ನವದೆಹಲಿ, ಅ 17: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ದೆಹಲಿ ವಿಶೇಷ ಪೊಲೀಸ್ ಪಡೆ ನಡೆಸಿದ ಕಾರ್ಯಾಚರಣೆಯನ್ನು ಕುಖ್ಯಾತ ದರೋಡೆಕೋರನನ್ನು ಬಂಧಿಸಲಾಗಿದೆ. ದ್ವಾರಕ ಮೆಟ್ರೋ ನಿಲ್ದಾಣದ ಬಳಿ ಬೆಳಗಿನ ಜಾವ 5. 20ರ ಸುಮಾರಿಗೆ 13 ಸುತ್ತು ಗುಂಡಿನ ಕಾರ್ಯಾಚರಣೆ ನಡೆಸಿ, ಕುಖ್ಯಾತ ತೆವಾತಿಯಾ ಗ್ಯಾಂಗ್ ನ ಮುಖಂಡ ಪ್ರಿನ್ಸ್ ತೆವಾತಿಯಾನನ್ನು ಬಂಧಿಸಲಾಯಿತು. ಆದರೆ ಈ ಗ್ಯಾಂಗ್ ನ ಮತ್ತೋರ್ವ ಸದಸ್ಯ ಪ್ರಮೋದ್ ಪರಾರಿಯಾಗಿದ್ದಾನೆ ಎಂದು ಪೊಲೀಸರ ಮಾಹಿತಿ ತಿಳಿಸಿದೆ. ತೆವಾತಿಯಾ ಗ್ಯಾಂಗ್ ಇತ್ತೀಚೆಗಷ್ಟೆ ನಂದು ಗ್ಯಾಂಗ್ ಜತೆ ಕೈ ಜೋಡಿಸಿತ್ತು. ಪೆರೋಲ್ ಪಡೆದು ಜೈಲಿನಿಂದ ಹೊರಬಂದಿದ್ದ ಪ್ರಿನ್ಸ್ ತೆವಾತಿಯಾ, ಜೈಲಿಗೆ ವಾಪಸಾಗದೆ ಪೊಲೀಸರ ಕಣ್ತಪ್ಪಿಸಿ ತಿರುಗಾಡುತ್ತಿದ್ದ. ಈ ಸಂದರ್ಭದಲ್ಲಿ ಆತನ ವಿರುದ್ಧ 6ಕ್ಕೂ ಹೆಚ್ಚು ಕೊಲೆ ಹಾಗೂ ಕೊಲೆ ಯತ್ನದ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಗುರುವಾರದ ಕಾರ್ಯಾಚರಣೆಯ ವೇಳೆ ಪರಾರಿಯಾಗಿರುವ ಪ್ರಮೋದ್ ಕೂಡ ಪೆರೋಲ್ ಮೂಲಕ ಹೊರಬಂದು ಪೊಲೀಸರ ಕಣ್ತಪ್ಪಿಸಿ ಕುಕೃತ್ಯದಲ್ಲಿ ತೊಡಗಿಕೊಂಡಿದ್ದಾನೆ ಎಂದು ಹೇಳಲಾಗಿದೆ.