ನೆರೆ ಸಂತ್ರಸ್ತರಿಗೆ ಉಚಿತ ಮಾಸ್ಕ, ಔಷಧಗಳ ಸೇವೆ

ಲೋಕದರ್ಶನ ವರದಿ

ಶೇಡಬಾಳ: ಕೃಷ್ಣಾ ನದಿಯ ಮಹಾಪೂರದಿಂದ ಮುಳುಗಡೆ ಹೊಂದಿರುವ ಗ್ರಾಮಗಳಲ್ಲಿ ಶಿರಗುಪ್ಪಿಯ ಅಮೋಲ ಜನಕಲ್ಯಾಣ ಫೌಂಡೇಶನ ಅಧ್ಯಕ್ಷರಾದ ಡಾ. ಅಮೋಲ ಸರಡೆ ಹಾಗೂ ಡಾ. ಸಂಗೀತಾ ಸರಡೆಯವರು ಸಂತ್ರಸ್ತರಿಗೆ ಉಚಿತ ಮಾಸ್ಕ ಹಾಗೂ ಔಷಧಗಳ ಸೇವೆ ನೀಡುವದರ ಜತೆಗೆ ಆರೋಗ್ಯದ ಕುರಿತು ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಜನ ಜಾಗೃತಿಯನ್ನುಂಟು ಮಾಡುತ್ತಾ ತಮ್ಮದೇ ಆದ ರೀತಿಯಲ್ಲಿ ಸಮಾಜ ಸೇವೆ ಗೈಯುತ್ತಿದ್ದಾರೆ. 

ಅಮೋಲ ಜನಕಲ್ಯಾಣ ಫೌಂಡೇಶನ ವತಿಯಿಂದ ಡಾ. ಅಮೋಲ ಸರಡೆ ಹಾಗೂ ಡಾ. ಸಂಗೀತಾ ಸರಡೆ ಅವರು ಕೃಷ್ಣಾ ನದಿಗೆ ಮಹಾಪೂರ ಬಂದಾಗಿನಿಂದ ಸಂತ್ರಸ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರವಾಹ ಇಳಿಮುಖವಾಗುತ್ತಿದ್ದಂತೆ ಮುಳುಗಡೆ ಹೊಂದಿದ್ದ ಜುಗೂಳ, ಮಂಗಾವತಿ, ಶಹಾಪೂರ, ಶಿರಗುಪ್ಪಿ, ಇಂಗಳಿ, ಮಾಂಜರಿ, ಯಡೂರವಾಡಿ ಸೇರಿದಂತೆ ಪ್ರತಿ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಉಚಿತ ಮಾಸ್ಕ ಹಾಗೂ ಔಷಧೋಪಚಾರವನ್ನು ನೀಡುತ್ತಾ ಕೈಗೊಳ್ಳಬೇಕಾದ ಮುನ್ನೆಚ್ಚರಿಗೆ ಕ್ರಮಗಳ ಕುರಿತು ಜನ ಜಾಗೃತಿ ಮಾಡುತ್ತಿದ್ದಾರೆ.

ಮಹಾಪೂರದಿಂದ ಮುಳಗಡೆ ಹೊಂದಿರುವ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುತ್ತದೆ. ಆ ಕಾರಣದಿಂದ  ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ ಹಾಕಿಕೊಳ್ಳುವದರಿಂದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದಾಗಿದೆ. ಆ ಕಾರಣದಿಂದ ಪ್ರತಿಯೊಬ್ಬರಿಗೆ ಉಚಿತ ಮಾಸ್ಕಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದ ಅವರು ಸುಮಾರು 25 ಸಾವಿರ ಮಾಸ್ಕಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.   

ಆರೋಗ್ಯ ದೃಷ್ಟಿಯಿಂದ ಪರಿಸರದಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವಂತೆ, ಕುದಿಸಿ ಆರಿಸಿ ನೀರು ಕುಡಿಯುವಂತೆ ಊಟ ಮಾಡುವ ಮುಂಚೆ ಕೈ, ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವಂತೆ ಸಲಹೆ ನೀಡಿದರು. ವೈದ್ಯರ ಈ ವಿದಾಯಕ ಕಾರ್ಯಕ್ಕೆ ಪ್ರತಿ ಗ್ರಾಮಗ

ಳಲ್ಲಿ ಅಲ್ಲಿನ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಸಹಕಾರ ನೀಡಿ ಬೆಂಬಲಿಸಿದರು.