ಡಿಸೆಂಬರ 7 ಶನಿವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಗಡಿನಾಡು ಕನ್ನಡೋತ್ಸವ ಹಾಗೂ ಗಡಿನಾಡು ಕನ್ನಡರತ್ನ ಪ್ರಶಸ್ತಿ ಪ್ರಧಾನ ಸಮಾರಂಭ

Gadinnadu Kannadautsava and Gadinnadu Kannada Ratna award ceremony under the auspices of Karnataka D

ಡಿಸೆಂಬರ 7 ಶನಿವಾರದಂದು  ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಗಡಿನಾಡು ಕನ್ನಡೋತ್ಸವ ಹಾಗೂ ಗಡಿನಾಡು ಕನ್ನಡರತ್ನ ಪ್ರಶಸ್ತಿ ಪ್ರಧಾನ ಸಮಾರಂಭ  

ಅಥಣಿ. 05 : ಎಚ್‌.ಶಿವರಾಮೇಗೌಡ ಬಣದ  ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಗಡಿನಾಡು ಕನ್ನಡೋತ್ಸವ ಹಾಗೂ ಗಡಿನಾಡು ಕನ್ನಡರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ರಾಜ್ಯಾಧ್ಯಕ್ಷ ಎಚ್‌.ಶಿವರಾಮೇಗೌಡರ ಅಧ್ಯಕ್ಷತೆಯಲ್ಲಿ ಕೆ.ಎಲ್‌.ಇ ಸಂಸ್ಥೆಯ ಎಸ್‌.ಎಸ್‌.ಎಮ್‌.ಎಸ್ ಮಹಾವಿದ್ಯಾಲಯದ ಖೋತ ಸಭಾಂಗಷದಲ್ಲಿ ಡಿಸೆಂಬರ 7 ಶನಿವಾರದಂದು ಮುಂಜಾನೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಹಾಗೂ ತಾಲೂಕಾ ಅಧ್ಯಕ್ಷ ಉದಯ ಮಾಕಾಣಿ ಹೇಳಿದರು.       ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮುಂಜಾನೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ, ಶೇಗುಣಸಿ ವೀರಕ್ತ ಮಠದ ಡಾ.ಮಹಾಂತಪ್ರಭು ಸ್ವಾಮೀಜಿ, ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ವಾಜೀದ ಹಿರೇಖೋಡಿ ವಹಿಸುವರು, ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಾಧ್ಯಕ್ಷ ಎಚ್‌.ಶಿವರಾಮೇಗೌಡ ನೆರವೇರಿಸುವರು ಎಂದು ಹೇಳಿದರು. ಪ್ರಶಸ್ತಿಗಳನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಬಾಳಾಸಾಹೇಬ ಲೋಕಾಪುರ ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ.ಎಮ್‌.ಜಿ.ಹಂಜಿ ಬಹುಮಾನ ವಿತರಿಸುವರು, ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಕರವೇ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಎಮ್‌.ಎ.ಬಸಾಪುರೆ, ಸಂಕೋನಹಟ್ಟಿಯ ಸಮಾಜ ಸೇವಕರಾದ ಮಹಾವೀರ ಪಡನಾಡ, ಧರೆಪ್ಪ ಠಕ್ಕಣ್ಣವರ, ಅರುಣ ಯಲಗುದ್ರಿ,  ಆರ್‌.ಎಮ್‌.ಡಾಂಗೆ,ರೇಖಾ ಪಾಟೀಲ,  ಪುರಸಭಾ ಸದಸ್ಯರಾದ ರಾವಸಾಬ ಐಹೊಳೆ, ಸಂತೋಷ ಸಾವಡಕರ, ರೋಟರಿ ಅಧ್ಯಕ್ಷ ಅರುಣ ಸೌದಾಗರ, ಹಿರಿಯ ನ್ಯಾಯವಾದಿ ಕೆ.ಎಲ್‌.ಕುಂದರಗಿ, ತುಬಚಿ ಫೌಂಡೇಶನ್ನನ ಪ್ರವೀಷ ತುಬಚಿ,  ಸಾಹಿತಿ ಅರ್ಚನಾ ಅಥಣಿ, ಸಾಹಿತಿ ಎಸ್‌.ಕೆ.ಹೊಳೆಪ್ಪನವರ, ಚುಟುಕು ಸಾಹಿತ್ಯ ಪರಿಷತ್ ನ ಆರ್‌.ಎಸ್‌.ದೊಡ್ಡನಿಂಗಪ್ಪಗೋಳ, ಪತ್ರಕರ್ತ ಪರಶುರಾಮ ನಂದೇಶ್ವರ, ಕರವೇ ಬಳಗದ ರೆಹಮಾನ ಮೊಕಾಶಿ, ದುಂಡಯ್ಯ ಹಿರೇಮಠ, ಸಾದೀಕ್ ಬಾಳೇಶಿ, ಉಮೇಶ ಕಾಂಬಳೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ವಿಶೇಷ ಆಮಂತ್ರಿತರಾಗಿ ತಹಶೀಲ್ದಾರ ಶಿದರಾಯ ಭೋಸಗಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ   ಶಿಕ್ಷಣಾಧಿಕಾರಿ ಎಮ್‌.ಬಿ.ಮೋರಟಗಿ ಆಗಮಿಸುವರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಜಗನ್ನಾಥ ಬಾಮನೆ, ನಿಜಪ್ಪ ಹಿರೇಮನಿ, ಗಡಿನಾಡು ಚೇತನ ಪ್ರಶಸ್ತಿ ವಿಜೇತ ಸಿದ್ದು ಹಂಡಗಿ, ರೈತ ಸಂಘದ ಮಹಾದೇವ ಮಡಿವಾಳ, ವಿಕಲ ಚೇತನ ರಾಜ್ಯ ಪ್ರಶಸ್ತಿ ವಿಜೇತ ಹಣಮಂತ ಕುರುಬರ, ರಾಷ್ಟ್ರೀಯ ಸಾಹಿತ್ಯ ರತ್ನ ಪ್ರಶಸ್ತಿ ವಿಜೇತ ಪ್ರಭಾ ಬೋರಗಾಂವ, ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಾವಲ ಮಕಾಂದಾರ, ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ವಿಜಯ ಹುದ್ದಾರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ ಇವರನ್ನು ಸತ್ಕರಿಸಲಾಗುವುದು ಎಂದರು.    ಕಾರ್ಯಕ್ರಮದಲ್ಲಿ ಗಡಿನಾಡು ಕನ್ನಡ ರತ್ನ ಪ್ರಶಸ್ತಿಯನ್ನು ಅಥಣಿ ಜಿಲ್ಲಾ ಹೋರಾಟಗಾರ ಪ್ರಶಾಂತ ತೋಡಕರ, ರೈತ ಪರ ಹೋರಾಟಗಾರ ಶ್ರೀಶೈಲ ಜಿನಗೌಡ, ಸಮಾಜ ಸೇವಕ ಕಲ್ಲಪ್ಪ ವಣಜೋಳ, ಶಿಕ್ಷಕಿ ಶೋಭಾ ಕುಲಕರ್ಣಿ, ಖ್ಯಾತ ವೈದ್ಯ ಡಾ.ರಮೇಶ ಗುಳ್ಳ, ಸಾಹಿತಿ ಪ್ರಿಯಂವದಾ ಅಣೆಪ್ಪನವರ, ಶಿಲ್ಪ ಕಲಾವಿದ ದಶರಥ ಮೋಪಗಾರ, ಸ್ಯಾಕ್ಷಾ ಫೋನ್ ವಾದಕ ರಾಮು ಭಜಂತ್ರಿ, ಪತ್ರಕರ್ತ ಚನ್ನಯ್ಯ ಇಟ್ನಾಳಮಠ, ಆಜೂರ ತೋಟದ ಸರಕಾರಿ ಕನ್ನಡ ಶಾಲೆಗೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸೇವಾರ್ಥಿಗಳನ್ನೂ ಸಹ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರವೇ ಸಂಘಟನೆಯ ಜಗನ್ನಾಥ ಬಾಮನೆ, ವಿಜಯ ನೇಮಗೌಡ, ರಾಜು ವಾಘಮೋರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.