ಲೋಕದರ್ಶನವರದಿ
ರಾಣೇಬೆನ್ನೂರು: ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಸಾಲದ ಬಾಧೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವ ರೈತ ಪ್ರಭು ಸಿದ್ದಪ್ಪ ಮಾಕನೂರ ಇವರ ಮನೆಗೆ ಸೋಮವಾರ ಸಂಜೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಮೃತ ಕುಟುಂಬಸ್ಥರಿಗೆ ಸಾಂತ್ವನ ನೀಡಿ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರದ ಹಣ ವಿತರಿಸಿದರು.
ಮನುಷ್ಯ ಜೀವನವನ್ನು ಎದುರಿಸುವ ಸಂಬಂಧ ಆ ದೇವರು ಇಂತಹ ಕಷ್ಟಗಳ ಪರೀಕ್ಷೆಯನ್ನು ಮಾಡುತ್ತಿರುತ್ತಾನೆ. ಅಂತಹ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸುವ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು. ಮೃತ ರೈತ ಪ್ರಭುನ ಕುಟುಂಬವು ಬಹಳಷ್ಟು ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿದೆ. ಸ್ವಂತ ಜಮೀನು ಇಲ್ಲದೆ ಬೇರೆಯವರ ಹಾಗೂ ಸಂಬಂಧಿಕರ ಜಮೀನುಗಳನ್ನು ಲಾವಣಿ ಪಡೆದುಕೊಂಡು ಕೃಷಿ ಮಾಡುತ್ತಿದ್ದರು. ಆದರೂ ಸಹ ಸುಮಾರು 8 ಲಕ್ಷ ರೂ ದಷ್ಟು ಸಾಲವನ್ನು ಪಡೆದಿದ್ದರೆಂದು ಅವರ ಕುಟುಂಬಸರಿಂದ ವಿವರವಾದ ಮಾಹಿತಿ ಪಡೆದಿರುವೆ ಎಂದರು.
ಸ್ವಂತ ಜಮೀನು ಇಲ್ಲದೇ ಸಕರ್ಾರದಿಂದ ಪರಿಹಾರ ನೀಡಲು ಕಾನೂನಿನ ತೊಡಕು ಇದ್ದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಲು ಮುಂದಾಗಬೇಕು ಎಂದು ತಹಶೀಲ್ದಾರ ಸಿ.ಎಸ್.ಕುಲಕಣರ್ಿ ಅವರಿಗೆ ವಿನಂತಿಸಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಜೊತೆಗೆ ಮೃತ ಪ್ರಭುನ ಕುಟುಂಬಸ್ಥರು ಧೃತಿಗೆಡದೆ ಧೈರ್ಯದಿಂದ ಜೀವನ ಸಾಗಿಸಬೇಕೆಂದು ಸಾಂತ್ವನ ನೀಡಿದರು.
ಇದಕ್ಕೂ ಮೊದಲು ಹಿರೇಕೆರೂರಿನಿಂದ ಕೋಡ ಮಾರ್ಗವಾಗಿ ತಾಲೂಕಿನ ಹಲಗೇರಿ ಮತ್ತು ಇಟಗಿ ಗ್ರಾಮಕ್ಕೆ ಆಗಮಿಸಿದಾಗ ರೈತರ ಮನವಿ ಸ್ವೀಕರಿಸಿದರು. ಅನಂತರ ಸಕ್ರಪ್ಪ ಹಾದಿಮನಿ ಹೊಲಕ್ಕೆ ಭೇಟಿ ನೀಡಿ ಬೆಳೆ ವಿಕ್ಷಿಸಿದರು. ಮಾಜಿ ಶಾಸಕ ಕೆ.ಎನ್.ಕೋನರಡ್ಡಿ, ರವೀಂದ್ರಗೌಡ ಪಾಟೀಲ, ಶಿವಪುತ್ರಪ್ಪ ಮಲ್ಲಾಡದ, ಹನುಮಂತಪ್ಪ ಕಬ್ಬಾರ, ಎಸ್.ಟಿ.ಹಿರೇಮಠ, ಸುರೇಶಪ್ಪ ಗರಡಿಮನಿ, ಕೃಷ್ಣಮೂತರ್ಿ ಲಮಾಣಿ, ಭೀಮಪ್ಪ ಹೂಲಿಗೆನಹೊಳಿ, ಸಿದ್ದಪ್ಪ ಮುದುಕನಗೌಡ, ಬಸವಂತಪ್ಪ ಬಣಕಾರ, ಚನ್ನಪ್ಪ ಬಣಕಾರ, ಎಂ.ಆರ್.ಹಲಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.