ಬೆಳಗಾವಿ 6 ; ಸ್ಥಳೀಯ ಮಹಾಂತಭವನ ಆವರಣದಲ್ಲಿ 'ಬಸವ ಜಯಂತಿ "ನಿಮಿತ್ತವಾಗಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆ ಮತ್ತು ವಿವಿಧ ಮಹಿಳಾ ಸಂಘಟನೆಗಳು ಅಲ್ಲದೇ ಸರ್ವ ಬಸವ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜರುಗುತ್ತಿರುವ "ಶರಣ ದರ್ಶನ" ಪ್ರವಚನವನ್ನು ಪೂಜ್ಯ ಶ್ರೀ ನಿಜಗುಣ ಪ್ರಭು ಮಹಾಸ್ವಾಮಿಗಳು ತೋಂಟದಾರ್ಯ ಮಠ ಮುಂಡರಗಿ ಇವರು ನಡೆಸಿಕೊಡುತ್ತಿದ್ದು. ಕಳೆದ ಏಳು ದಿನಗಳಿಂದ ಬೆಳಗಿನ ಜಾವ 5-00 ಕ್ಕೆ ಸಹಜ ಶಿವಯೋಗ ಸೂತ್ರಗಳನ್ನು ಹೇಳಿದರು.
ಜಾಗತಿಕ ಶಾಂತಿಗಾಗಿ, ದೇಶದಲ್ಲಿ ಭಯೋತ್ಪಾದನೆ ನಿಮರ್ೂಲನೆ, ಸಕಲ ಜೀವಾತ್ಮ ಗಳಿಗೆ ಲೇಸನ್ನು ಬಯಸಿ ಇಂದು ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಶರಣ ಶರಣೆಯರು ಮಹಾಂತಭವನ ಆವರಣದಲ್ಲಿ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು.