ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆ: ರಸಿಕಾ ಮೇತಾಳ ಅಪ್ರತಿಮ ಸಾಧನೆ

ಬೆಳಗಾವಿ 02: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಚ್ಯಾಣ ಗ್ರಾಮದಲ್ಲಿ ನ. 30ರಂದು ಜರುಗಿದ 2022-23ನೇ ಸಾಲಿನ ರಾಜ್ಯಮಟ್ಟದ ಇಲಾಖಾ 62 ಕೆಜಿ ಬಾಲಕಿಯರ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಅಗಸಗಿಯ ಲೀಲಾವತಿ ವೆಂಕಟೇಶ ಕರಗುಪ್ಪಿಕರ ಪ್ರೌಢಶಾಲೆಯ  8ನೇ ತರಗತಿ ವಿದ್ಯಾರ್ಥಿನಿ ರಸಿಕಾ ಜೋತಿಭಾ ಮೇತಾಳ ಇವಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. 

ಈ ಪ್ರತಿಭೆಯನ್ನು ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ನಾಗನೂರ ರುದ್ರಾಕ್ಷಿಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶಾಲಾ ಸ್ಥಾನಿಕ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಿಬ್ಬಂದಿಯವರು ಅಭಿನಂದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕುಸ್ತಿ ತಂಡದ ವ್ಯವಸ್ಥಾಪಕರಾಗಿ ನಮ್ಮ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎನ್‌. ಬಿ. ಪಾಟೀಲ ಅವರು ಭಾಗವಹಿಸಿದ್ದರು.