ಸರಕಾರದ ಶ್ಯೂ ಮತ್ತು ಸಾಕ್ಸಗಳ ವಿತರಣಾ ಕಾರ್ಯಕ್ರಮ


ಲೋಕದರ್ಶನ ವರದಿ

ರಾಣಿಬೆನ್ನೂರು 04: ಸರಕಾರ ಮಕ್ಕಳ ಸರ್ವತೂಮುಖ ಬೆಳವಣಿಗೆ ಹಾಗೂ ಪರಿಪೂರ್ಣ ಶಿಕ್ಷಣ ದೂರಕಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಪರಿಣಾಮ ಇಂದು ಸಾರ್ವತ್ರಿಕವಾಗಿ  ಶಿಕ್ಷಣದ ಪ್ರಗತಿ ಸಾಧ್ಯವಾಗುತ್ತಲಿದೆ ಎಂದು ಹೆಡಿಯಾಲ ವೀರಕ್ತಮಠದ ಪೂಜ್ಯ ನಿರಂಜನಸ್ವಾಮಿಗಳು ನುಡಿದರು.

  ಹೆಡಿಯಾಲ ಗ್ರಾಮದ ಸರಕಾರಿ ಉದರ್ು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಸಹಯೋಗದಲ್ಲಿ ನಡೆದ ಸರಕಾರದ ಶ್ಯೂ ಮತ್ತು ಸಾಕ್ಸಗಳ ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. 

ಪ್ರಸ್ತುತ ಸಂದರ್ಭದಲ್ಲಿ ಸರಕಾರಿ ಶಾಲೆಗಳಿಗಿಂತ  ಖಾಸಗಿ  ಶಾಲೆಯಲ್ಲಿಯೇ ಬಹುತೇಕ  ಮಕ್ಕಳು ತಮ್ಮ ಶಿಕ್ಷಣ ನಿರತರಾಗಿದ್ದಾರೆ. ಇದರಿಂದ ಸರಕಾರಿ ಶಾಲೆಗಳಲ್ಲಿ  ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಲಿದೆ. ಇದನ್ನು ತಪ್ಪಿಸಬೇಕಾದರೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕು. 

ಉದರ್ು ಶಾಲೆಯಲ್ಲಿ ನೂರಕ್ಕೆ ನೂರು ಮಕ್ಕಳು ಶಿಕ್ಷಣ ಕಲಿಯುತ್ತಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.

   ಗ್ರಾ.ಪಂ. ಮಾಜಿ ಅಧ್ಯಕ್ಷೆ ನನ್ನೀಮಾ ರಾ  ಉಕ್ಕುಂದ ಅವರು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

   ಎಸ್.ಡಿ.ಎಂ.ಸಿ ಅದ್ಯಕ್ಷ ಎಂ.ಎ. ರಟ್ಟಿಹಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್ ಸಮೀತಿ ಅಧ್ಯಕ್ಷ ಹಸನ್ಸಾಬ್ ಕೊಪ್ಪದ, ಸದಸ್ಯರಾದ  ಕಮಾಲಸಾಬ ಮಾಳಗಿಮನಿ, ಅಕ್ಬರಸಾಬ ಗಡ್ಡಿಗಾರ, ಮೌಲಾನ್ಸಾಬ ನಾಸಿಪುಡಿ, ಚಮನ್ಮಿಯಾ ಉಕ್ಕುಂದ, ಶಬೀನಾ ಹಾವನೂರ, ಶಬೀನಾ ಗಡ್ಡಿಗಾರ, ಪರವೀನ ಹಾವನೂರ, ಪ್ರಧಾನ ಗುರು ಸಿ.ಎಫ್. ಹುಲ್ಮನಿ ಸಹ ಶಿಕ್ಷಕಿ ಬಿ.ಜ,ೆ ಕಲ್ಮನಿ ಸೇರಿದಂತೆ ಮಕ್ಕಳ ಪಾಲಕರು ಗ್ರಾಮದ ನಾಗರೀಕರು ಉಪಸ್ಥಿತರಿದ್ದರು.