ಫಾರ್ಮ್ ನಂಬರ್ 3, ಬೇಡಿಕೆ ಈಡೇರಿಕೆಗೆ ಬೃಹತ ಪ್ರತಿಭಟನಾ ಮೆರವಣಿಗೆ: ತಹಶೀಲ್ದಾರರಿಗೆ ಮನವಿ
ಮುಂಡಗೋಡ 18: ಪಟ್ಟಣದ ಇಂದಿರಾನಗರ, ಆನಂದ ನಗರ, ಗಣೇಶ ನಗರ ಹಾಗೂ ಗಾಂಧಿನಗರ ನಿವಾಸಿಗಳಿಗೆ ಫಾರ್ಮ್ ನಂಬರ್ 3 ನೀಡುವಂತೆ ಆಗ್ರಹಿಸಿ, ಪಟ್ಟಣದ ನಿವಾಸಿಗಳು ಪ್ರವಾಸಿ ಮಂದಿರದಿಂದ ಪಟ್ಟಣ ಪಂಚಾಯತ್ ಹಾಗೂ ತಹಶೀಲ್ದಾರ್ ಕಚೇರಿವರೆಗೆ ಬೃಹತ ಪ್ರತಿಭಟನಾ ಮೆರವಣಿಗೆ ನಡೆಸಿ ಅರಣ್ಯ ಅತಿಕ್ರಮಣ ನಿವೇಶನಗಳ ಹಕ್ಕು ಹೋರಾಟ ಸಂಘದವರು ಮಂಗಳವಾರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮುಂಡಗೋಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ, ಆನಂದ ನಗರ, ಗಣೇಶ ನಗರ ಹಾಗೂ ಗಾಂಧಿನಗರ ನಿವಾಸಿಗಳು ಹಲವು ದಿನಗಳದ ಬೇಡಿಕೆ ಯಾಗಿದ್ದು ಬೇಡಿಕೆ ಹದಿನೈದು ದಿನಗಳಲ್ಲಿ ಫಾರ್ಮ್ ನಂಬರ್ 3 ನೀಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಪಟ್ಟಣ ಪಂಚಾಯಿತಿ ಎದುರು ಬೇಡಿಕೆ ಈಡೇರದಿದ್ದಲ್ಲಿ "ಉಗ್ರ ಹೋರಾಟ" ಉಂಟು ಎಂದ ಜನರು. ಎಚ್ಚರಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಸುಧಾ ಭೋವಿ ಮಾತನಾಡಿ, ’ನಾಲ್ಕು ವಾರ್ಡಿನ ಜನರ ಭಾವನೆಗೆ ಸೂಕ್ತವಾಗಿ ಸ್ಪಂದಿಸಲಾಗುವುದು. ಈವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಸಮಿತಿಯ ಸಭೆಯನ್ನು ಕರೆದು, ಸರ್ವ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಈ ವೇಳೆಯಲ್ಲಿ ಅರಣ್ಯ ಅತಿಕ್ರಮಣ ನಿವೇಶನಗಳ ಹಕ್ಕು ಹೋರಾಟ ಅಧ್ಯಕ್ಷ ಅಲ್ಲಿಖಾನ್ ಸಂಘದ ಪಠಾಣ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹ್ಮದಜಾಫರ ಹಂಡಿ, ವಿಶ್ವನಾಥ ಪವಾಡಶೆಟ್ಟರ, ಮುಖಂಡರಾದ ರಾಜು ಭೋವಿ, ವಿಠಲ ಬಾಳಂಬೀಡ, ವೆಂಕಟೇಶ ತಳವಾರ, ಶಿವು ಮತ್ತಿಗಟ್ಟಿ, ಹುಲಗಪ್ಪ ಭೋವಿವಡ್ಡರ, ಬಸವರಾಜ ಹಳ್ಳಮ್ಮನವರ, ಲಕ್ಷ್ಮೀ ನಾಯ್ಕ ಹಾಗೂ ಉಪಸ್ಥಿತರಿದ್ದರು.