ಜಾನಪದ ಕಥೆಗಳಲ್ಲಿ ನಿಸರ್ಗವೂ ಕೂಡಾ ಮಾತನಾಡುತ್ತದೆ: ಕುಲಕರ್ಣಿ
ಗೋಕಾಕ 19: ಜಾನಪದ ಸತ್ವವನ್ನು ದುಡಿಸಿಕೊಳ್ಳುವುದರೊಂದಿಗೆ ಕನ್ನಡ ಜನಪದ ಕಥೆಗಳನ್ನು ಮಾನವೀಯ ಸಂಬಂಧಗಳನ್ನು ಬೆಸೆಯುತ್ತವೆ ಎಂದು ಹಿರಿಯ ಚಿಂತಕ ವಸಂತರಾವ್ ಕುಲಕರ್ಣಿ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಜಾನಪದ ಪರಿಷತ್ತು, ಗೋಕಾಕ ತಾಲೂಕು ಘಟಕ ಜಂಟಿಯಾಗಿ ಬಸವ ನಗರದಲ್ಲಿಯ ಜಾನಪದ ತಜ್ಞ ಡಾ. ನಿಂಗಣ್ಣ ಸಣ್ಣಕ್ಕಿ ಸಭಾಭವನದಲ್ಲಿ ಶನಿವಾರ ಸಂಜೆ: 5 ಘಂಟೆಗೆ ಹಮ್ಮಿಕೊಂಡಿದ್ದ ಜಾನಪದ ಮುಕ್ತ ಮಾತುಕತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮನುಷ್ಯ ಬದುಕಿಗೆ ಸಂದೇಶ ಸಾರುವ ಜಾನಪದ ಕಥೆಗಳಲ್ಲಿ ನಿಸರ್ಗವೂ ಕೂಡಾ ಮಾತನಾಡುತ್ತದೆ ಎಂದರು.
ವರ್ತಕ ಮಹಾಂತೇಶ ತಾಂವಶಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಶೆಯ ಭಾಷಣ ಮಾಡಿದ ಪ್ರೊ. ಸುರೇಶ ಮುದ್ದಾರ ಇಂದಿನ ಸಾಹಿತ್ಯದ ಸೃಜನಶೀಲತೆಗಾಗಲಿ ಅಥವಾ ವೈಚಾರಿಕತೆಗೆ ಜಾನಪದವೇ ಮೂಲ ತಳಹದಿಯಾಗಿದೆ. ಹೃದಯ ವೈಶಾಲ್ಯತೆ ಮೆರೆಯುವ ಕಥೆಗಳು ಮಾನವ ಜನಾಂಗದ ಮೌಲೀಕ ವಿಚಾರವನ್ನು ಎತ್ತಿ ಹಿಡಿಯುವುದೇ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು. ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಕಥೆಗಾತರ್ಿ ರಜನಿ ಜೀರಗ್ಯಾಳ ಹೇಳಿದ ಕಥೆಗಳನ್ನು ಡಾ. ಸುರೇಶ ಹನಗಂಡಿ ಹಾಗೂ ಪ್ರೊ. ಮಹಾನಂದಾ ಪಾಟೀಲ ವಿಮರ್ಶ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕಿ ಬಸವ್ವಾ ಯಲ್ಲಪ್ಪಾ ಕೊಳದೂರ ಇವರನ್ನು ಸನ್ಮಾನಿಸಲಾಯಿತು.
ಸೃಜನಶೀಲ ಸಾಹಿತ್ಯ ಮಹಿಳಾ ಬಳಗದ ರಾಜ್ಯ ಉಪಾಧ್ಯಕ್ಷೆ ಭಾರತಿ ಮದಭಾವಿ, ಸಿರಿಗನ್ನಡ ಮಹಿಳಾ ಬಳಗದ ತಾಲೂಕಾಧ್ಯಕ್ಷೆ ಸಂಗೀತಾ ಬನ್ನೂರ, ಕಲಾವಿದೆ ಮೋನಿಕಾ ಹಲವಾಯಿ, ಕವಿ ಈಶ್ವರ ಮಮದಾಪೂರ, ಎಂ.ಬಿ. ಪಾಟೀಲ, ಬಸವರಾಜ ಹಣುಮಂತಗೋಳ, ಬಿ.ಬಿ. ಪಟಗುಂದಿ, ಮುತ್ತೆಪ್ಪಾ ಹರಿಜನ, ಶಿವಲೀಲಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಜಾನಪದ ಪುರವಂತ ಶಿವಲಿಂಗಪ್ಪಾ ಬಾಗೇವಾಡಿ ಪ್ರಾಥರ್ಿಸಿದರು. ಪ್ರಾ. ಜಯಾನಂದ ಮಾದರ ಸ್ವಾಗತಿಸಿದರು. ಪ್ರೊ. ಯರಿಯಪ್ಪ ಬಳಗುಕರ್ಿ ನಿರೂಪಿಸಿದರು. ವಕೀಲ ಬಲದೇವ ಸಣ್ಣಕ್ಕಿ ವಂದಿಸಿದರು.