ಲೋಕದರ್ಶನ ವರದಿ
ಗಂಗಾವತಿ 05: ಪ್ರಾಥಮಿಕ ಶಾಲಾ ಹಂತದಲಿ ಮಕ್ಕಳಿಗೆ ಪರಸರ ಜಾಗೃತಿ ಮೂಡಿಸುವುದು ಪ್ರಸ್ತುತ ದಿನಮಾನಗಳಲ್ಲಿ ಅವಶ್ಯವಾಗಿದೆ ಎಂದು ಸೇಂಟ್ ಪಾಲ್ಸ್ ಮಹಿಳಾ ವಿದ್ಯಾ ಸಂಸ್ಥೆಯ ಕಾರ್ಯದಶರ್ಿ ಸವರ್ೇಶ ವಸ್ತ್ರದ ಹೇಳಿದರು.
ಅವರು ಸೇಂಟ್ ಪಾಲ್ಸ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಡಿದರು. ಪ್ರಸ್ತುತ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆಯಾಗುತಿದ್ದು, ಮಳೆಯ ಪ್ರಮಾಣ ಕಡಿಯಾಗುತ್ತಿದೆ. ಗಿಡಮರಗಳ ನಾಶ ಮತ್ತು ಅರಣ್ಯ ಪ್ರದೇಶದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಪ್ರತಿ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತಿದೆ. ಇವೆಲ್ಲಗಳಿಂದ ತಪ್ಪಿಸಿಕೊಳ್ಳಲು ಎಲ್ಲರೂ ಮನೆಗೊಂದು ಮರ ಬೆಳೆಸಲು ಮುಂದಾಗಬೇಕಿದೆ ಎಂದರು.
ಈ ವೇಳೆಯಲ್ಲಿ ಶಾಲಾ ಮಕ್ಕಳು 1918-2018ರವರೆಗೆ ಪರಸರ ಮತ್ತು ಮಳೆ ಬೆಳೆಯ ಕುರಿತು ಅಣಕು ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಶಾಲಾ ಮಕ್ಕಳು ಮತ್ತು ಶಿಕ್ಷಕರು ಸಸಿ ನೆಡುವ ಮೂಲಕ ವಿಶ್ವ ಪರಿಸರವನ್ನು ಆಚರಣೆ ಮಾಡಿದರು.
ಈ ವೇಳೆಯಲ್ಲಿ ಸಂಸ್ಥೆಯ ಖಜಾಂಚಿ ಹುಸೇನ್ ಬಾದಷಹ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಾವತಿ, ಸಹ ಮುಖ್ಯೋಪಾಧ್ಯಾಯಿನಿ ಸುಹಾನ್, ಸಹ ಶಿಕ್ಷಕಿ ಶರಣಮ್ಮ, ಸ್ವಾತಿ ರಾಯ್ಕರ್, ಅಶ್ವಿನಿ, ಶಿರಿನ್, ಕು. ಅಫ್ರೀನ್, ಭವ್ಯಲತಾ, ಸೌಭಾಗ್ಯ, ಕು. ಅಮಿತಾ ಸೇರಿದಂತೆ ಇನ್ನಿತರಿದ್ದರು.