ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಲಿ: ಪಿಎಸ್‌ಐ ಗಂಗಾ

ಕಲಕೇರಿ 26: ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಬಸವೇಶ್ವರ ಪದವಿಪೂರ್ವ ಕಾಲೇಜು ಹಾಗೂ ಕಲಕೇರಿ ಪೋಲಿಸ್ ಠಾಣೆ ಇವರ ಸಹಯೋಗದಲ್ಲಿ ಬುಧವಾರ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧದ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಯಿತು. 

ಕಲಕೇರಿ ಪಿಎಸ್‌ಐ ಗಂಗಾ ಬಿರಾದಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿರುವಾಗ ಮನಸ್ಸು ಚಂಚಲತೆಯಿಂದ ಇರುವದು ಸಾಮಾನ್ಯ. ಯುವ ಪೀಳಿಗೆ ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳುವತ್ತ ಮುಂದಾಗಬೇಕು ಎಂದು ಅವರು ಹೇಳಿದರು. 

ಬಸವೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ಸಿ ಎಸ್ ಹಿರೇಮಠ, ಪ್ರೋ ಎಸ್ ಎಸ್ ಕಲಶೆಟ್ಟಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಮಾದಕವಸ್ತುಗಳ ಕುರಿತ ಭಿತ್ತಿ ಪತ್ರಗಳನ್ನು ವಿತರಿಸಿ ನಂತರ ಮಾದಕ ವಸ್ತುಗಳಿಂದ ನಾವು ದೂರವಿರುತ್ತೆವೆ ಎಂಬ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. 

ಡಾ.ಗುರುರಾಜ್ ಮೆಡೆದಾರ, ಬಿ ಜಿ ಚನಗೊಂಡ, ಶಾಂತವೀರ ಧುರ್ಗಿ, ಆರ್ ಎಂ ಗುಮಶೆಟ್ಟಿ, ವಿರೇಶ ಝಳಕಿ, ಬಸವರಾಜ್ ಕುಂಬಾರ ಪೋಲಿಸ ಇಲಾಖೆಯ ಸಂಗಮೇಶ ಉಪ್ಪಲದಿನ್ನಿ, ರಾಜಕುಮಾರ ಬಿರಾದಾರ, ಉಮೇಶ ಅವರಾದಿ, ಸಿದ್ರಾಮ ಜುಲ್ಪಿ ಸೇರಿದಂತೆ ಇತರರು ಇದ್ದರು.