ಉಚಿತ ತರಬೇತಿ ಕಾರ್ಯಗಾರದ ಸಮಾರೋಪ

ಲೋಕದರ್ಶನವರದಿ

ಮುಧೋಳ: ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ಕೂಡ ಶಿಕ್ಷಣದಿಂದ ವಂಚಿತರಾಗಬಾರದೆಂದು ವಿದ್ಯಾಥರ್ಿಗಳನ್ನು ಕುರಿತು ವಿದ್ಯಾಥರ್ಿಗಳಿಗೆ ಅನ್ನದಾನ ಹಾಗೂ ವಿದ್ಯಾದಾನ ಮಾಡಿದಂತಹ ವ್ಯಕ್ತಿಯನ್ನು ಮೇಲಿಂದ ಮೇಲೆ ಸ್ಮರಿಸಿಕೊಳ್ಳದಿದ್ದರೆ ವಿದ್ಯಾಥರ್ಿಗಳು ಅದೋಗತಿಗೆ ಹೋಗುತ್ತಾರೆಂದು ಮುಖ್ಯ ಅತಿಥಿಗಳಾದ ವೆಂಕಟೇಶ ಕುದರಿ ತತ್ವಜ್ಞಾನಿಗಳು ತರಬೇತಿ ಕಾಯರ್ಾಗಾರ ಕಿವಿಮಾತು ಹೇಳಿದರು.

   ಉಚಿತ ತರಬೇತಿ ಕಾಯರ್ಾಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಅದರೊಂದಿಗೆ ಈ ಸಂಸ್ಥೆಯಿಂದ 3 ದಿನಗಳ ಕಾಯರ್ಾಗಾರದಲ್ಲಿ ಉಭಯ ಸಂಸ್ಥೆಗಳಿಂದ ದಾರಿ ಮಾತ್ರ ತೋರಿಸಿದ್ದು ಅದರಡಿಯಲ್ಲಿ ಬರುವ ಅಡತಡೆಗಳನ್ನು ವಿದ್ಯಾಥರ್ಿಗಳೆ ಎದುರಿಸಿ ಮುಂದೆ ಬರಬೇಕು ಎಂದು ಹೇಳಿದರು.

       ಮುಖ್ಯ ಅತಿಥಿಗಳಾದ ಕಿಸಾನ ಘಟಕದ ಜಿಲ್ಲಾಧ್ಯಕ್ಷರಾದ ನಂದಕುಮಾರ ಪಾಟೀಲ ಅವರು ತರಬೇತಿ ಪಡೆಯಲು ಬಂದ ವಿದ್ಯಾಥರ್ಿಗಳಿಗೆ ಇಂತಹ ಕಾರ್ಯಕ್ರಮಗಳು ಯುವಕರಿಗೆ, ವಿದ್ಯಾಥರ್ಿಗಳಿಗಾಗಿ ಸತೀಶ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಸಾಕಷ್ಟು ತರಬೇತಿಗಳನ್ನು ಹಾಗೂ ಗ್ರಾಮೀಣ ಮಟ್ಟದ ವಿದ್ಯಾಥರ್ಿಗಳು ಈ ತರಬೇತಿಗಾಗಿ ಧಾರವಾಡ-ಬೆಂಗಳೂರಕ್ಕೆ ಹೋಗಿ ದುಡ್ಡು ಖಚರ್ುಮಾಡಿ ತರಬೇತಿ ಪಡೆಯಲು ಅನುಕೂಲವಿರುವುದಿಲ್ಲ ಇಂತಹ ಯುವಕರಿಗೆ ಈ ಒಂದು ತರಬೇತಿ ಅನುಕೂಲವಾಗಿದೆ. 

         ಈ ತರಬೇತಿಯ ಜೊತೆಗೆ ಪ್ರಯತ್ನ ಪಟ್ಟರೆ ಯಶಸ್ಸನ್ನ ಸಾಧಿಸಿ ಜೀವನದಲ್ಲಿ  ಮುಂದೆ ಬರಬಹುದೆಂದು ಕಿವಿಮಾತು ಹೇಳಿದರು.

           ಫೌಂಡೇಶನ ಅಧ್ಯಕ್ಷರಾದ ಸತೀಶ ಬಂಡಿವಡ್ಡರ ಅವರು ತರಬೇತಿ ಕಾಯರ್ಾಗಾರದ ವಿದ್ಯಾಥರ್ಿಗಳನ್ನು ಕುರಿತು ಇಂತಹ ಒಂದು ಕಾರ್ಯಕ್ರಮ ಆಯೋಜನೆ ಮಾಡಿದ್ದರ ಉದ್ದೇಶ ನನ್ನ ವಿದ್ಯಾಥರ್ಿ ಜೀವನದಲ್ಲಿ ಆದ ಅನುಭವ ಕಷ್ಟದ ಜೀವನ ನೆನೆದು ನನ್ನಂತೆ ಯುವಕರು ಕಷ್ಟಪಡಬಾರದು ಹಾಗೂ ಅವಕಾಶವಂಚಿತರಾಗಬಾರದು ಎಂದು ನೋವಿನಿಂದ ಹೇಳಿದರು. 

          ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುಭಾಸ ಗಸ್ತಿ, ಕಾಶಿಮಸಾಬ ಕೆಸರಟ್ಟಿ, ಮಂಜುನಾಥ ಅರಳಿಕಟ್ಟಿ, ಭೀಮಶಿ ಹುನ್ನೂರ ಹಾಗೂ ಸಂಕಲ್ಪ ಸ್ಟಡಿ ಸೆಂಟರನ ಬೋಧಕರಾದ ವಿಠ್ಠಲಗೌಡ ಬೀ/ ಪಾಟೀಲ ಇದ್ದರು.