ಗಂಗಾರಾಮ ಬಡೇರಿಯಾರವರು ದೇಗಾದೇವಿ ದೇವಸ್ಥಾನಕ್ಕೆ ಭೇಟಿ


ವಿಜಯಪುರ 26. ರಾಜ್ಯ ಸಕರ್ಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದಶರ್ಿ ಗಂಗಾರಾಮ ಬಡೇರಿಯಾ ದಿ. 25ರಂದು ತಿಕೊಟಾ ಸಮೀಪದ ಸೋಮದೇವರಹಟ್ಟಿ ತಾಂಡಾದ ಮಾತಾ ದುಗರ್ಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀವರ್ಾದ ಪಡೆದರು. ದುಗರ್ಾದೇವಿಯ ಪರಮ ಭಕ್ತರಾಗಿರುವ ಬಡೇರಿಯಾರವರು ಪ್ರತಿ ವರ್ಷವೂ ಇಲ್ಲಿಗೆ ಬರುತ್ತಿದ್ದು, "ಎರಡು ವಾರಗಳ ಹಿಂದೆ ನಡೆದ ಜಾತ್ರಾ ಮಹೋತ್ಸವದಲ್ಲಿ ವಿಧಾನಸಭಾ ಅಧಿವೇಶನದ ನಿಮಿತ್ಯ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಇದೀಗ ಬಂದು ದೇವಿಯ ಆಶೀವರ್ಾದವನ್ನು ಪಡೆಯುತ್ತಿದ್ದೇನೆ" ಎಂದು ಬಡೇರಿಯಾ ಹೇಳಿದರು. ದೇವಸ್ಥಾನದ ಧರ್ಮದಶರ್ಿ ಜಗನು ಮಹಾರಾಜರು ಈ ಸಂದರ್ಭದಲ್ಲಿ ಗಂಗಾರಾಮ ಬಡೇರಿಯಾರವರನ್ನು ಸನ್ಮಾನಿಸಿದರು. ಎಸ್.ಆರ್.ನಾಯಿಕ, ಪ್ರಕಾಶ ಚವ್ಹಾಣ, ಬದ್ದು ರಾಠೋಡ ಮತ್ತಿತರು ಉಪಸ್ಥಿತರಿದ್ದರು.