ಬಿಜೆಪಿ ಕಾರ‌್ಯಕರ್ತರ ಮೇಲೆ ಗುಂಡಾ ಕೇಸು ಹಾಕಿದರೆ ಹುಷಾರ್ : ಅಭಯ್ ಎಚ್ಚರಿಕೆ

ಬೆಳಗಾವಿ 25: ಬೆಳಗಾವಿ ದಕ್ಷಿಣ ಕ್ಷೇತ್ರದ ಪದಾಧಿಕಾರಿಗಳ, ಕಾರ‌್ಯಕರ್ತರ ಮೇಲೆ ಪೊಲೀಸರು ರಾಜಕೀಯ ಪ್ರೇರಿತವಾಗಿ ಗುಂಡಾ ಕಾಯ್ದೆ ಅಡಿಯಲ್ಲಿ ಕೇಸು ಹಾಕುವ ಪ್ರಯತ್ನದಲ್ಲಿದ್ದಾರೆ. ಬೆಳಗಾವಿ ನಗರವು ಸದ್ಯ ಶಾಂತಮಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದೆ ಆಗುವ ಘಟನೆಗಳಿಗೆ ಪೊಲೀಸ ಅಧಿಕಾರಿಗಳೇ ಕಾರಣವಾಗಬೇಕಾಗುತ್ತದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಪೊಲೀಸರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.  

ಮಂಗಳವಾರ ನಗರದಲ್ಲಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೆ ಬೆಳಗಾವಿಯಲ್ಲಿ ವಿಧಾನಸಭೆ, ಲೋಕಸಭೆ ಎಲ್ಲ ಚುನಾವಣೆಗಳು ಶಾಂತ ರೀತಿಯಿಂದ ಮುಗಿದು ಹೋಗಿವೆ. ಚುನಾವಣೆಗಳನ್ನು ಶಾಂತ ರೀತಿಯಿಂದ ನಿಭಾಯಿಸಲಾಗಿದೆ. ಬಳಿಕ ಪೊಲೀಸರು ಈಗ ಬಿಜೆಪಿ ಆಯ್ದ ಪದಾಧಿಕಾರಿಗಳ ದಾಖಲಾತಿಗಳನ್ನು ಕಲೆ ಹಾಕುತ್ತಿರುವದು ಕಂಡು ಬಂದಿದೆ. ಈಗಾಗಲೇ 4-5 ಕಾರ‌್ಯಕರ್ತರ ಬಗ್ಗೆ ಚೌಕಸಿ ಮಾಡಿ ಹೋಗಿದ್ದಾರೆ. ತಮ್ಮ ಕೆಲ ಕಾರ‌್ಯಕರ್ತರ ಮೇಲೆ ಕಳ್ಳತನ ಅಥವಾ, ಜೂಜಾಟದ ಕೇಸುಗಳು ಇರುವದಿಲ್ಲ. ಅವೆಲ್ಲ ಕೆಲ ಕಾರ‌್ಯಕರ್ತರ ಮೇಲೆ ರಾಜಕೀಯ ಪ್ರೇರಿತ ಒಂದೇರಡು ಕೇಸುಗಳಿವೆ, ಹೊರತು ಬೇರೆ ಯಾವು ಇಲ್ಲ. ಅವುಗಳಲ್ಲಿ ಹೋರಾಟ ಮಾಡಿದ್ದು ಹಾಗೂ ಗಲಾಟೆ ಸಂದರ್ಭದಲ್ಲಿನ ಕೇಸುಗಳಿವೆ ಎಂದರು.  

ಈಗಾಗಲೇ ಬೆಳಗಾವಿಯಲ್ಲಿ 10 ಹಾಗೂ 20ರಿಂದ 30 ಕೇಸುಗಳು ಇರುವ ಇರುವ ವ್ಯಕ್ತಿಗಳು ಇದ್ದಾರೆ. ಅದನ್ನ ಬಿಟ್ಟು ಬಿಜೆಪಿ ಕೆಲ ಪದಾಧಿಕಾರಿಗಳ ಸ್ಕೂಲ್‌ಗಳಿಗೆ ಹೋಗಿ ಅವರ ದಾಖಲೆಗಳನ್ನು ಪರೀಶೀಲನೆ ಮಾಡಿ ಗುಂಡಾ ಕಾಯ್ದೆಯಡಿ ಕೇಸು ಹಾಕುವ ಈ ದುಸ್ಸಾಹಸಕ್ಕೆ ಪೊಲೀಸರು ಕೈಹಾಕಿದರೆ ಮುಂದಿನ ಘಟನೆಗೆ ನೀವೇ ಕಾರಣವಾಗುತ್ತಿರಿ ಎಂದು ನುಡಿದರು. ಕಾರ‌್ಯಕರ್ತರ ಮೇಲೆ ಕೇಸು ಹಾಕುತ್ತಿರುವದು ನಿಮಗೆ ಹೇಗೆ ಗೊತ್ತಾಯಿತು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ‌್ಯಕರ್ತರ ಮೇಲೆ ಪೊಲೀಸರು ಗುಂಡಾ ಕೇಸು ದಾಖಲು ಮಾಡುತ್ತಿರುವ ಬಗ್ಗೆ ಕೆಲ ಪೊಲೀಸ ಅಧಿಕಾರಿಗಳು ತಮ್ಮ ಗಮನಕ್ಕೆ ಖಚಿತವಾಗಿ ತಂದಿದ್ದಾರೆ.  

ದಕ್ಷಿಣ ಕ್ಷೇತ್ರದ ಪದಾಧಿಕಾರಿಗಳ, ಕಾರ‌್ಯಕರ್ತರ ಮೇಲೆ ಒಂದ ವೇಳೆ ಪೊಲೀಸರು ಗುಂಡಾ ಕಾಯ್ದೆಯಲ್ಲಿ ಕೇಸು ದಾಖಲು ಮಾಡಿದರೆ ಮುಂದೆ ಬರುವ ದಿನಮಾನಗಳಲ್ಲಿ ಆಗುವ ಘಟನೆಗಳಿಗೆ ಪೊಲೀಸ ನೇರ ಕಾರಣವಾಗುತ್ತಾರೆ. ಈ ರೀತಿಯ ಪ್ರವೃತಿಯನ್ನು ಪೊಲೀಸರು ಕೈಬಿಡಬೇಕು. ಇಲ್ಲ ಇದೇ ಚಾಳಿ ಮುಂದೆವರೆಸಿದರೆ ಮುಂದೆ ಎನಾಗುತ್ತದೆ ಎನ್ನುವದನ್ನು ನೀವೆ ಗಮನಿಸಬೇಕಾಗುತ್ತದೆ ಎಂದರು.