ವಿಜಯಪುರ, 29 : ಇಂಡಿ ತಾಲೂಕಿನ ತಾಂಬಾದ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಜಿಲ್ಲಾ ಭಾರತೀಯ ವೈದ್ಯಕೀಯ ಸಂಘ, ಶ್ರೀ ಬಿ.ಎಮ್.ಪಾಟಿಲ್ ಮೆಡಿಕಲ್ ಕಾಲೇಜ್,ಆಲ್ ಅಮಿನ ಮೆಡಿಕಲ್ ಕಾಲೇಜ್,ಜಿಲ್ಲಾ ಆರೂಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗುಡ್ಡೋಡಗಿ ಫಾಮರ್ಾ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗಗ್ಯ ತಪಾಸಣಾ ಶಿವಿರ ಹಮ್ಮಿಕೊಳ್ಳಲಾಗಿತ್ತು.
ಶಿರಶ್ಯಾಡದ ಶ್ರೀ ಅಭಿನವ ಮುರಘೇಂದ್ರ ಶಿವಾಚಾರ್ಯರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂಥ ಆರೋಗ್ಯ ಶಿಬಿರ ಏರ್ಪಡಿಸುವುದರಿಂದ ಗ್ರಾಮೀಣ ಜನತೆಗೆ ತುಂಬಾ ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಆರೂಗ್ಯ ಅಧಿಕಾರಿ ಮಹೇಂದ್ರ ಕಾಪ್ಸೆ ಮಾತನಾಡಿ, ರೋಗ ತಡೆಗಟ್ಟುವ ವಿಧಾನ ಹಾಗೂ ಚಿಕಿತ್ಸೆಯ ಬಗ್ಗೆ ವಿವರಣೆ ನೀಡಿದರು,
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಶ್ರೀಶೈಲ್ ತರಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಆರೂಗ್ಯ ಶಿಬಿರಗಳನ್ನು ಆಯೋಜಿಸುವದು ಅತ್ಯವಶ್ಯಕವಾಗಿದೆ ಎಂದರು.
ಶಿಬಿರದಲ್ಲಿ 800ಕ್ಕೂ ಹೆಚ್ಚು ಜನರಿಗೆ ಆರೂಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು. ಗ್ರಾಮದ ಹಿರಿಯ ಮುಖಂಡರಾದ ಜಿ.ವೈ.ಗೋರನಾಳ ಗ್ರಾ.ಪಂ ಅಧ್ಯಕ್ಷ ಗುರಸಂಗಪ್ಪಾ ಬಾಗಲಕೋಟ, ಡಿ ಎಸ್ ಗುಡ್ಡೋಡಗಿ, ತಾ.ಪಂ ಸದಸ್ಯ ಪ್ರಕಾಶ ಮುಂಜಿ ಉಪಸ್ಥಿತರಿದ್ದರು.
ಡಾ.ಶರಣಪ್ಪ ಕಟ್ಟಿ, ಡಾ.ಗಿರೀಶ ಕಲ್ಲೋಳ್ಳಿ ಸೇರಿದಂತೆ ಹೃದಯ ರೋಗ ತಜ್ಞರು,ಸ್ತ್ರೀರೋಗ ತಜ್ಞರು,ಏಲವು ಕೀಲುಗಳ ತಜ್ಞರು, ದಂತ ವೈದ್ಯರು,ಮೂತ್ರರೋಗ ತಜ್ಞರು, ಚಿಕ್ಕಮಕ್ಕಳ ತಜ್ಞರು,ಕಿವಿ ಮೂಗು ಗಂಟಲು ತಜ್ಞರು, ಚರ್ಮರೋಗ ತಜ್ಞರು,ನೇತ್ರ ತಜ್ಞರು ಸೇರಿದಂತೆ 36ಕ್ಕೂ ಹೆಚ್ಚು ತಜ್ಙ ವೈದ್ಯರತಂಡದವರು ಶಿಬಿರವನ್ನು ನಡೆಸಿಕೊಟ್ಟರು.
ಲಕ್ಷ್ಮೀ ಪ್ರಾಥರ್ಿಸಿದರು ಜಿ.ವೈ.ಗೋರನಾಳ ಸ್ವಾಗತ್ತಿಸಿದರು. ಡಾ.ಗಿರೀಶ ಕಲ್ಲೋಳ್ಳಿ ವಂದಿಸಿದರು.