ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಿ

ಲೋಕದರ್ಶನ ವರದಿ 

ಯರಗಟ್ಟಿ 15: ಮಕ್ಕಳಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ದೊಡ್ಡದು ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ವಿಶ್ವಕರ್ಮ ಕನ್ನಡ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 30ನೇ ವಾಷರ್ಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡುತ್ತಾ ಇಂದಿನ ಸಮಾಜದಲ್ಲಿ ಪಾಶ್ಚಿಮಾತ್ಯ ಉಡುಗೆ ತೊಡುಗೆ ಆಚರಣೆಗಳಿಗೆ ಮನಸೋತು ನಮ್ಮ ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮರೆಯುತ್ತಿರುವುದು ಖೇದಕರ ಸಂಗತಿ. 

ಸ್ವಾರ್ತ ಮನೋಭಾವಣೆ ಹೆಚ್ಚಾಗಿ ಸಂಭಂದಗಳು ಮರೆಮಾಚುತ್ತಿದ್ದು ಪ್ರಸ್ತುತ ವೃದ್ಧಾಶ್ರಮಗಳು ಹೆಚ್ಚುತ್ತಿವೆ, ಶಿಕ್ಷಣದಲ್ಲಿ ಏಷ್ಟೇ ಬುದ್ಧಿ ಜೀವಿಗಳಾಗಿ ಸಮಾಜದಲ್ಲಿ ಎತ್ತರೆತ್ತಕ್ಕೆ ಬೆಳೆದರೇನು, ಮನೆಯಲ್ಲಿ ಹೆತ್ತ ತಂದೆ-ತಾಯಿಯನ್ನು ನೋಡದಿದ್ದರೆ ಏನು ಪ್ರಯೋಜನ ಎಂದರು.

ನಿವೃತ್ತ ಶಿಕ್ಷಕ ಎ.ಕೆ.ಜಮಾದಾರ ಮಾತನಾಡಿ ಚಿಕ್ಕದಾದ ಕೊಠಡಿಯಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಮುವತ್ತು ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆಯಲು ಕಾರಣಿಕರ್ತನಾದ ದಿವಗಂತ ವಾಸುದೇವ ಬಡಿಗೇರ ಅವರ ಕಾರ್ಯ ಶ್ಲಾಘನೀಯ ಎಂದರು.

ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ವಿದ್ಯಾಥರ್ಿಗಳಿಗೆ ಬಹುಮಾನ ವಿತರಣೆ, ಚಿಣ್ಣರ ಸಾಂಸ್ಕೃತಿಕ ಸಂಭ್ರಮ ಹಾಗೂ ಝೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪಿಯನ್ 16ನೇ ಆವೃತ್ತಿ ವಿಜೇತ ಕುಮಾರ ಓಂಕಾರ ಪತ್ತಾರ ಅವರಿಂದ ಸಂಗಿತ ಕಾರ್ಯಕ್ರಮ ನಡೆಯಿತು.

ವಿಶ್ವಕರ್ಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆನಂದ ಸತ್ತಿಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ.ಸದಸ್ಯೆ ವಿದ್ಯಾರಾಣಿ ಸೊನ್ನದ, ಎಸ್.ಎಚ್.ನಾಯ್ಕರ, ಡಾ.ವಿಶ್ವನಾಥ ತಾಂಶಿ, ಎಮ್.ವಿ.್ಹಉಪ್ಪಿನ , ರಮೇಶ ದೇವರಡ್ಡಿ, ಬಾಬುಲಾಲ ಬಿಳಿಬಂಟ, ಶಶಿಕಲಾ ಸತ್ತಿಗೇರಿ, ಶಿವಾನಂದ ಮಿಕಲಿ, ಮಹಾದೇವಪ್ಪ ಬಡಿಗೇರ, ಸಚಿನ ಬಡಿಗೇರ, ಬಸನಗೌಡ ಪಾಟೀಲ, ಸೋಮನಿಂಗಪ್ಪ ಬಳಿಗಾರ, ತೌಶಿಫ್ ಅನ್ಸಾರಿ, ಪ್ರಿಯಾಂಕಾ ಅರಳಿಕಟ್ಟಿ ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ, ವಿದ್ಯಾಥರ್ಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.  ಮುಖ್ಯ ಶಿಕ್ಷಕ ಆರ್.ಎಸ್.ಕಲ್ಲನ್ನವರ ಸ್ವಾಗತಿಸಿದರು, ಶಿಕ್ಷಕ ಸಂತೋಷ ತಳವಾರ ನಿರೂಪಿಸಿದರು, ಶಿಕ್ಷಕ ಪಿ.ವಾಯ್.ಬಾಳೋಜಿ ವಂದಿಸಿದರು.