ಲೋಕದರ್ಶನ ವರದಿ
ಶಿಗ್ಗಾವಿ : ಹಾವೇರಿ ಜಿ. ಹೆಚ್. ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಸವಣೂರ ತಾಲೂಕ ಮಣ್ಣೂರ ಗ್ರಾಮದ ವಿದ್ಯಾಥರ್ಿನಿ ರೇಣುಕಾ ಪಾಟೀಲ ಇವಳನ್ನು ದುಷ್ಕಮರ್ಿಗಳು ಬರ್ಬರವಾಗಿ ಹೆತ್ಯಗೈದು ವರದಾ ನದಿ ಬಳಿ ಸುಟ್ಟು ಹಾಕಿರುವ ಕೃತ್ಯವನ್ನು ಬಿಜೆಪಿ ಮುಖಂಡ ಮಾಜಿ ಸಂಸದ ಮಂಜುನಾಥ ಕುನ್ನೂರ ತೀವ್ರವಾಗಿ ಖಂಡಿಸಿದ್ದಾರೆ.
ಶಾಂತಿ-ಸೌಹಾರ್ಧತೆಗೆ ಹೆಸರಾಗಿರುವ ಹಾವೇರಿ ನೆಲದಲ್ಲಿ ಇಂಥ ಕೃತ್ಯ ನಡೆದಿರುವುದು ಆಘಾತಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿ ವಿದ್ಯಾಥರ್ಿನಿಯ ಕುಟುಂಬಸ್ತರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಪ್ರಾಥರ್ಿಸಿದ ಅವರು ಜಿಲ್ಲೆಯಲ್ಲಿ ಇಂಥ ಕೃತ್ಯಗಳು ಮರುಕಳಿಸದಂತೆ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಪೋಲಿಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಇದಕ್ಕೆ ವಿಶೇಷ ಕಾನೂನು ರೂಪಿಸುವ ಮೂಲಕ ವಿದ್ಯಾಥರ್ಿನಿಯರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.