ಲೋಕದರ್ಶನ ವರದಿ
ಯಲಬುಗರ್ಾ 22: ನಾವು ಇಲ್ಲಿಯವರೆಗೆ ದೇವರು ಇದ್ದಾನೆ ಎನ್ನುವದನ್ನ ಕೇಳಿದ್ದೇವೆ ಆದರೆ ನೋಡಿರುವದಿಲ್ಲಾ ಕಣ್ಣಿಗೆ ಕಾಣುವ ದೇವರನ್ನು ನೊಡಿದ್ದರೆ ಅದು ಸಿದ್ಧಗಂಗಾ ಶ್ರೀಗಳನ್ನ ಎಂದು ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಹೇಳಿದರು.
ನಗರದ ಚನ್ನಮ್ಮ ವೃತ್ತದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಶಿವೈಕ್ಯರಾದ ಶಿವಕುಮಾರ ಮಹಾಸ್ವಾಮೀಗಳಿಗೆ ಶ್ರದ್ಧಾಂಜಲಿ ಅಪರ್ಿಸಿ ಅವರು ಮಾತನಾಡಿದರು.
ನೂರಾರು ಬಡ ಹಾಗೂ ಅನಾಥ ಮಕ್ಕಳಿಗೆ ಅನ್ನ ವಿದ್ಯ ಕೊಟ್ಟು ಆಶ್ರಯ ನೀಡಿದವರು, ಇವರು ಮಾಡಿದ ಸಾಧನೆಗಳನ್ನ ಇಡೀ ವಿಶ್ವವೇ ಕೊಂಡಾಡುತ್ತಿದೆ ಹಾಗೂ ಇವರ ಅಗಲಿಕೆಯಿಂದ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ, ನಡೆದಾಡುವ ದೇವರು ತ್ರಿವಿಧ ದಾಸೋಹಿ ಕಾಯಕ ಯೋಗಿ ಶತಾಯುಸಿಯವರು ಶಿವಸಾಯುಜ್ಯ ಹೊಂದಿರುವದು ಕೋಟ್ಯಾಂತರ ಭಕ್ತ ಸಮೂಹ ದುಃಖದಲ್ಲಿದ್ದಾರೆ. ಯಾವುದೇ ಸರಕಾರ ಮಾಡಲಾಗದ ಕೆಲಸವನ್ನು ಶ್ರೀಗಳು ಮಾಡಿ ತೊರಿಸಿದ್ದಾರೆ ಅವರ ದೇಹ ಮಾತ್ರ ಕಣ್ಮರೆಯಾಗಿದೆ ಆದರೆ ಅವರು ನಮಗೆ ಹಾಕಿ ಕೊಟ್ಟಂತರ ಆದರ್ಶಗಳು ಜಿವಂತವಾಗಿ ಇರುತ್ತವೆ ಇಂತಹ ಮಹಾನ್ ಶರಣರು ಮತ್ತೊಮ್ಮೆ ನಮ್ಮ ನಾಡಿನಲ್ಲಿ ಜನಿಸಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಿವಕುಮಾರ ಯಡಿಯಾಪೂರ, ಆನಂದ ಉಳ್ಳಾಗಡ್ಡಿ, ವಸಂತಕುಮಾರ ಭಾವಿಮನಿ, ಈರಪ್ಪ ಬಣಕಾರ, ಕೋಟೇಶ ಭೂತೆ, ಶಿವು ರಾಮಶೆಟ್ಟಿ, ಯಮನೂರಪ್ಪ ಮ್ಯಾಗಳಮನಿ, ಬೀಮೇಶ ವಡ್ಡರ, ಬಸವರಾಜ ಕೊಪ್ಪಳ, ಬಸವರಾಜ ಕೊಳ್ಳಿ, ಮೌನೇಶ, ಹುಲಗಪ್ಪ, ಅಮರೇಶ, ಮರಿಯಪ್ಪ ಸೇರಿದಂತೆ ಅನೇಕರು ಹಾಜರಿದ್ದರು.