ಲಕ್ಷ್ಮಣ್ ಸವದಿ ಪರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮತದಾನ...!!

ಬೆಂಗಳೂರು,ಫೆ. 17, ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಪರ ಮತದಾನ ಮಾಡಿರುವುದಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರವಾಸೋದ್ಯಮ ಸಚಿವ ಸಚಿವ ಸಿ.ಟಿ.ರವಿ ಹಾಗೂ ಬಿಜೆಪಿ ಶಾಸಕರ ಜೊತೆ ಮತದಾನ ಮಾಡಿದರು. 

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪರವಾಗಿ ಒಲವು ವ್ಯಕ್ತಪಡಿಸುತ್ತಿರುವ ಜಿ.ಟಿ. ದೇವೇಗೌಡ, ಬಹಿರಂಗವಾಗಿ ಬಿಜೆಪಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ರವಿ ಅವರ ಜತೆ ಮತದಾನ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.  ಮತದಾನದ ಬಳಿಕ ಮಾತಾಡಿದ ಜಿ.ಟಿ ದೇವೇಗೌಡ ಮಾತನಾಡಿ, ನಾನು ಮತದಾನ ಮಾಡಿದ್ದೇನೆ.ಯಾರಿಗೆ ಮತದಾನ ಹಾಕಿದ್ದೇನೆ ಎಂದು ಹೇಳುವ ಹಾಗಿಲ್ಲ. ಜೆಡಿಎಸ್ ಯಾರಿಗೆ  ಬೆಂಬಲ ಕೊಟ್ಟಿದ್ದಾರೆ ಎಂಬ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಮತದಾನ ಮಾಡಿದ್ದೇನಷ್ಟೆ ಎಂದರು.