ಮುದ್ದೇಬಿಹಾಳ: ದಕ್ಷಿಣ ಕನರ್ಾಟಕದಲ್ಲಿರುವ ರಾಜಕಾರಣಿಗಳಿಗೆ ರಾಜಕೀಯ ಆಶ್ರಯ ಕೊಟ್ಟಿದ್ದು, ಸಮಗ್ರ ಕನರ್ಾಟಕವನ್ನು ಬೆಳೆಸಿದ ಕೀತರ್ಿ ಉತ್ತರ ಕನರ್ಾಟಕದವರಿಗೆ ಇದೆ ಎನ್ನುವುದನ್ನು ಎಲ್ಲರೂ ಅರಿಯಬೇಕು. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿಗಳು ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.
ಇಲ್ಲಿನ ವಿಜಯಮಹಾಂತೇಶ ದಾಸೋಹ ಭವನದಲ್ಲಿ ಕೆಜೆಯೂ ಸಂಘಟನೆಯ ಜಿಲ್ಲಾ, ತಾಲೂಕು ಘಟಕದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಸನ್ಮಾನ ಸಂಯುಕ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ದಕ್ಷಿಣ ಕನರ್ಾಟಕದ ಮೈಸೂರಿನವರು. ಆದರೆ ಅವರಿಗೆ ರಾಜಕೀಯ ಬಲ ತಂದುಕೊಟ್ಟಿದ್ದೂ ಉತ್ತರ ಕನರ್ಾಟಕದ ಬಾದಾಮಿ. ಇದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಉಕ ಅಭಿವೃಧ್ದಿಗಾಗಿ ಸಾವಿರಾರು ಕೋಟಿ ರೂ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಆದರೆ ಅವರು ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ಜಾನಪದ ವಿವಿ ಪ್ರಾರಂಭಗೊಂಡು ವರ್ಷಗಳೇ ಕಳೆದರೂ ನಯಾಪೈಸೆಯನ್ನೂ ಅಭಿವೃದ್ದಿಗೆ ನೀಡದಿರುವುದು ಉಕ ಅಭಿವೃದ್ದಿಗೆ ತೋರುತ್ತಿರುವ ಮಲತಾಯಿ ಧೋರಣೆಗೆ ಉದಾಹರಣೆಯಾಗಿದೆ. ಇದೇ ಸಿದ್ದರಾಮಯ್ಯ ಮೈಸೂರಿನ ವಿಶ್ವವಿದ್ಯಾಲಯವೊಂದರ ಅಭಿವೃಧ್ದಿಗೆ ನುರಾರು ಕೋಟಿ ರೂ ಕೊಟ್ಟಿದ್ದಕ್ಕೆ ದಾಖಲೆ ಇದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಉಕಕ್ಕೆ ಆಗಿರುವ ಅನ್ಯಾಯವನ್ನು ದಾಖಲೆ ಸಮೇತ ವಿಧಾನಸಭೆಯಲ್ಲಿ ಎತ್ತಿ ತೋರಿಸುವ ಮೂಲಕ ಉಕಕ್ಕೆ ನ್ಯಾಯ ಕೊಡಿಸಲು ಪ್ರಯತ್ನ ನಡೆಸುವುದಾಗಿ ಶಾಸಕ ನಡಹಳ್ಳಿ ಸ್ಪಷ್ಟಪಡಿಸಿದರು.
ಕಾರ್ಯಕ್ರಮವನ್ನು ಎಲ್ಲರೂ ಜ್ಯೋತಿ ಬೆಳಗಿಸುವ ಮೂಲಕ ಸಾಮೂಹಿಕವಾಗಿ ಉದ್ಘಾಟಿಸಲಾಯಿತು. ಅತಿಥಿಯಾಗಿದ್ದ ಎಪಿಎಂಸಿ ನಿದರ್ೇಶಕ ವೈ.ಎಚ್.ವಿಜಯಕರ್, ಕಾಂಗ್ರೆಸ್ ಧುರೀಣ ಸಂಗಮೇಶ ಬಬಲೇಶ್ವರ, ಯೂನಿಯನ್ ಕೊಡಮಾಡುವ ಮಾಧ್ಯಮ ರತ್ನ ವಾಷರ್ಿಕ ಪ್ರಶಸ್ತಿ ಸ್ವೀಕರಿಸಿದ ಖಾಸಗಿ ಸುದ್ದಿ ವಾಹಿನಿ ಸಂಪಾದಕಿ ರಾಧಾ ಹಿರೇಗೌಡರ ಮಾತನಾಡಿದರು.
ಮಾತನಾಡಿದರು. ವಿಜಯಪುರ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಬಿಜೆಪಿ ಧುರೀಣರಾದ ಆರ್.ಎಸ್.ಪಾಟೀಲ ಕೂಚಬಾಳ, ಕಾಶಿಬಾಯಿ ರಾಂಪೂರ, ಜೆಡಿಎಸ್ ಧುರೀಣೆ ಮಂಗಳಾದೇವಿ ಬಿರಾದಾರ, ತಹಸೀಲ್ದಾರ್ ಎಂಎಎಸ್ ಬಾಗವಾನ, ತಾಪಂ ಇಓ ಡಾ.ಸುರೇಶ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ.ಬೆಳಗಲ್ಲ, ಅಶೋಕ ನಾಡಗೌಡ, ವಿಜಯಮಹಾಂತೇಶ ಸಾಲಿಮಠ ಮತ್ತಿತರರು ವೇದಿಕೆಯಲ್ಲಿದ್ದರು.
ಯುವಪತ್ರಕರ್ತ ದಿ.ನಾಗರಾಜ ಜಮಖಂಡಿ ಸ್ಮರಣಾರ್ಥ ಜಮಖಂಡಿ ಪರಿವಾರ ಸಮಾಜ ಸೇವಾ ಮತ್ತು ದಿ.ನಾಗರಾಜ ಜಮಖಂಡಿ ಪ್ರತಿಷ್ಠಾನದಿಂದ ಕೊಡಮಾಡುವ ಸ್ಮರಣಿಕೆ, ಪ್ರಶಸ್ತಿ ಪತ್ರ, ರು.11000 ನಗದು ಪುರಸ್ಕಾರ ಒಳಗೊಂಡ ಮಾಧ್ಯಮ ಸಾಧಕ ಪ್ರಶಸ್ತಿಯನ್ನು ಕನ್ನಡಪ್ರಭದ ವಿಜಯಪುರ ಜಿಲ್ಲಾ ವರದಿಗಾರ ರುದ್ರಪ್ಪ ಆಸಂಗಿ ಅವರಿಗೆ ನೀಡಿ ಸತ್ಕರಿಸಲಾಯಿತು.
ವಿಜಯಪುರ ಜಿಲ್ಲೆ ಮತ್ತು ವಿವಿಧ ತಾಲೂಕುಗಳ ಮುದ್ರಣ, ವಿದ್ಯುನ್ಮಾನ ಮಾಧ್ಯಮದ ಸಾಧಕ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಕೆಜೆಯೂ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿ ಪ್ರಾಥರ್ಿಸಿದರು. ನಾರಾಯಣ ಮಾಯಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎನ್.ಹೂಗಾರ, ಬಸವರಾಜ ಹಂಚಲಿ, ಟಿ.ಟಿ.ಲಮಾಣಿ ನಿರೂಪಿಸಿದರು. ಪುಂಡಲಿಕ ಮುರಾಳ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.