3ವರ್ಷದಿಂದ ಅಲೆದರೂ ಸಿಗದ ಫಾರಂ 3: ಮಹಿಳೆಯ ಗೋಳು ಕೇಳೋರಿಲ್ಲ

ಲೋಕದರ್ಶನ ವರದಿ 

ಕಾರಟಗಿ 15: ಫಾರಂ 3. ಕೊಡುವಂತೆ ಮಹಿಳೆಯೊಬ್ಬಳು ಪುರಸಭೆ ಸಿಬ್ಬಂದಿಯನ್ನು ಅಳುತ್ತ  ಕೇಳುತ್ತಿರುವ ಘಟನೆ ಮಂಗಳವಾರ  ನಡೆದಿದೆ. 

ಪಟ್ಟಣದ 7ನೇ ವಾಡರ್ಿನ ನಿವಾಸಿ ಲಕ್ಷ್ಮೀ ಗಂಡ ಬಸವರಾಜ ಕೊರವರ. ಫಾರಂ 3. ಕೊಡುವಂತೆ ಅಜರ್ಿ ಸಲ್ಲಿಸಿ 2 ವರ್ಷಗಳಾಗಿವೆ. ಅದಕ್ಕೆ ಸಂಬಂದಿಸಿದಂತೆ ಎಲ್ಲಾ ದಾಖಲಾತಿಗಳನ್ನು ನೀಡಿ ಹಣವೂ ಕೂಡ ಕೊಡಲಾಗಿದೆ ಆದರೂ ಇವರೆಗೂ ಫಾರಂ 3. ನೀಡುತ್ತಿಲ್ಲ ನಿತ್ಯ ಪುರಸಭೆಗೆ ಅಲೆದು ಸುಸ್ತಾಗಿದೆ ಯಾವೊಬ್ಬ ಸಿಬ್ಬಂದಿಯೂ ನನ್ನ ಅಳಲನ್ನು ಕೇಳುತ್ತಿಲ್ಲ. ಮೊದಲು ಫಾರಂ 3ಗಾಗಿ ನೀಡಿದ ಅಜರ್ಿ ಇಲ್ಲ ಬೇರೆ ಕೊಡುವಂತೆ ಹೇಳಿದರು ಮತ್ತೆ ಹೊಸದಾಗಿ ಅಜರ್ಿ ಸಲ್ಲಿಸಿದ್ದೆನೆ 2ವರ್ಷವಾಯಿತು ಎಂದು ಗೋಳೊ ಎಂದು ಅಳುತ್ತಿದ್ದಳು.  ಈ ಕುರಿತು ಪುರಸಭೆ ಸಿಬ್ಬಂದಿಯೊಬ್ಬರು  ಸಮಜಾಯಿಸಿ ಉತ್ತರ ನೀಡಿ ಮಹಿಳೆಯನ್ನು ಬಾಯಿ ಮುಚ್ಚಿಸಿದರು.  ನಂತರ ಪುರಸಭೆಯ ಸಿಬ್ಬಂದಿ ಮಹಿಳೆ ನೀಡಿದ ದಾಖಲಾತಿಗಳು  ಸಮರ್ಪಕವಾಗಿಲ್ಲ ಅವುಗಳನ್ನು ನ್ಯಾಯಾಲಯಕ್ಕೆ ಕಳಿಸಿಕೊಡಬೇಕು ಎಂದು ಕರ ವಸೂಲಿಗಾರ ಶಾಮೀದ್ಸಾಬ್ ಹೇಳಿದರು. 

ಅಲ್ಲದೆ ಪುರಸಭೆಯಲ್ಲಿ  ಲೋಕಸಭಾ ಚುನಾವಣೆಯ ನಿಮಿತ್ಯ  ನೀತಿ ಸಂಹಿತೆಯ ಕಾರಣ ರಾಯಚೂರ ಜಿಲ್ಲೆಯ ಮಸ್ಕಿ ಪುರಸಭೆಯ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಪ್ರಭಾರಿ ಮುಖ್ಯೆ ಕಾರ್ಯದಶರ್ಿಯಾಗಿ   ಕಾರ್ಯ ನಿರ್ವಹಿಸುತ್ತಿದ್ದು ಮುಖ್ಯಾಧಿಕಾರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕಚೇರಿಯ ಸಿಬ್ಬಂದಿಗಳು ನೀಡುತ್ತಿಲ್ಲ. ಪುರಸಭೆಯಲ್ಲಿ ಮದ್ಯವತರ್ಿಗಳ (ದಲ್ಲಾಳಿಗಳ) ಮೂಲಕ  ಹಾಣ ಪಡೆದು ಫಾರಂ 3. ನೀಡುವುದು ಇಲ್ಲಿ ವಾಡಿಕೇಯಾಗಿದೆ ಅಲ್ಲದೆ ಕೆಲವೊಮ್ಮ ಹಣ ನೀಡಿದರೂ ಕೂಡ  ಸಾರ್ವಜನಿಕರನ್ನು ಅಲೇದಾಡಿಸುವುದು ಕಚೇರಿಯ ಸಿಬ್ಬಂದಿಯ ಕುಲಕಸುಬು ಆಗಿದೆ. ಇಂತಹ ಊರಾರು ಪ್ರಕರಣಗಳು ನಿತ್ಯ ನಡೆಯುತ್ತಿದ್ದರೂ ಕೂಡ ಕಚೇರಿಯ ಸಿಬ್ಬಂದಿ ದಿನ ನಿತ್ಯ ಒಂದಿಲ್ಲೊಂದು ಸಬೂಬು ಹೇಳಿ ಜಾರಿಕೊಳ್ಳುತ್ತಾರೆ ಎಂದು ಪುರಸಭೆಗೆ ಆಗಮಿಸಿದ ಸಾರ್ವಜನಿಕರು ಆರೋಪಿಸಿದರು. ಪುರಸಭೆಗೆ ಅಧ್ಯಕ್ಷರ ಅವಧಿ ಮುಗಿದು ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಇದರಿಂದಾಗಿ ಕಚೇರಿಯ ಸಿಬ್ಬಂದಿಗೆ ಯಾವ ಭಯವೂ ಇಲ್ಲವಾಗಿದೆ. ಅಲ್ಲದೆ ಪುರಸಭೆಗೆ ಕೆಲಸಕಾರ್ಯಗಳಿಗಾಗಿ ಆಗಮಿಸಿದ  ಸಾರ್ವಜನಿಕರು  ಪ್ರತಿಯೊಂದು ಕೆಲಸಕ್ಕೂ ಅಲೇದಾಡಬೇಕು. ಸಾರ್ವಜನಿಕರ ಆಸ್ತಿ ಮುಟೇಷನ್ ಮಾಡಲು 3. ಸಾವಿರ. ರೂ ಕೊಡಬೇಕು. ಕರ ವಸೂಲಿ ಮಾಡುವ ಸಿಬ್ಬಂದಿಯೇ ಇದನ್ನೆಲ್ಲ ನೀಭಾಯಿಸುತ್ತಾರೆ ಎಂದು ಫಾರಂ 3. ಪಡೆಯಲು ಬಂದ ಸಾರ್ವಜನಿಕರು ದೂರಿದರು.

ಪುರಸಭೆ ಆದಾಗಿನಿಂದ ಕಾರಟಗಿ ಪುರಸಭೆಯಲ್ಲಿ ಭಷ್ಟಾಚಾರ ರಾಜಾರೋಷವಾಗಿ ತಾಂಡವಾಡುತ್ತಿದೆ. ನಿತ್ಯ ಹಣಕ್ಕಾಗಿ ದಲ್ಲಾಳಿಗಳ ಮೂಲಕ ಲಾಬಿ ನಡೆಸುವುದು ಸಿಬ್ಬಂದಿಗಳಿಗೆ ಮಾಮೂಲಾಗಿದೆ. ಸಂಬಂಧಿಸಿದ ಜಿಲ್ಲಾಡಳಿತ ಕಾಟರಗಿ ಪುರಸಭೆಯ ಕಚೇರಿಯ ಸಿಬ್ಬಂದಿ ಕಾರ್ಯವೈಖರಿಯ ಬಗ್ಗೆ ಕುಲಂಕೂಷವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇಲ್ಲಿ ಕಾರ್ಯ ನಿರ್ವಹಿಸುವ ಕೆಲ ಸಿಬ್ಬಂದಿಗಳನ್ನು ಈ ಕೂಡಲೆ ಬೇರೆಡೆ ವಗರ್ಾವಣೆಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪುರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಕಚೇರಿಯ ಸಿಬ್ಬಂದಿಗಳು ಬೆಲೆ ಕೊಡುತ್ತಿಲ್ಲ ಮಹಿಳೆಯೆಂಬುದು ಕೂಡ ನೋಡದೆ  ಎಕವಚನದಲ್ಲಿ ಸಂಭೋಧಿಸುತ್ತಾರೆ. ಎಂದು ಪುರಸಭೆ ಸದಸ್ಯಯೊಬ್ಬರು ಪತ್ರಿಕೆಗೆ ತಿಳಿಸಿದರು.