಉದರ್ು, ಹಿಂದಿ, ಇಂಗ್ಲಿಷ್, ಇನ್ನೂಳಿದ ಭಾಷೆಗಳನ್ನು ಕಲಿಸಿ ಓದಿ ದೊಡ್ಡವರನ್ನಾಗಿಸಿ ಸನ್ಮಾರ್ಗ ನೀಡಿದ ಆಯಾ ವಿಷಯ ಶಿಕ್ಷಕರ ಕಲಿಕಾ ಶೈಲಿ, ಹಾವಭಾವವನ್ನು ಮನಸಾರೆ ಸ್ಮರಣೆ ಮಾಡಿದರು. ಎಲ್ಲ ಶಿಕ್ಷಕರು, ಶಿಕ್ಷಕಿಯರು, ವಿದ್ಯಾಥರ್ಿಗಳು ಸಂಭ್ರಮದ ವಾತಾವರಣದಲ್ಲಿ ತೇಲಾಡಿದರು. 

      ಎಲ್ಲ ಶಿಕ್ಷಕ, ಶಿಕ್ಷಕಿಯರನ್ನು, ಹಳೆಯ ವಿದ್ಯಾಥರ್ಿಗಳನ್ನು ಸಂಘಟಿಸುವಲ್ಲಿ ಯಶಸ್ವಿಯಾದ  ಸಾಜೀದ ಬಾಬನ್ನವರ, ಆರೀಫಾ ನಂದಗಡ  ಅವರು ಮೈಕ ಹಿಡಿದು ನಿರೂಪಣೆ ಮಾಡಿದ ಶೈಲಿ ಕೇಳುಗರನ್ನು ಮಂತ್ರಮುಗ್ಧವಾಗಿಸಿತು. 

        ಆಗಾಗ ವೇದಿಕೆಯಿಂದ ಹೊರ ಬರುತ್ತಿದ್ದ ಶಹರಿ ಹಾಗೂ ಬಸವಣ್ಣವರ ವಚನಗಳು  ಕೇಳುಗರ ಹೃದಯ ಭಾರ ಹಗುರ ಮಾಡಿದವು.

 ಹಳೆಯ ವಿದ್ಯಾಥರ್ಿಗಳಾದ ಸಾಜೀದ ಬಾಬನ್ನವರ ಸ್ವಾಗತಿಸಿದರು. ಆರೀಫಾ ನಂದಗಡ  ನಿರೂಪಿಸಿ ವಂದಿಸಿದರು.