ಲೋಕದರ್ಶನ ವರದಿ
ಉಚಿತ ಕಿವಿ ತಪಾಸಣೆ ಶಿಬಿರ ಕಾರ್ಯಕ್ರಮ
ಬಳ್ಳಾರಿ 17: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಸರಳಾದೇವಿ ಸತೀಶ್ಚಂದ್ರ ಅಗರಾ್ವಲ್ ಪ್ರಥಮ ದರ್ಜೇ ಕಾಲೇಜು ಮತ್ತು ಒರೇವಾ ಸಂಸ್ಥೆ, ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:17 ರಂದು ಉಚಿತ ಕಿವಿ ತಪಾಸಣೆ ಶಿಬಿರ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾಽಽ.ಎಸ್.ಜೇ.ವಿ.ಮಹಿಪಾಲ್, ಉಪ ಸಭಾಪತಿ, ರೆಡ್ ಕ್ರಾಸ್ ಸಂಸ್ಥೆ, ಇವರು ಉಪಸ್ಥಿತರಿದ್ದರು. ಇವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಅತೀಯಾದ ಶಬ್ದವಾಗುವ ಉಪಕರಣಗಳನ್ನು ಬಳಸುತ್ತ ಈಗಿನ ಜನರಿಗೆ ತೊಂದರೆ ಉಂಟಾಗಿರುತ್ತದೆ. ಅದ್ದರಿಂದ ಮೊಬೈಲ್ ಮತ್ತು ಇತ್ಯಾದಿ ಉಪಕರಣಗಳು ಮಿತಿಯಾಗಿ ಬಳಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎ ಕಾಲೇಜಿನ ಜಿ.ಪ್ರಹ್ಲಾದ್ ಚೌದರಿ, ಪ್ರಂಶೂಪಾಲರು, ತಮ್ಮ ಕಾಲೇಜಿನಲ್ಲಿ ರೆಡ್ ಕ್ರಾಸ್ ಸಂಸ್ಥೇಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಹಳ ಸಂತೋಶದ ವಿಷಯವಾಗಿದೆ ಎಂದು ತಿಳಿಸಿದರು. ಎಂ.ಎ.ಷಕೀಬ್, ಕಾರ್ಯದರ್ಶಿ. ಬಿ.ದೇವಣ್ಣ, ಕೋ-ಆರಿ್ಡನೇಟರ್, ಬ್ಲಡ್ ಡೊನೇಷನ್ ಕಮಿಟಿ. ಎಂ.ಎನ್.ನಿಸಾರ್ ಅಹಮದ್, ಒರೇವಾ ಸಂಸ್ಥೆ, ಬಳ್ಳಾರಿ. ಜಯಶ್ರೀ.ಬಿ.ಕೆ, ಸದಸ್ಯರು. ಪಲ್ಲವಿ. ಯುತ್ ರೆಡ್ ಕ್ರಾಸ್ ಕೋ-ಆರಿ್ಡನೇಟರ್, ಸರಳಾ ದೇವಿ ಕಾಲೇಜು ಮತ್ತು ಸುಮಾರು 100 ಜನ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಕಿವಿ ತಪಾಸಣೆ ಕಾರ್ಯಕ್ರಮ ನಡೆಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಬಜರಂಗ್ ಶರ್ಮ, ಪಿ.ವಾಸು ಮತ್ತು ಶಮೀಮ್ ಜಕಾಲಿ ಇವರು ಉಪಸ್ಥಿತರಿದ್ದರು.