ಲೋಕದರ್ಶನ ವರದಿ
ಬ್ಯಾಡಗಿ: ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ನೂರಾರು ವರ್ಷಗಳಿಂದ ತೀರಿಕೊಂಡ ಜನರ ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದೇ ಪರದಾಡುವಂತಾಗಿದ್ದು ಸ್ಮಶಾನಕ್ಕಾಗಿ ಜಮೀನನ್ನು ಒದಗಿಸಲು ತಾಲೂಕಾಡಳಿತ ಮುಂದಾಗುವಂತೆ ಕ್ರಮವಹಿಸಲು ಗ್ರಾಪಂ ಅಧ್ಯಕ್ಷ ಗಂಗಾಧರಗೌಡ ದೊಡ್ಡಗೌಡ್ರ ಅವರು ಕಂದಾಯ ಇಲಾಖೆಯ ಅಧಿಕಾರಿಗೆ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೂಚಿಸಿದರು.
ಶುಕ್ರವಾರ ತಾಲೂಕಿನ ಘಾಳಪೂಜಿ ಗ್ರಾಮದ ಗ್ರಾಮಪಂಚಾಯತ್ ಸಭಾಭವನದಲ್ಲಿ ನಡೆದ ಪ್ರಥಮ ಗ್ರಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುತ್ತಾ ಕಂದಾಯ ಇಲಾಖೆಯ ಮೇಲಿನ ಚಚರ್ೆಯ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದಲ್ಲಿ ಸ್ಮಶಾನದ ಜಮೀನಿಗಾಗಿ ತಾಲೂಕ ಆಡಳಿತಕ್ಕೆ ಹಲವಾರು ವರ್ಷಗಳಿಂದ ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಗ್ರಾಮದಲ್ಲಿರುವ ವಿವಿಧ ಸಮಾಜಗಳ ಜನರು ತಮ್ಮ ಸಂಬಂಧಿಕರು ತೀರಿಕೊಂಡ ಸಂದರ್ಭದಲ್ಲಿ ಅಂತ್ಯಕ್ರಿಯೆ ನಡೆಸಲು ಸೂಕ್ತ ಜಾಗೆ ಇಲ್ಲದೆ ಪರದಾಡುವಂತಾಗಿದೆ. ಈಗಲಾದರೂ ತಾಲೂಕಾಡಳಿತ ಎಚ್ಚೆತ್ತುಕೊಂಡು ಗ್ರಾಮದಲ್ಲಿ ಸ್ಮಶಾನಕ್ಕಾಗಿ ಸಕರ್ಾರಿ ಜಾಗೆಯನ್ನು ಮಂಜೂರಿ ಮಾಡಿಕೊಡಲು ಕ್ರಮವಹಿಸುವಂತೆ ಗ್ರಾಮಲೆಕ್ಕಾಧಿಕಾರಿಗೆ ಸೂಚಿಸಿದರು.
ಈ ಕುರಿತು ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿ ಖವಾಸ್, ಘಾಳಪೂಜಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಜಾಗೆಯ ಲಭ್ಯತೆಗಾಗಿ ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಸಭೆಯಲ್ಲಿ ತಿಳಿಸಿದರು.
ಘಾಳಪೂಜಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ದುಮ್ಮಿಹಾಳ ಗ್ರಾಮದ ಸವರ್ೆ ನಂಬರ್ 2 ರಲ್ಲಿ ತಾಲೂಕ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳ ಹೆಸರಲ್ಲಿರುವ 28 ಗುಂಟೆ ಜಾಗೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಅತೀಕ್ರಮಣ ಮಾಡಿಕೊಂಡಿದ್ದು ಇತ್ತೀಚೆಗೆ ಗ್ರಾಮಪಂಚಾಯಿತಿ ಗಮನಕ್ಕೆ ಬಂದಿದ್ದು ಸದರಿ ಜಾಗೆಯನ್ನು ಅತಿಕ್ರಮಣದಿಂದ ತೆರವುಗೊಳಿಸಲು ಮುಂದಾಗುವಂತೆ ಗ್ರಾಪಂ ಅಧ್ಯಕ್ಷ ಗಂಗಾಧರಗೌಡ ಅವರು ಪಿಡಿಓ ಗೋಪಾಲಸ್ವಾಮಿ ಅವರಿಗೆ ಸೂಚಿಸಿದರು.
ಗ್ರಾಪಂ ವ್ಯಾಪ್ತಿಯ ಮುತ್ತಲಪುರ ಗ್ರಾಮದ ಅಂಗನವಾಡಿ ಶಿಕ್ಷಕಿ ಮಾತನಾಡಿ ಅಂಗನವಾಡಿ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು ಅಲ್ಲಿನ ಮಕ್ಕಳಿಗೆ ಪ್ರಾಣಾಪಾಯವಾಗುವ ಸಂಭವವಿದೆ.
ಈ ಬಗ್ಗೆ ಹಲವಾರು ಬಾರಿ ತಮ್ಮ ಇಲಾಖೆಗೆ ಹಾಗೂ ಗ್ರಾಮಪಂಚಾಯಿತಿಗೆ ಮನವಿ ಸಲ್ಲಿಸಿದ್ದು ಯಾವುದೇ ಕ್ರಮವಾಗಿಲ್ಲ.
ಈಗಲಾದರೂ ಸಹ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂಜಾಗ್ರತೆಯ ದೃಷ್ಟಿಯಿಂದ ಕೇಂದ್ರದ ಸ್ಥಳಾಂತರಕ್ಕೆ ಕ್ರಮವಹಿಸುವಂತೆ ಸಭೆಯಲ್ಲಿ ಮನವಿ ಮಾಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆಅಂಗನವಾಡಿ ಕೇಂದ್ರದ ಸ್ಥಳಾಂತರಕ್ಕೆ ಕ್ರಮವಹಿಸುವಂತೆ ಪಿಡಿಓ ಗೋಪಾಲಸ್ವಾಮಿ ಅವರಿಗೆ ಗ್ರಾಪಂ ಅಧ್ಯಕ್ಷ ಗಂಗಾಧರಗೌಡ ದೊಡ್ಡಗೌಡ್ರ ಅವರು ಸೂಚಿಸಿದರು.
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಲೋಪದೋಷಗಳು ಕಂಡುಬರದಂತೆ ಕ್ರಮವಹಿಸಬೇಕೆಂದು ಶಾಲಾ ಶಿಕ್ಷಕರಿಗೆ ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಗ್ರಾಪಂ ಅಧ್ಯಕ್ಷ ಗಂಗಾಧರಗೌಡ ದೊಡ್ಡಗೌಡ್ರ ಅವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯಲ್ಲಿ ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಹೊಳಬಸಮ್ಮ ದಾಸೋಹಮಠ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸುರೇಶ ಕಳ್ಳಿಮನಿ ಗ್ರಾಪಂ ಕಾರ್ಯದಶರ್ಿ ಕೃಷ್ಣಾ ಭಗವಂತಗೌಡ್ರ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು.