ಚಿರತೆ ದಾಳಿಯಿಂದ ಆಡುಗಳ ಬಲಿ: ಜನರಲ್ಲಿ ಆತಂಕ

ಲೋಕದರ್ಶನ ವರದಿ

ಕಂಪ್ಲಿ 18:ತಾಲೂಕಿನ ಸಮೀಪದ ರಾಮಸಾಗರ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಆಡುಗಳು ಗುರುವಾರ ಬಲಿಯಾಗಿದ್ದು, ಜನತೆಯ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 

ಗ್ರಾಮದ ಹೊರವಲಯದಲ್ಲಿ ಕಾಗೆ ಪಂಪಾಪತಿ ಸೇರಿದ ಎರಡು ಆಡುಗಳನ್ನು ಮೇಯಿಸಲು ಹೋದಾಗ, ಚಿರತೆ ದಾಳಿ ನಡೆಸಿ ತಿಂದು ಹಾಕಿರುವ ಘಟನೆ ನಡೆದಿದೆ. ಇತ್ತೀಚೆಗೆ ಸೋಮಲಾಪುರ, ದೇವಲಾಪುರ, ಮೆಟ್ರಿ, ಹಳೇ ದರೋಜಿಯಲ್ಲಿ ಚಿರತೆ ದಾಳಿಗೆ ಜನರಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಈಗ ರಾಮಸಾಗರ ಗ್ರಾಮದಲ್ಲಿ ಆಡುಗಳನ್ನು ಕೊಂದಿದ್ದರಿಂದ ಜನರಲ್ಲಿ ಆತಂಕ ಚಿರತೆಯ ಭಯ ಸೃಷ್ಠಿಯಾಗಿದೆ.  ಜೀವನಕ್ಕೆ ಆಧಾರವಾಗಿದ್ದ ಆಡುಗಳೇ ಚಿರತೆ ಬಾಯಿಗೆ ಬಲಿಯಾಗಿದ್ದರಿಂದ ನಷ್ಟ ಅನುಭವಿಸುವಂತಾಗಿದೆ ಎಂಬುದು ಸಂಸ್ರತ್ತನ ಅಳಲಾಗಿದೆ. ಇದರ ನಷ್ಟ ಪರಿಹಾರ ನೀಡಬೇಕೆಂದು ಸಂತ್ರಸ್ತ ಕಾಗೆ ಪಂಪಾಪತಿ ಅವರು ಹೊಸಪೇಟೆ ವಲಯ ಅರಣ್ಯಾಧಿಕಾರಿ ಕಚೇರಿಗೆ ಶುಕ್ರವಾರ ಮನವಿಯೊಂದಿಗೆ ದೂರು ನೀಡಿದ್ದಾರೆ.