ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ : ಡಾ.ಚಂದ್ರು ಲಮಾಣಿ

ಮುಂಡರಗಿ 26: ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಭೌದ್ದಿಕವಾಗಿ ಆರೋಗ್ಯಕರವಾಗಿ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಶಿರಹಟ್ಟಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಚಂದ್ರು ಲಮಾಣಿ ಹೇಳಿದರು. 

ಪಟ್ಟಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ, ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಡರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಏಕವಲಯ ಮಟ್ಟದ ಪುರುಷ ಖೋಖೋ ಪಂದ್ಯಾವಳಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕ್ರೀಡಾಕೂಟಯಲ್ಲಿ ಭಾಗವಹಿಸುವಂತಹ ಕ್ರೀಡಾಪಟುಗಳ ಆಟವನ್ನು ಸೌಹಾರ್ಧಯುತವಾಗಿ ಆಡಬೇಕು. ಸ್ಪರ್ದಾಳುಗಳು ನಿರ್ಣಾಯಕರ ನಿರ್ಣಯಕ್ಕೆ ಸ್ಪಂಧಿಸಿ ಆಟವಾಡಬೇಕು. ಹಾಗೇ ಇಂದಿನ ವೈಜ್ಞಾನಿಕ ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳು ಗುರಿ ಮತ್ತು ಸಾಧನೆಗಾಗಿ ಶ್ರಮಿಸಬೇಕು. ಪದವಿ ಶಿಕ್ಷಣ ಪಡೆಯುತ್ತಿರುವ ವಿಧ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕೊನೆಯ ಗುರಿಯಾಗಿಟ್ಟುಕೊಂಡು ಅಭ್ಯಾಸ ಮಾಡಬೇಕು, ಅಂದಾಗ ಗುರಿ ಮುಟ್ಟಲು ಸಾಧ್ಯವಾಗುತ್ತದೆ. 

ಜಗದ್ಗುರು ತೋಂಟದಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಣ ಪಡೆಯುವಂತಹ ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾಗಿರುವಂತಹ ಅಗತ್ಯ ಸೌಲಭ್ಯಗಳನ್ನು ಮಾಡಲಾಗಿದೆ. ಆದರು ಇನ್ನು ಅನೇಕ ಸಮಸ್ಸೆಗಳಿದ್ದು ಅದರಲ್ಲಿ ಮುಖ್ಯವಾಗಿ ಕಾಲೇಜಿ ಕಂಪೌಂಡ್‌ನಿರ್ಮಾಣ, ಬಸ್ಸ್‌ ತಂಗುನಿಲ್ದಾಣ, ಬೇಡಿಕೆ ಅವಶ್ಯವಾಗಿದ್ದು, ಅವುಗಳನ್ನು ಸಹ ನಿವಾರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಸರ್ಕಾರಗಳು ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ನೀಡಲಾಗಿದೆ. ಆದ್ದರಿಂದ ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು. 

ಹೇಮಗೀರೀಶ ಹಾವಿನಾಳ, ಮಂಜುನಾಥಗೌಡ ಪಾಟೀಲ, ಹೇಮಂತಗೌಡ ಪಾಟೀಲ, ರುದ್ರಗೌಡ ಪಾಟೀಲ, ರಾಮು ಕಾಲಾಲ, ಎಚ್‌.ವಿರುಪಾಕ್ಷಗೌಡ್ರ, ಆರ್‌.ಎಸ್‌.ಪಾಟೀಲ, ಆನಂದ ನಾಡಗೌಡ್ರ, ಎಸ್‌.ಎಸ್‌.ಗಡ್ಡದ, ಎಮ್‌.ವ್ಹಿ.ಅರಳಿ, ಎ.ಎಸ್‌.ಗೌಡರ, ದತ್ತಾತ್ರೇಯ ಹೆಗ್ಗಡಾಳ, ಸುರೇಶ ಜೈನ್, ಶ್ರೀನಿವಾಸ ಕಟ್ಟಿಮನಿ, ದೇವಪ್ಪ ರಾಮೇನಹಳ್ಳಿ, ಎಸ್‌.ಎಸ್‌.ಪಟ್ಟಣಶಟ್ಟಿ, ಅರುಣಾ ಪಾಟೀಲ. ಎಸ್‌.ಡಿ.ಮಕದಾರ, ಡಾ.ಎನ್‌.ಶಿವಯೋಗಿ, ಪ್ರಾಚಾರ್ಯ ಎಸ್‌.ಆರ್‌.ಚಿಗರಿ, ಪ್ರಕಾಶ ಪೂಜಾರ, ಡಾ, ನಾಗರಾಜ ಹಾವಿನಾಳ, ಕುಮಾರಸ್ವಾಮಿ ಹಿರೇಮಠ,  ಡಾ. ಭಾರತಿ  ಬ್ಯಾಳಿ, ಡಾ, ಜಗದೀಶ ಹುಲ್ಲೂರು, ಚೇತನ ಪಾಟೀಲ, ಬಸಯ್ಯ ಶಶಿಮಠ, ಕಾವೇರಿ ಭೋಲಾ, ಮೀನಾಕ್ಷಿ ಪಿ. ಎಸ್‌.ಎ.ಬೆಲ್ಲದ, ಎಂ ಕರಿಬಸಪ್ಪ ಮುಂತಾದವರು ಉಪಸ್ಥಿತರಿದ್ದರು. 

ಡಾ. ಎಮ್‌.ಡಿ.ನಾಯ್ಕ್‌ ಸ್ವಾಗತಿಸಿ, ಅಕ್ಕಮಹಾದೇವಿ ಹಿರೇಮಠ ನಿರೂಪಿಸಿ, ಉಮಾ ಕೊಳ್ಳಿ ವಂದಿಸಿದರು.