ಅಡಿಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ

ಬೆಂಗಳೂರು, ಫೆ.14, ಕೇಂದ್ರ ಸರ್ಕಾರವು ಜನ ವಿರೋಧಿ ಆಡಳಿತ ನಡೆಸುತ್ತಿದ್ದು, ನಿರಂತರವಾಗಿ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಒಂದೇ ಬಾರಿಗೆ 145 ರೂ ಏರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶದ ಮಹಿಳಾ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.ನಗರದ ಪುರಭವನ ಮುಂಭಾಗ ನೂರಾರು ಕಾಂಗ್ರೆಸ್ ಮಹಿಳಾ ಸದಸ್ಯರು ಜಮಾಯಿಸಿ, ಕೇಂದ್ರ ಸರ್ಕಾರ ಅಚ್ಚೆ ದಿನ್ ಎಂದು ಹೇಳುತ್ತಲೇ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಹಿಳಾ ಅಧ್ಯಕ್ಷೆ ಡಾ.ಪುಪ್ಪ ಅಮರನಾಥ ಮಾತನಾಡಿ, ಈ ಕೂಡಲೇ ಗ್ಯಾಸ್ ಬೆಲೆಗೆ ಕಡಿವಾಣ ಹಾಕುವ ಮೂಲಕ ಜನಸಾಮಾನ್ಯರಿಗೆ ಅಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ದರ ಗಗನಕ್ಕೇರಿದೆ. ರೂಪಾಯಿ ಮೌಲ್ಯ ಪಾತಳಕ್ಕೆ ಕುಸಿದಿದೆ. 

ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳು ಇದಕ್ಕೆ ಕಾರಣ.ಡೀಸೆಲ್ ದರ ಏರಿಕೆಯಿಂದ ಸಾರಿಗೆ ದರ, ದಿನನಿತ್ಯದ ವಸ್ತುಗಳ ದರವು ಕೂಡ ಏರಿಕೆಯಾಗಿ ಬಡವರು, ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 

ಜನಸಮಾನ್ಯರು ಸೇರಿದಂತೆ ಎಲ್ಲರು ಬಳಸುವ ಗ್ಯಾಸ್ ಸಿಲೆಂಡರ್ ಬೆಲೆಯನ್ನು ದಿನೆ ದಿನೆ ಏರಿಸುತ್ತಿದೆ. ಆರಂಭದಲ್ಲಿ 30 ರೂ ಏರಿಸಿದ್ದು, ಈಗ ನೂರಾರು ರೂಪಾಯಿ ಪ್ರತಿ ಸಿಲಿಂಡರ್ ಗೆ ಏರಿಕೆಯಾಗಿದ್ದು ಜನರಿಗೆ ಭಾರಿ ಪೆಟ್ಟು ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಯುಪಿಎ ಆಡಳಿತದಲ್ಲಿದ್ದಾಗ ಸಿಲಿಂಡರ್ ಬೆಲೆ 387 ರೂ. ಇದ್ದ ವೇಳೆಯಲ್ಲಿ, ಈಗ ಸಚಿವರಾಗಿರುವ ನೀತಿನ್ ಗಡ್ಕರಿ, ಅರುಣ ಜೇಟ್ಲಿ, ಸುಷ್ಮಾ ಸ್ವರಾಜ್, ಸ್ಮತಿ ಇರಾನಿ ಇತರ ಬಿಜೆಪಿ ನಾಯಕರುಗಳು ದೆಹಲಿಯ ಜಂತರ ಮಂತರನಲ್ಲಿ ಪ್ರತಿಭಟನೆ ನಡೆಸಿ ಯುಪಿಎ ಸಕರ್ಾರ ಜನರನ್ನು ಲೂಟಿ ಮಾಡುತ್ತಿದೆ ಎಂದಿದ್ದರು, ಈಗ ಅವರೇನು ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.