ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

ಸಿದ್ದಾಪುರ, 8: ಸೇವಾ ಸಹಕಾರಿ ಸಂಘ, ಇತರೆ ಸಂಘಗಳು ಕೇವಲ ಸಾಲ ಕೊಡುವುದು ಕಾರ್ಯಕ್ರಮಕ್ಕೆ ಸೀಮಿತವಾಗಿರದೆ ರೈತರ, ಬಡವರ, ಮಹಿಳೆಯರ, ಮಕ್ಕಳ ಆರೋಗ್ಯದ ಬಗ್ಗೆ ಖಾಳಜಿ ಹೊಂದಿರುವುದು ಮುಖ್ಯವಾಗಿದೆ. ನಮ್ಮ ಆಸ್ಪತ್ರೆ ಸಹಕಾರದೊಂದಿಗೆ ಮಾಡುವ ಈ ಶಿಬಿರ ಪ್ರಯೋಜನ ಅವಶ್ಯಕತೆ ಇರುವ ಎಲ್ಲರೂ ಉಪಯೋಗಿಸಿಕೊಳ್ಳಬೇಕು ಎಂದು ಮಂಗಳೂರಿನ ಕೆ. ಎಸ್ ಹೆಗಡೆ ಆಸ್ಪತ್ರೆ ಇಒಖಿ ತಜ್ಞ ಡಾ|| ವಾದೀಶ ಭಟ್ಟ್  ಹೇಳಿದರು. 

ಅವರು ಗ್ರೀನ್ ವ್ಯಾಲಿ ಆಗ್ಯರ್ಾನಿಕ್ ಸ್ಪೈಸಸ್, ಲಯನ್ಸ್ ಕ್ಲಬ್ ಹಾಗೂ ಸೇವಾ ಸಹಕಾರಿ ಸಂಘ ಬಿಳಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ "ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು"  ಉದ್ಘಾಟಿಸಿ ಮಾತನಾಡಿದರು. 

ಶ್ರೀಮತಿ ಸುಲೋಚನಾ ಶಾಸ್ತ್ರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್.ಗೌಡರ್ ಪ್ರಸ್ತಾವಿಕವಾಗಿ ಮಾತನಾಡಿದರು. ಮಾಡಿದರು. 

ಡಾ|| ಎಂ.ಪಿ.ಶೆಟ್ಟಿ, ಆರ್.ಟಿ.ಹೆಗಡೆ,ಆದಶರ್್ ಪೈ, ಡಾ|| ವಿಜ್ವಲ ಪೈ, ಡಾ|| ಪತಂಜಲಿ ಶಮರ್ಾ ಮಾತನಾಡಿದರು. ಸೇವಾ ಸಹಕಾರಿ ಸಂಘ ಬಿಳಗಿಯ ನಿದರ್ೇಶಕರು ಹಾಗೂ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು. ಈ ಶಿಬಿರಕ್ಕೆ ಸ್ತ್ರೀ ಶಕ್ತಿ ಸಂಘ ಮತ್ತು ಆಶಾ ಕಾರ್ಯಕರ್ತರು ಹಾಗೂ ನಿವೃತ್ತ ನೌಕರ ಸಂಘದವರು, ಯುವಕ ಸಂಘದ ಸದಸ್ಯರು ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ 800 ಜನರು ಫಲಾನುಭವಿಗಳು ಪ್ರಯೋಜನ ಪಡೆದರು.ರಾಘವೇಂದ್ರ ಶಾಸ್ತ್ರಿ ಸರ್ವರನ್ನೂ ಸ್ವಾಗತಿಸಿದರು.  ವಿನೋದಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು ಶೇಷಗಿರಿ ಭಟ್ಟ ವಂದಿಸಿದರು. 

ಶಿಬಿರದ ನಂತರ ಸಾವಯವ ಕೃಷಿ ಅಳವಡಿಕೆ ಕೃಷಿಯಲ್ಲಿ ಆರೋಗ್ಯ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನೀಡಲಾಯಿತು.