ಗಾಂಧೀ, ಶಾಸ್ತ್ರೀ ಜಯಂತಿ ಆಚರಣೆ

ಲೋಕದರ್ಶನ ವರದಿ

ಬೆಳಗಾವಿ 05: ಬೆಳಗಾವಿ ಜಿಲ್ಲಾ ಅಂಧ ಮಕ್ಕಳ ಸಂಸ್ಥೆಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಸಭಾಗೃಹದಲ್ಲಿ ಗಾಂಧಿ ಜಯಂತಿ, ಲಾಲ್ ಬಹಾದ್ದೂರ ಶಾಸ್ತ್ರೀ ಜಯಂತಿ ಹಾಗೂ ಶಾಲಾ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.

ಜಿಲ್ಲಾ ಪಂಚಾಯತ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಗೋರಲ, ಕ್ರೇಡಾಯಿಯ ಅಧ್ಯಕ್ಷ ರಾಜೇಶ ಹೆಡಾ, ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಯ ಅಧ್ಯಕ್ಷರಾದ ವಿಕಾಸ ಕಲಘಟಗಿ, ಗೌ. ಕಾರ್ಯದರ್ಶಿಗಳಾದ ಪ್ರಭಾಕರ ನಾಗರಮನ್ನೊಳಿ, ಮುಖ್ಯೋಪಾಧ್ಯಾಯನಿಯರಾದ ಅನಿತಾ ಗಾವಡೆ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ರಮೇಶ ಗೋರಲ, ಹೆಡಾ ಇವರು ಶಾಲೆಯ ಸರ್ವಾಗೀಣ ಪ್ರಗತಿಗೆ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜೇಂದ್ರ ಮುಂದಡಾ, ಬಾಲಕಿಶನ ಭಟ್ಟಡ, ಚಿಂತಾಮಣಿ ಗ್ರಾಮೋಪಾದ್ಯೆ, ರಾಜಶೇಖರ ಹೀರೆಮಠ, ಆನಂದ ಜೋಶಿ, ಜಯರಾಮ ಸುತಾರ, ಕಿಶೋರ ಮಾಲು, ವಾದಿರಾಜ ಕಲಘಟಗಿ, ಗಣೇಶ ಹೆಗಡೆ, ರಾಮ ಮೋಹನ ನಾಯಕ, ಪ್ರೇಮರಾಜ ಚಿಂಡಕ, ಅಶೋಕ ಚಿಂಡಕ, ಚಂದ್ರಶೇಖರ ಬೆಂಬಳಗಿ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೂರಜ ಡಾವಳೆ (ಕನ್ನಡ), ಸಿದ್ಧಪ್ಪ ತೋರಣಗಟ್ಟಿ, ವೈಷ್ಣವಿ ಪಾಟೀಲ (ಹಿಂದಿ)ಯಲ್ಲಿ ಸಂಸ್ಥೆ ಮತ್ತು ಗಾಂಧೀಜಿ, ಲಾಲ್ ಬಹಾದ್ದೂರ ಶಾಸ್ತ್ರೀ, ಅವರ ಕುರಿತು ಮಾತನಾಡಿದರು.

ಸ್ಮೀತಾ ಮಿಟಗಾರ (ಶಿಕ್ಷಕರು) ಕಾರ್ಯಕ್ರಮದ ನಿರೂಪಣೆ ಮಾಡಿದರು. ನಂತರದಲ್ಲಿ ಸಂಸ್ಥೆಯ ಅಧ್ಯಕ್ಷ ವಿಕಾಸ ಕಲಘಟಗಿ ಮತ್ತು ಅತಿಥಿಗಳು ಮಾಜಿ ಸದಸ್ಯರಾದ ಶೋಕ ಅಧ್ಯಾಪಕ, ದಾನಿಗಳಾದ ಜ್ಯೋತಿ ದೇಸಾಯಿ, ಸರಸ್ವತಿ ದೇಸಾಯಿ, ಪ್ರೇಮಲತಾ ಕುಲಕರ್ಣಿ, ಪಿ.ಬಿ.ಕುಲಕರ್ಣಿ, ಪ್ರಲ್ಹಾದ ರಾಜಪುರೋಹಿತ ಪ್ರಿಯಾ ರಾಜ ಪುರೀಹಿತ, ಡಾ. ಮಹಾರುದ್ರಪ್ಪಾ ಕುಂಬಾರ ಇವರನ್ನು ಸತ್ಕರಿಸಲಾಯಿತು.