ಬೆಳಗಾವಿ 28: ಕಾರ್ಮಿಕ ಭಂಧುಗಳು ಹಾಗೂ ಅವರ ಕುಟುಂಬದವರ ಆರೋಗ್ಯ ಕಾಳಜಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವತಿಯಿಂದ ಬರುವ 1ನೇ ಮೇ 2025 ರಿಂದ 15ನೇ ವರೆಗೆ 2025ರ ವರೆಗೆ ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಇ ಎಸ್ ಐ ಕಾರ್ಡುದಾರರು ಹಾಗೂ ಆ ಕಾರ್ಡಿನಲ್ಲಿ ನಮೂದಿತ ಎಲ್ಲ ಸದಸ್ಯರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುವದು. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಹಾಗೂ ಈ ಸಿ ಜಿ ತಪಾಸಣೆಗಳನ್ನು ಉಚಿತವಾಗಿ ತಪಾಸಣೆ ಮಾಡಿ ತಜ್ಞ ವೈದ್ಯರ ಸಮಾಲೋಚನೆಯನ್ನು ಉಚಿತವಾಗಿ ನೀಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಇ ಎಸ್ ಐ ಕಾರ್ಡುದಾರರು ಶಿಬಿರಕ್ಕೆ ಬರುವ ಮೊದಲು 8550887777, 0831-2413777 ದೂರವಾಣಿ ಸಂಖ್ಯೆಗಳ ನೋಂದಣಿ ಮಾಡಿಕೊಳ್ಳಬೇಕು ಮತ್ತು ಆಸ್ಪತ್ರೆಗೆ ಬರುವಾಗ ತಪ್ಪದೇ ತಮ್ಮ ಇ ಎಸ್ ಐ ಕಾರ್ಡನ್ನು ತಪ್ಪದೇ ತರಬೇಕು ಹಾಗೂ ಅವರ ಕುಟುಂಬದ ಸದಸ್ಯರಿಗೆ ರಿಯಾಯತಿ ದರದಲ್ಲಿ ಇನ್ನುಳಿದ ತಪಾಸಣೆಗಳನ್ನು ನೀಡಲಾಗುವದು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಪ್ರಶಾಂತ ದೇಸಾಯಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.