ಬಾಗಲಕೋಟೆ 20:
ಹಣ, ಅಂತಸ್ತು, ಅಧಿಕಾರ ಕೈಗೂಡಿದಾಗ ಸಾಮಾನ್ಯ ಜನರು ಕಣ್ಣಿಗೆ ಕಾಣದಂತಿರುವ
ಅನೇಕ ಅಧಿಕಾರಿಗಳು ತಮ್ಮದೇ ಆದ ಸ್ವಾರ್ಥ ಮತ್ತು
ತಮ್ಮ ಕುಟುಂಬಕ್ಕೆ ಸೀಮಿತವಾದ ವೈಬೋವಿತ ಜೀವನ ಕಳಿಯುತ್ತಿದ್ದಾಗ ಇಂತಹವರಿಗೆಲ್ಲ
ಅಪವಾದ ಎಂಬಂತೆ ಬಾಗಲಕೋಟೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾಗಿ ಇತ್ತೀಚೆಗೆ ನಿಯೋಜನೆ ಗೊಂಡಿರುವರೇ ಗಂಗೂಬಾಯಿ ಮಾನಕರ.
ಜಿ.ಪಂ ಸಿಇಓ
ಅಧಿಕಾರದಲ್ಲಿದ್ದರೂ ಬಡವರ, ಅನಾಥರ ಮತ್ತು ಆಕಶ್ಮಿಕ ಘಟನೆಗಳಿಂದ ತಪ್ಪು ಮಾಡಿ ಜೈಲು ಪಾಲಾದ
ಖೈದಿಗಳ ಬಗ್ಗೆ ಕಳಕಳಿವುಳ್ಳವರಾಗಿದ್ದಾರೆ. ದೇಶದಾದ್ಯಂತ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸುವ ಶ್ರೀಮಂತರು, ಸ್ಥಿತಿವಂತರು ಹಾಗೂ ಅಧಿಕಾರಿಗಳು ತಮ್ಮದೇ
ಆದ ಸಂಭ್ರಮದಲ್ಲಿದ್ದರೆ, ಇತ್ತ ಮಾನಕರ ಮೇಡಮ್
ಅವರು ಹಬ್ಬದ ಸಂಭ್ರಮದಿಂದ ವಂಚಿತರಾಗಲ್ಪಟ್ಟ 50 ಅನಾಥ ಮಕ್ಕಳಿಗೆ ತಮ್ಮ
ಸ್ವಗೃಹದಲ್ಲಿ ವಿಜಯ ದಶಮಿ ದಿನದಂದು
ಮದ್ಯಾಹ್ನ ಹಬ್ಬದ ಊಟ ಉಣಿಸಿ ಅವರ
ಜೊತೆಗೆ ತಾವು ಹಾಗೂ ತಮ್ಮ
ಮಕ್ಕಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ಅಲ್ಲದೇ ಕೆಲವು ಕಾಲ ಅನಾಥ ಮಕ್ಕಳ
ಜೊತೆ ಸಂತಸದಿಂದ ಸಮಯ ಕಳೆದರು.
ನಂತರ ಸಂಜೆ ಜೈಲು
ಪಾಲಾದ ಖೈದಿಗಳ ಕಾರಾಗ್ರಕ್ಕೆ ತೆರಳಿ ಅಂದಾಜು 150 ಖೈದಿಗಳಿಗೆ ಹಬ್ಬದ ರಾತ್ರಿ ಊಟ ಮಾಡಿಸಿ ಹಬ್ಬ
ಆಚರಿಸುವದಲ್ಲದೇ ಪ್ರತಿಯೊಬ್ಬ ಖೈದಿಗಳ ಕುಟುಂಬದ ಸದಸ್ಯರ ಸಮಸ್ಯೆಗಳನ್ನು ಆಲಿಸಿ ಅವರಿಂದ ಸರಕಾರಿಂದ ಕೊಡಮಾಡುವ ಯೋಜನೆಗಳ ಲಾಭ ಪಡೆಯುವಂತೆ ಕರೆ
ನೀಡುವದರ ಜೊತೆಗೆ ಬಂದೊದಗಿದ ಸಮಸ್ಯೆಗಳ ಪರಿಹಾರ ಮಾಡುವ ಬರವಸೆ ನೀಡಿದರು.
ಅಲ್ಲದೇ ತಮ್ಮ ಕುಟುಂಬದ ನಿರ್ವಹಣೆ
ಬೇಕಾಗುವ ಉದ್ಯೋಗ ಹಾಗೂ ಸರಕಾರದಿಂದ ಸಿಗುವ
ಸೌಲಭ್ಯಗಳ ಬಗ್ಗೆ ಅಜರ್ಿಗಳನ್ನು ಜೈಲಾಧಿಕಾರಿಗಳಿಗೆ ಸಲ್ಲಿಸಿದಲ್ಲಿ ಅವರುಗಳ ಪ್ರತಿವಾರ ಕಲೆಹಾಕಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.