ಲೋಕದರ್ಶನವರದಿ
ಬ್ಯಾಡಗಿ:ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಸ್ಥಳೀಯ ಪುರಸಭೆ ಮಾಜಿ ಸದಸ್ಯ ನಾರಾಯಣಪ್ಪ ಕನರ್ೂಲ (73) ಇವರು ಅಪಘಾತ ಪ್ರಕರಣವೊಂದರಲ್ಲಿ ಬುಧವಾರ ನಿಧನರಾಗಿದ್ಧಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಮುಕ್ತಿಧಾಮದಲ್ಲಿ ನೆರವೇರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ, ಮೃತರಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರರು, ಐವರು ಪುತ್ರಿಯರಿದ್ದಾರೆ.
ಪಟ್ಟಣದಲ್ಲಿ ನಿರ್ಮಾನಿಸಲು ಉದ್ದೇಶಿಸಿರುವ ಸವಿತಾ ಸಮಾಜದ ಸಮುದಾಯ ಭವನಕ್ಕೆ ಅಗತ್ಯ ಅನುದಾನಕ್ಕಾಗಿ ಮನವಿ ಸಲ್ಲಿಸಲು ತೆರಳುವ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ಬಳಿ ಜನರನ್ನು ಸಾಗಿಸುತ್ತಿದ್ದ ಆಟೊವೊಂದು ಅಪ್ಪಳಿಸಿದೆ, ತೀವ್ರ ಗಾಯಗೊಂಡ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.