ಉತ್ತಮ ಆರೋಗ್ಯಕ್ಕೆ ಶೌಚಾಲಯ ಅಗತ್ಯ : ಪರನಗೌಡರ

ಬಾಗಲಕೋಟೆ,19: ಆರೋಗ್ಯ ರಕ್ಷಣೆ ಎಲ್ಲದರಕ್ಕಿಂತಲೂ ಅವಶ್ಯವಾಗಿದ್ದು, ಉತ್ತಮ ಆರೋಗ್ಯ ಹಾಗೂ ಸ್ವಚ್ಛತೆಗೆ ಶೌಚಾಲಯ ಅಗತ್ಯವಾಗಿದೆ ಎಂದು ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಹೇಳಿದರು. 

ತಾಲೂಕಿನ ಶಿರೂರ ಗ್ರಾಮದ ಸಿದ್ದೇಶ್ವರ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಹಾಗೂ ಗ್ರಾಮ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಲುಷಿತದಿಂದಾಗುವ ದುಷ್ಪರಿಣಾಮಗಳು ಹಾಗೂ ಸ್ವಚ್ಛತೆಗಳಿಂದಾಗುವ ಪರಿಣಾಮಗಳ ಬಗ್ಗೆ ಸಾಧಕ ಬಾದಕಗಳನ್ನು ಅರಿತ ಸರಕಾರ ಸ್ವಚ್ಚ ಭಾರತ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಮೂಡಲಿ ಎಂದು ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು.

ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಸಂಘ ಸಂಸ್ಥೆಗಳು ಸರಕಾರದೊಡನೆ ಕೈ ಜೋಡಿಸಿದ್ದು, ವಿಶೇಷವೇನೆಂದರೆ ಅನೇಕ ಮಠಗಳು ಸ್ವಾಮೀಜಿಗಳು ಈ ಮೊದಲು ವಿದ್ಯಾಸಂಸ್ಥೆಗಳನ್ನು ಹಾಗೂ ಇತರೆ ಸಂಸ್ಥೆಗಳನ್ನು ಪ್ರಾರಂಭಿಸುತ್ತಿದ್ದರೆ, ಇಂದಿನ ಕಾರ್ಯಕ್ರಮದಲ್ಲಿ ಮೈಗೂರಿನ ಗುರುಪ್ರಸಾದ ಶ್ರೀಗಳು ಸ್ವಚ್ಛತೆ ಬಗ್ಗೆ ಎಲ್ಲಿಲ್ಲದ ಪ್ರಯತ್ನ ಮಾಡಿ ವಿಶೇಷರಲ್ಲಿ ವಿಶೇಷರಾಗಿದ್ದಾರೆ. ಇಂತಹ ಶ್ರೀಗಳ ಮಾರ್ಗದರ್ಶನ ಹಾಗೂ ಅವರ ಶ್ರಮವನ್ನಾದರೂ ಪರಿಣಿಸಿ ಶೌಚಾಲಯ ಉಪಯೋಗಿಸಿಕೊಂಡು ಸುಂದರ ಸಮಾಜ ನಿಮರ್ಿಸಲು ಮುಂದಾಗಬೇಕೆಂದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ ಜಾಗತಿಕ ಮಟ್ಟದಲ್ಲಿ ಭಾರತ ಎಲ್ಲ ಕ್ಷೇತ್ರದಲ್ಲಿ ಸುಸಂಸ್ಕೃತ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಇತರೆ ದೇಶಗಳಿಗೆ ಮಾದರಿಯಾಗಿದೆ ಆದರೆ ಶೌಚಾಲಯ ಬಳಸುವಲ್ಲಿ ಹಾಗೂ ಸ್ವಚ್ಛತೆಗೆ ಪ್ರಾತಿನಿತ್ಯ ಕೊಡುವಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದು, ಈಗ ಬೆಳೆಯುತ್ತಿರುವ ಜನಸಂಖ್ಯಾ ಆಧಾರಿತ ಹಾಗೂ ಸುಧಾರಣೆಯತ್ತ ಜನಜೀನವ ಸಾಗುತ್ತಿರುವದರಿಂದ ಶೌಚಾಲಯ ಅವಶ್ಯವಾಗಿದ್ದು, ಅದಕ್ಕೆ ದೇವಾಲಯದಷ್ಠೆ ಮಹತ್ವ ನೀಡಲಾಗುತ್ತಿದೆ ಎಂದರು.

ಮಲ ವಿಸರ್ಜನೆ ಮತ್ತು ಶೌಚ ಎಂಬ ಶಬ್ದ ಬಳಕೆ ಅನಾಗಿರಕತೆ ಪ್ರತೀಕ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಇಂದು ಅದು ವೇದ ವಾಖ್ಯವಾಗಿ ಹೊರಹೊಮ್ಮಿದ್ದು, ಅದರಿಂದಾಗುವ ಪ್ರಯೋಜನದಿಂದ ಅಸಯ್ಯ ಪಟ್ಟುಕೊಳ್ಳುವಂತಹ ಸಮಯ ಕಳೆದು ಹೋಗಿದೆ. ಮಂಡೂಕ ಉಪನಿಷತ್ತಿನಲ್ಲಿ ಸತ್ಯಮೇವ ಜಯತೆ ಎಂಬ ಶ್ಲೋಕ ಎಲ್ಲ ಮನೆ ಮಾತಾಗಿದ್ದು, ಆದರೆ ಇಂದು ಅದು ಸ್ವಚ್ಚ ಮೇವ ಜಯತೆ ಆಗಬೇಕಾಗಿದೆ ಎಂದರು. ಜಿಲ್ಲೆಯಾದ್ಯಂತ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿರುವದರಿಂದ ಪ್ರತಿ ಕುಟುಂಬಕ್ಕು ಶೌಚಾಲಯ ಅವಶ್ಯವಾಗಿದ್ದು, ಅದಕ್ಕಾಗಿ 1900 ಮನೆಗಳಿಗೆ ಶೌಚಾಲಯ ನಿಮರ್ಿಸಲಾಗುತ್ತಿದೆ. ದೇಶದ ಕೆಲವೇ ರಾಜ್ಯಗಳ ಪೈಕಿ ಕನರ್ಾಟಕ ಮುಂಚುಣಿಯಲ್ಲಿದೆ ಎಂದರು.

ಸಾನಿಧ್ಯ ವಹಿಸಿದ್ದ ಮೈಗೂರ ಗ್ರಾಮದ ಗುರುಪ್ರಸಾದ ಶ್ರೀಗಳು ಮಾತನಾಡಿ ಹಿಂದಿನ ರಾಜ ಮಹಾರಾಜರು ತಮ್ಮ ಮಡದಿಯರಿಗಾಗಿ ತಾಜಮಹಲ್, ಗೋಲ್ಗುಂಬಜ್ನಂತಹ ಐತಿಹಾಸಿಕ ಕಟ್ಟಡಗಳನ್ನು ನಿಮರ್ಿಸಿ ಇತಿಹಾಸ ರಚಿಸಿದರು. ಆದರೆ ಇಂದು ನೀವುಗಳೆಲ್ಲರೂ ನಿಮ್ಮ ಶ್ರೀಮತಿಯರ ನೆನಪಿಗಾಗಿ ಒಂದು ಚಿಕ್ಕದಾದ ಶೌಚಾಲಯ ಕಟ್ಟುವುದು ಇಂದು ಅವಶ್ಯವಾಗಿದೆ. ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಭಾರತ ಸ್ವಚ್ಛ ಭಾರತ ಅಭಿಯಾನ ಬಳಸಿಕೊಂಡು ಎಲ್ಲ ದೇಶಗಳಿಗಿಂತ ಭಾರತ ಮಾದರಿ ದೇಶವಾಗಬೇಕಾದರೆ ಇಂದಿನಿಂದಲೇ ಪ್ರತಿಯೊಬ್ಬರು ಶೌಚಾಲಯ ಬಳಸಿ ಆರೋಗ್ಯ ರಕ್ಷಿಸಿಕೊಳ್ಳಬೇಕೆಂಬ ಪಣ ತೊಡಬೇಕಾಗಿದೆ ಎಂದರು.

ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಎನ್.ವಾಯ್.ಬಸರಿಗಿಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಅಲ್ಲದೇ ಶೌಚಾಲಯ ಅಭಿಯಾನದ ಅಂಗವಾಗಿ ಶಾಲಾ ಮಕ್ಕಳಿಗೆ ಹಮ್ಮಿಕೊಂಡ ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿರೂರ ಗ್ರಾ.ಪಂ ಅಧ್ಯಕ್ಷ ರಂಗಪ್ಪ ಮಳ್ಳಿ, ಉಪಾಧ್ಯಕ್ಷೆ ಗಿರಿಜಾ ಎಮ್ಮಿಮಠ, ತಾ.ಪಂ ಸದಸ್ಯರಾದ ರಾಜಶೇಖರ ಅಂಗಡಿ, ರುಕುಮಾಬಾಯಿ, ಜಿ.ಪಂ ಯೋಜನಾ ನಿದರ್ೇಶಕ ಎಸ್.ಎಸ್.ಹಿರೇಮಠ, ಪಂಚಾಯತ ಅಭಿವೃದ್ದಿ ಅಧಿಕಾರಿ ಅಮರೆಗೌಡ ಜರಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.