ಘಟಪ್ರಭಾ 04: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯ ಶಿಕ್ಷಕರು ಮಾಡಬೇಕೆಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರ ಹೇಳಿದರು.
ಅವರು ಶುಕ್ರವಾರ ಮಲ್ಲಾಪೂರ ಪಿ.ಜಿ ಪ.ಪಂ ವ್ಯಾಪ್ತಿಯ ಜನತಾ ಪ್ಲಾಟ್ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ 2018ನೇ ಸಾಲಿನ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡುತ್ತ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಆಟ ಪಾಠ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮಕ್ಕಳಲ್ಲಿ ಅಡಗಿದ ಪ್ರತಿಭೆಯನ್ನು ಕಂಡುಕೊಂಡು ಆ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸುವತ್ತ ಪಾಲಕರೂ ಚಿಂತನೆ ಮಾಡಬೇಕೆಂದರು.
ಸಾನಿಧ್ಯವನ್ನು ಯೋಗ ಗುರು ಹಣಮಂತಜಿ ಅವರು ವಹಿಸಿದ್ದರು. ಅಧ್ಯಕ್ಷತೆಯನ್ನು ಮಲ್ಲಾಪೂರ ಪಿ.ಜಿ ಪ.ಪಂ ಅಧ್ಯಕ್ಷೆ ಸುಜಾತಾ ಸುರೇಶ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೋಕಾಕ ಬಿಇಓ ಬೆ.ಕೆ.ಕುಲಕಣರ್ಿ, ಬಿಆರ್ಸಿ ಪಾಟೀಲ, ಸಿ.ಆರ್.ಸಿ ಕೆ.ಟಿ.ಪಾಟೀಲ, ಪ.ಪಂ ಉಪಾಧ್ಯಕ್ಷೆ ಕಸ್ತೂರಿ ಚೌಕಶಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಹಣಮಂತ ಕರೆವ್ವಗೋಳ, ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ನ್ಯಾಯವಾದಿಗಳಾದ ದಯಾನಂದ ಗುಡಾಜ, ಕೆಂಪಣ್ಣಾ ಚೌಕಶಿ, ಮುಖ್ಯೋಪಾದ್ಯಾಯರಾದ ಈಶ್ವರ ರಾಜಾಪೂರೆ, ವಾಯ್.ಬಿ.ಭಾವಿಮನೆ, ಶಿಕ್ಷಕರಾದ ದಿಲೀಪ ಕಲಾರಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಗಂಗಾಧರ, ಬಿ.ಕೆ ಕುಲಕಣರ್ಿ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕಿ ಎನ್.ಎಸ್.ಕಿನಗಿ ಅವರನ್ನು ಸತ್ಕರಿಸಲಾಯಿತು.
ಪ್ರಧಾನ ಗುರುಗಳಾದ ಎಸ್.ಡಿ.ಹಂಚಿನಾಳ ಸ್ವಾಗತಿಸಿದರು. ಶಿಕ್ಷಕಿ ಪೋಳ ನಿರೂಪಿಸಿದರು. ಶಿಕ್ಷಕ ಜಮಾದಾರ ವಂದಿಸಿದರು.