ಲೋಕದರ್ಶನ ವರದಿ
ಯಲ್ಲಾಪುರ, 30: ತಾಲೂಕಿನ ಇಡಗುಂದಿಯ ಸ್ನೇಹಸಾಗರ ವಸತಿ ಶಾಲೆಯಲ್ಲಿ ಖ್ಯಾತ ಗಾಯಕ ಪ್ರಸನ್ನ ವೈದ್ಯ ಇವರ ಸಹಯೋಗದೊಂದಿಗೆ ಗಾನ ರೇಖಾ ಕಾರ್ಯಕ್ರಮವು ನಡೆಯಿತು. ಚಿತ್ರಕಲಾವಿದರಾದ ಸತೀಶ್ ಯಲ್ಲಾಪುರರವರು ಹಾಡಿನ ಭಾವವನ್ನು ಸುಂದರ ರೇಖೆಗಳ ಚಾಕಚಕ್ಯತೆಯಿಂದ ಚಿತ್ರಿಸಿದರು. ಎನ್. ಜಿ. ಹೆಗಡೆ(ತಬಲಾ) ನಾಗೇಂದ್ರ ವೈದ್ಯ ಹಾಗೂ ಸತೀಶ್ ಹೆಗ್ಗಾರ್ ಹಾಮರ್ೋನಿಯಂನಲ್ಲಿ ಸಾಥ್ ನೀಡಿದರು. ವೇದಿಕೆಯಲ್ಲಿ ಸ್ನೇಹಸಾಗರ ಶಾಲೆಯಲ್ಲಿ ಸಂಗೀತಾಭ್ಯಾಸ ಮಾಡುವ ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿದರ್ೇಶಕ ಎಸ್. ಎಲ್. ಭಟ್ರವರು ಕಲಾವಿದರನ್ನು ಸನ್ಮಾನಿಸಿದರು.